AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ನೋಡಿದ್ದೇವೆ: ಇವಿಎಂ ವಿರೋಧಿಗಳಿಗೆ ಸುಪ್ರೀಂ ಕೋರ್ಟ್ ಉತ್ತರ

Supreme Court on EVM vs Ballot Paper: ಇವಿಎಂ ಮೆಷೀನ್ ಮೇಲೆ ಜನರಿಗೆ ವಿಶ್ವಾಸ ಕಡಿಮೆ ಆಗಿದೆ. ವಿವಿಪ್ಯಾಟ್​ಗಳಿಂದ ಬರುವ ಸ್ಲಿಪ್ ಅನ್ನು ಮತದಾರನು ಬ್ಯಾಲಟ್ ಬಾಕ್ಸ್​ಗೆ ಹಾಕುವಂತಹ ವ್ಯವಸ್ಥೆಯನ್ನು ತರಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿಲ್ಲ. ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂಬುದು ತಮಗೆಲ್ಲಾ ತಿಳಿದಿದೆ. ಯೂರೋಪ್​ನಲ್ಲಿ ಇರುವ ವ್ಯವಸ್ಥೆ ಭಾರತಕ್ಕೆ ಸರಿಹೊಂದಬೇಕೆಂದಿಲ್ಲ ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ನೋಡಿದ್ದೇವೆ: ಇವಿಎಂ ವಿರೋಧಿಗಳಿಗೆ ಸುಪ್ರೀಂ ಕೋರ್ಟ್ ಉತ್ತರ
ಬ್ಯಾಲಟ್ ಪೇಪರ್, ಇವಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2024 | 5:14 PM

Share

ನವದೆಹಲಿ, ಏಪ್ರಿಲ್ 16: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಂದ ಬಳಿಕ ಮತ ಎಣಿಕೆ ಪ್ರಕ್ರಿಯೆ (votes counting) ಸುಗಮಗೊಂಡಿದೆ. ಆದರೆ, ತಂತ್ರಜ್ಞಾನವನ್ನು ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳೆದ 10 ವರ್ಷಗಳಿಂದಲೂ ವಿಪಕ್ಷಗಳು ಆರೋಪಿಸುತ್ತಿವೆ. ಇವಿಎಂ ಬದಲು ಹಳೆಯ ಬ್ಯಾಲಟ್ ಬಾಕ್ಸ್ ಮತದಾನ ಪದ್ಧತಿಯನ್ನೇ ವಾಪಸ್ ತರಬೇಕೆಂಬ ಒತ್ತಾಯಗಳು ಇವೆ. ಇದೇ ವೇಳೆ, ಇವಿಎಂ ಮೆಷೀನ್​ನಲ್ಲಿ (EVM) ಮಾಡಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್​ಗಳ (VVPAT slips) ಮೂಲಕ ಪರಿಶೀಲನೆ ನಡೆಸುವಂತಹ ವ್ಯವಸ್ಥೆ ಆಗಬೇಕು ಎಂದು ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿಗಳು ಸಲ್ಲಿಕೆ ಆಗಿವೆ. ಇದರ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ (Supreme court), ಹಿಂದಿನ ಬ್ಯಾಲಟ್ ವೋಟಿಂಗ್ ವಿಧಾನದ ಲೋಪವನ್ನು ಎತ್ತಿತೋರಿಸಿದೆ.

‘ನಾವೆಲ್ಲಾ ಈಗ 60 ವರ್ಷ ವಯಸ್ಸು ದಾಟಿದವರಿದ್ದೇವೆ. ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂದು ನಮಗೆಲ್ಲಾ ಗೊತ್ತಿದೆ. ನಿಮಗೆ ಅದು ಮರೆತುಹೋಗಿರಬಹುದು, ಆದರೆ, ನಾವು ಮರೆತಿಲ್ಲ,’ ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜೀವ್ ಖನ್ನ ಹೇಳಿದ್ದಾರೆ. ಹೆಚ್ಚಿನ ಯೂರೋಪಿಯನ್ ದೇಶಗಳು ಇವಿಎಂ ಬದಲು ಬ್ಯಾಲಟ್ ಪೇಪರ್ ಮತದಾನ ವಿಧಾನವನ್ನು ಮರಳಿ ಆಯ್ಕೆ ಮಾಡಿಕೊಂಡಿರುವ ಸಂಗತಿಯನ್ನು ಉಲ್ಲೇಖಿಸಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಮುಂದಿಟ್ಟಿದ್ದ ವಾದಕ್ಕೆ ನ್ಯಾಯಮೂರ್ತಿಗಳು ಈ ಉತ್ತರ ನೀಡಿದರು.

ಇದನ್ನೂ ಓದಿ: ಚುನಾವಣಾ ಬೇಟೆ; ಜನವರಿಯಿಂದೀಚೆ 12,000 ಕೋಟಿ ರೂ ಮೌಲ್ಯದ ನಗದು ಮತ್ತಿತರ ವಸ್ತುಗಳು ಜಫ್ತಿ

ಇವಿಎಂ ವಿಧಾನದ ವಿರುದ್ಧ ಸಲ್ಲಿಸಲಾದ ಹಲವು ಅರ್ಜಿಗಳಲ್ಲಿ ಎಡಿಆರ್ (ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಒಂದು. ಎಡಿಆರ್ ಪರ ಪ್ರಶಾಂತ್ ಭೂಷಣ್ ವಕಾಲತು ವಹಿಸಿ, ಮತಪತ್ರದ ಮೂಲಕ ಮತದಾನ ಮಾಡುವ ಪದ್ಧತಿ ಮರಳಬೇಕು ಎಂದು ವಾದಿಸುತ್ತಿದ್ದರು.

‘ನಾವು ಪೇಪರ್ ಬ್ಯಾಲಟ್​ಗೆ ಮರಳಬಹುದು. ವಿವಿಪ್ಯಾಟ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಆಯ್ಕೆ. ಮೆಷಿನ್​ನಿಂದ ಹೊರಬರುವ ಪೇಪರ್ ಸ್ಲಿಪ್ ಅನ್ನು ಮತದಾರರು ಬ್ಯಾಲಟ್ ಬಾಕ್ಸ್​ಗೆ ಹಾಕಬಹುದು,’ ಎಂದು ಪ್ರಶಾಂತ್ ಭೂಷಣ್ ಅವರು ಜರ್ಮನಿಯ ಉದಾಹರಣೆ ನೀಡಿದರು.

ಮತ್ತೊಬ್ಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ಇವಿಎಂಗಳಲ್ಲಿ ಹಾಕಲಾದ ಮತಗಳನ್ನು ವಿವಿಪ್ಯಾಟ್​ಗಳೊಂದಿಗೆ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು. ಈ ವಾದವನ್ನು ನ್ಯಾಯಮೂರ್ತಿಗಳು ಪರಸ್ಕರಿಸಲಿಲ್ಲ.

ಇದನ್ನೂ ಓದಿ: ಬಿಜೆಪಿಯ ಶ್ವೇತಪತ್ರ ವೆಬ್​ಸೈಟ್​ ಮೂಲಕ ನಿಮ್ಮ ಕ್ಷೇತ್ರ ತಲುಪಿದ ಕೇಂದ್ರದ ಯೋಜನೆಗಳ ಮಾಹಿತಿ ಪಡೆಯಿರಿ

‘60 ಕೋಟಿ ವಿವಿಪ್ಯಾಟ್ ಸ್ಲಿಪ್​ಗಳನ್ನು ಎಣಿಸಬೇಕಾಗುತ್ತದೆ, ಅಲ್ಲವೇ? ಮನುಷ್ಯನೇ ಎಣಿಕೆ ಮಾಡುತ್ತಾನಾದ್ದರಿಂದ ಪಕ್ಷಪಾತಿತನ, ಮಾನವ ಸಹಜ ದೌರ್ಬಲ್ಯ ಬರಬಹುದು. ಮನುಷ್ಯನ ಹಸ್ತಕ್ಷೇಪ ಇಲ್ಲದೆ ಯಂತ್ರಗಳು ನಿಖರ ಫಲಿತಾಂಶ ಕೊಡುತ್ತವೆ. ಮೆಷೀನ್ ಅಥವಾ ಸಾಫ್ಟ್​​ವೇರ್​ನಲ್ಲಿ ಮನುಷ್ಯನ ಹಸ್ತಕ್ಷೇಪ ಆದಾಗ ಮಾತ್ರ ಸಮಸ್ಯೆ ಉದ್ಭವ ಆಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬಳಿ ಸಲಹೆ ಇದ್ದರೆ ಕೊಡಿ,’ ಎಂದು ನ್ಯಾ| ಸಂಜೀವ್ ಖನ್ನಾ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?