ಸರ್ಕಾರಕ್ಕೆ ಬೇಕಾದಂತೆ ಆರ್​ಬಿಐ ನಡೆಯಬೇಕಿತ್ತು: ಯುಪಿಐ ಅವಧಿಯ ಪರಿಸ್ಥಿತಿ ತೆರೆದಿಟ್ಟ ಡಿ ಸುಬ್ಬಾರಾವ್

Ex RBI Governor Subbarao in his book "Just a Mercenary?: Notes from My Life and Career" ಆರ್​ಬಿಐನ ಮಾಜಿ ಗವರ್ನರ್ ಡಿ ಸುಬ್ಬಾರಾವ್ ಅವರು ತಮ್ಮ ಆತ್ಮಕಥನ ಪುಸ್ತಕವೊಂದರಲ್ಲಿ ಯುಪಿಐ ಅವಧಿಯಲ್ಲಿನ ಕೆಲ ವಿದ್ಯಮಾನಗಳ ಬಗ್ಗೆ ಕುತೂಹಲಕಾರಿ ಮಾಹಿತಿ ತೆರೆದಿಟ್ಟಿದ್ದಾರೆ. ಅಂದಿನ ಹಣಕಾಸು ಸಚಿವರುಗಳು ಆರ್​ಬಿಐಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡುತ್ತಿರಲಿಲ್ಲವಂತೆ. ಪರಿಸ್ಥಿತಿ ಆಶಾದಾಯಕವಾಗಿದೆ ಎಂದು ಬಿಂಬಿಸಲು ಆರ್ಥಿಕ ಬೆಳವಣಿಗೆ ದರ ಹೆಚ್ಚೆಂದು ಅಂದಾಜಿಸುವಂತೆ ಆರ್​ಬಿಐ ಮೇಲೆ ಒತ್ತಡ ಹಾಕುತ್ತಿದ್ದರಂತೆ. ಬಡ್ಡಿದರ ಕಡಿಮೆ ಮಾಡಲು ತಿಳಿಸುತ್ತಿದ್ದರಂತೆ. ಹಾಗಂತ ಸುಬ್ಬಾರಾವ್ ಬರೆದುಕೊಂಡಿದ್ದಾರೆ.

ಸರ್ಕಾರಕ್ಕೆ ಬೇಕಾದಂತೆ ಆರ್​ಬಿಐ ನಡೆಯಬೇಕಿತ್ತು: ಯುಪಿಐ ಅವಧಿಯ ಪರಿಸ್ಥಿತಿ ತೆರೆದಿಟ್ಟ ಡಿ ಸುಬ್ಬಾರಾವ್
ಡಿ ಸುಬ್ಬಾರಾವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2024 | 6:47 PM

ನವದೆಹಲಿ, ಏಪ್ರಿಲ್ 16: 2014ಕ್ಕೆ ಮುಂಚೆ ಯುಪಿಐ ಅವಧಿಯಲ್ಲಿ ಆರ್​ಬಿಐಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಆರ್​ಬಿಐ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಮಾಜಿ ಆರ್​ಬಿಐ ಗವರ್ನರ್ ಡಿ ಸುಬ್ಬಾರಾವ್ (D Subbarao) ಆರೋಪಿಸಿದ್ದಾರೆ. 2008ರಿಂದ 2013ರವರೆಗೆ ಆರ್​ಬಿಐ ಗವರ್ನರ್ ಆಗಿದ್ದ ದುವ್ವೂರಿ ಸುಬ್ಬಾರಾವ್ ಅವರು ‘ಜಸ್ಟ್ ಎ ಮರ್ಸನರಿ?: ನೋಟ್ಸ್ ಫ್ರಂ ಮೈ ಲೈಫ್ ಅಂಡ್ ಕರಿಯರ್’ (Just a Mercenary?: Notes from My Life and Career) ಎಂಬ ಆತ್ಮಕಥನ ಪುಸ್ತಕದಲ್ಲಿ ಈ ವಿಚಾರಗಳನ್ನು ಸ್ಮರಿಸಿದ್ದಾರೆ. ಇವರು ಆರ್​ಬಿಐ ಗವರ್ನರ್ ಆಗಿದ್ದಾಗ ಯುಪಿಐ ಆಡಳಿತ ಇತ್ತು. ಇವರು ಇಬ್ಬರು ಹಣಕಾಸು ಸಚಿವರನ್ನು ಕಂಡಿದ್ದಾರೆ. ಪ್ರಣಬ್ ಮುಖರ್ಜಿ ಮತ್ತು ಪಿ ಚಿದಂಬರಂ ಅವರ ಕಾರ್ಯವೈಖರಿಯನ್ನು ಇವರು ಬಲ್ಲವರಾಗಿದ್ದರು. ಆರ್​ಬಿಐ ಸ್ವಾಯತ್ತತೆ ಎಷ್ಟು ಮುಖ್ಯ ಎಂಬುದು ಅಂದಿನ ಸರ್ಕಾರಕ್ಕೆ ತಿಳಿದಿರಲಿಲ್ಲ ಅಥವಾ ಆ ಸೂಕ್ಷ್ಮತೆ ಇರಲಿಲ್ಲ ಎಂದು ಸುಬ್ಬಾರಾವ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಸರ್ಕಾರಕ್ಕೆ ಚೀರ್​ಲೀಡರ್ ಆಗಬೇಕಿತ್ತು ಆರ್​ಬಿಐ

ರೆಪೋ ದರ ಅಥವಾ ಬಡ್ಡಿದರ ಕಡಿಮೆಗೊಳಿಸಬೇಕು ಎಂದು ಆರ್​ಬಿಐ ಮೇಲೆ ಸರ್ಕಾರ ಒತ್ತಡ ಹಾಕುತ್ತಿತ್ತು. ಅಷ್ಟೇ ಅಲ್ಲ, ಕೆಲವೊಮ್ಮೆ ಆರ್​ಬಿಐ ಮಾಡಿದ್ದ ಅಂದಾಜಿಗಿಂತ ಭಿನ್ನವಾಗಿ, ಹೆಚ್ಚು ಆಶಾದಾಯಕ ಎನಿಸುವ ಹಣದುಬ್ಬರ ಮತ್ತು ಜಿಡಿಪಿ ದರವನ್ನು ನೀಡಬೇಕಿತ್ತು ಎಂದು ಮಾಜಿ ಹಣಕಾಸು ಸಚಿವಾಲಯದ ಕಾರ್ಯದರ್ಶಿಯೂ ಆದ ಸುಬ್ಬಾರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ನೋಡಿದ್ದೇವೆ: ಇವಿಎಂ ವಿರೋಧಿಗಳಿಗೆ ಸುಪ್ರೀಂ ಕೋರ್ಟ್ ಉತ್ತರ

‘ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದಾಗ ಅರವಿಂದ್ ಮಾಯಾರಾಮ್ ಹಣಕಾಸು ಕಾರ್ಯದರ್ಶಿಯಾಗಿದ್ದರು. ಕೌಶಿಕ್ ಬಸು ಆರ್ಥಿಕ ಸಲಹೆಗಾರರಾಗಿದ್ದರು. ಆರ್​ಬಿಐ ಮಾಡಿದ್ದ ಅಂದಾಜುಗಳನ್ನು ಅವರು ಒಮ್ಮೆ ಆಕ್ಷೇಪಿಸಿದ್ದರು. ಹಣದುಬ್ಬರ ಕಡಿಮೆ ಆಗಬಹುದು, ಆರ್ಥಿಕ ಬೆಳವಣಿಗೆ ದರ ಹೆಚ್ಚಾಗಬಹುದು ಎಂಬಂತೆ ಬಿಂಬಿಸಬೇಕು ಎಂದು ತಮಗೆ ಸಲಹೆ ನೀಡಿದರು. ಮಾಯಾರಾಮ್ ಅವರಂತೂ ಒಂದು ಹೆಜ್ಮೆ ಮುಂದೆ ಹೋಗಿ, ವಿಶ್ವದೆಲ್ಲೆಡೆ ಸರ್ಕಾರ ಮತ್ತು ಸೆಂಟ್ರಲ್ ಬ್ಯಾಂಕುಗಳು ಪರಸ್ಪರ ಸಹಕಾರ ಹೊಂದಿರುತ್ತವೆ. ಆದರೆ ಭಾರತದಲ್ಲಿ ಆರ್​ಬಿಐ ಬೆನ್ನು ತೋರುತ್ತದೆ’ ಎಂದು ಸುಬ್ಬಾರಾವ್ ತಮ್ಮ ಪುಸ್ತಕದಲ್ಲಿ ಘಟನೆಯ ವಿವರ ನೀಡಿದ್ದಾರೆ.

ಈ ಪುಸ್ತಕದಲ್ಲಿ ಸುಬ್ಬಾರಾವ್ ಅವರು ಇಬ್ಬರು ಹಣಕಾಸು ಸಚಿವರ ಕಾರ್ಯವೈಖರಿ ಬಗ್ಗೆ ಕುತೂಹಲಕಾರಿ ವಿಚಾರ ಬಿಚ್ಚಿಟ್ಟಿದ್ದಾರೆ. ಚಿದಂಬಂ ಮತ್ತು ಮುಖರ್ಜಿ ಇಬ್ಬರೂ ಕೂಡ ಬಡ್ಡಿದರ ಇಳಿಸುವಂತೆ ಆರ್​ಬಿಐ ಮೇಲೆ ಒತ್ತಡ ಹಾಕುತ್ತಿದ್ದರು. ಆದರೆ, ಅದನ್ನು ಹೇಳುವ ಶೈಲಿ ಇಬ್ಬರದ್ದೂ ಭಿನ್ನವಾಗಿತ್ತು ಎನ್ನುತ್ತಾರೆ.

ಚಿದಂಬರಂ ಅವರು ವಕೀಲರು. ಅದೇ ರೀತಿ ಗಹನವಾಗಿ ವಾದ ಮುಂದಿಡುತ್ತಿದ್ದರು. ಆದರೆ, ಪ್ರಣಬ್ ಮುಖರ್ಜಿ ಪಕ್ಕಾ ರಾಜಕಾರಣಿಯಾಗಿದ್ದರು. ಮುಖರ್ಜಿ ತಮ್ಮ ಅಭಿಪ್ರಾಯವನ್ನು ತಿಳಿಸಿ, ಅದರಂತೆ ಅಧಿಕಾರಿಗಳಿಗೆ ವಾದ ಪ್ರಸ್ತುತಪಡಿಸಲು ಬಿಡುತ್ತಿದ್ದರು ಎಂದೂ ಸುಬ್ಬಾರಾವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್