ನನಗೆ 89 ವರ್ಷ ಆಗಿದ್ದರೂ ಹೋರಾಟ ಮಾಡುತ್ತೇನೆ: ಹೆಚ್.ಡಿ. ದೇವೇಗೌಡ

| Updated By: preethi shettigar

Updated on: Nov 02, 2021 | 3:38 PM

ಸಿಂದಗಿಯಲ್ಲಿ ಕಾಂಗ್ರೆಸ್​ನವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್​ಗಿಂತ ಬಿಜೆಪಿ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಪ್ರತಿ ವೋಟ್​ಗೆ 10 ಸಾವಿರ ರೂ. ಕೊಟ್ಟಿದ್ದಾರೆಂದು ಚರ್ಚೆಯಿದೆ. ಕಾಂಗ್ರೆಸ್ ಪಕ್ಷದವರೂ ಚೆನ್ನಾಗಿ ಹಣ ಖರ್ಚುಮಾಡಿದ್ದಾರೆ ಎಂದು ಹೇಳಿದ್ದಾರೆ.

ನನಗೆ 89 ವರ್ಷ ಆಗಿದ್ದರೂ ಹೋರಾಟ ಮಾಡುತ್ತೇನೆ: ಹೆಚ್.ಡಿ. ದೇವೇಗೌಡ
ಎಚ್​.ಡಿ.ದೇವೇಗೌಡ
Follow us on

ದೆಹಲಿ: ಬರೀ ಕಾಂಗ್ರೆಸ್, ಬಿಜೆಪಿ ಅಂದರೆ ನಾವೆಲ್ಲಿ ಹೋಗಬೇಕು. ದೇವೆಗೌಡ ಇನ್ನು ಜೀವಂತ ಬದುಕಿದ್ದಾನೆ. ನನಗೆ 89 ವರ್ಷ ಆಗಿದ್ದರೂ ಹೋರಾಟ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ, ಹೋರಾಟ ಮಾಡುತ್ತೇವೆ ಎಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ ಹೇಳಿದ್ದಾರೆ.

ಬಳಿಕ ಸಿಂದಗಿ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಅವರು, ಸಿಂದಗಿಯಲ್ಲಿ ಕಾಂಗ್ರೆಸ್​ನವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್​ಗಿಂತ ಬಿಜೆಪಿ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಪ್ರತಿ ವೋಟ್​ಗೆ 10 ಸಾವಿರ ರೂ. ಕೊಟ್ಟಿದ್ದಾರೆಂದು ಚರ್ಚೆಯಿದೆ. ಕಾಂಗ್ರೆಸ್ ಪಕ್ಷದವರೂ ಚೆನ್ನಾಗಿ ಹಣ ಖರ್ಚುಮಾಡಿದ್ದಾರೆ ಎಂದು ಹೇಳಿದ್ದಾರೆ.

ಎಂ.ಸಿ.ಮನಗೂಳಿ ಎಸ್​ಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಜೆಡಿಎಸ್​ಗೆ ಬಂದು ಗೆದ್ದರು, ಅವರನ್ನು ಮಂತ್ರಿ ಮಾಡಿದ್ದೆವು. ಸಿಂದಗಿಯಲ್ಲಿ ಎಂ.ಸಿ.ಮನಗೂಳಿ, ನನ್ನ ಪ್ರತಿಮೆ ಮಾಡಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ನಾಜಿಯಾ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಸಿಂದಗಿ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದಭಾವವಿಲ್ಲ. ಲಿಂಗಾಯತ ಸಮುದಾಯ ಜೆಡಿಎಸ್​ಗೆ ವೋಟ್​ ಹಾಕಿಲ್ಲ. ಹಾಗಾಗಿ ನಾಜಿಯಾ ಅಂಗಡಿ ಕುಟುಂಬಕ್ಕೆ ಟಿಕೆಟ್​ ನೀಡಿದ್ದೆವು ಎಂದು  ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

ನಾನು ಇದುವರೆಗೂ ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ: ಹೆಚ್.ಡಿ.ದೇವೇಗೌಡ
ನಾನು ಇದುವರೆಗೂ ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ. ಆದರೆ ಸಿಂದಗಿ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದೆ. ವಿಜಯಪುರ ಜಿಲ್ಲೆ ಸಿಂದಗಿ ಕ್ಷೇತ್ರದ ಜನru ಸಂಕಷ್ಟದಲ್ಲಿದ್ದರು. ಕೂಲಿಗಾಗಿ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು. ಆ ಭಾಗದ ಜನರಿಗೆ ಏನು ಮಾಡಿದ್ದೇನೆಂದು ಜನರೇ ಹೇಳುತ್ತಾರೆ ಎಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯೆ
ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್‌ಗೆ ಬಂದರೇ ಅವರೇ ಅಭ್ಯರ್ಥಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ನವರು ಅಭ್ಯರ್ಥಿ ಘೋಷಿಸಿದರೆ ಸುಮ್ಮನಿರಬೇಕಾ? ನಾವು ಪರ್ಯಾಯ ಅಭ್ಯರ್ಥಿಯನ್ನು ಹುಡುಕಬೇಕಾಗುತ್ತದೆ ಎಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
Sindagi By Election Winner: ಸಿಂದಗಿ ಅಸೆಂಬ್ಲಿ ಗದ್ದುಗೆ ಬಿಜೆಪಿಗೆ, ರಮೇಶ ಭೂಸನೂರ ಜಯಭೇರಿ- ಫಲಿತಾಂಶ ಅಧಿಕೃತ ಘೋಷಣೆ ಬಾಕಿ

Hangal By Election Winner: ಹಾನಗಲ್​ನಲ್ಲಿ ಬಿಜೆಪಿಗೆ ಹೀನಾಯ ಸೋಲು; ಕಾಂಗ್ರೆಸ್​​ನ ಶ್ರೀನಿವಾಸ ಮಾನೆಗೆ ಮಣೆ ಹಾಕಿದ ಮತದಾರ?

Published On - 3:31 pm, Tue, 2 November 21