Dhanteras 2021 ಧನ್ತೇರಸ್ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
Narendra Modi ‘ಧನ್ತೇರಸ್ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಧನ್ತೇರಸ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. ಧನ್ತೇರಸ್ ದೀಪಾವಳಿ ಹಬ್ಬಗಳ ಆರಂಭವನ್ನು ಸೂಚಿಸುತ್ತದೆ. ಇದು ಚಿನ್ನ ಅಥವಾ ಪಾತ್ರೆಗಳನ್ನು ಖರೀದಿಸಲು ಮಂಗಳಕರ ದಿನವೆಂದು ಪರಿಗಣಿಸುತ್ತಾರೆ.ಈ ದಿನವನ್ನು ಆಯುರ್ವೇದದ ದೇವರಾದ ಧನ್ವಂತ್ರಿಯ ಜನ್ಮದಿನವಾಗಿಯೂ ಆಚರಿಸುತ್ತಾರೆ.
सभी देशवासियों को धनतेरस की शुभकामनाएं।
Greetings to everyone on the special occasion of Dhanteras.
— Narendra Modi (@narendramodi) November 2, 2021
‘ಧನ್ತೇರಸ್ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
समस्त देशवासियों को धनतेरस के पावन पर्व की हार्दिक शुभकामनाएं। भगवान धन्वंतरि सभी के जीवन में सुख, समृद्धि व उत्तम स्वास्थ्य प्रदान करें। pic.twitter.com/BhQllWhbLt
— Amit Shah (@AmitShah) November 2, 2021
ನಾಡಿನ ಸಮಸ್ತ ಜನತೆಗೆ ಧನ್ತೇರಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಧನ್ವಂತರಿ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸಲಿ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Dhanteras 2021: ನವೆಂಬರ್ 2ರ ಧನ್ತೇರಸ್ನಂದು ಚಿನ್ನ ಖರೀದಿಗೆ ಶುಭ ಮುಹೂರ್ತದ ಮಾಹಿತಿ ಇಲ್ಲಿದೆ
Published On - 1:57 pm, Tue, 2 November 21