ಘನತೆಗೆ ಧಕ್ಕೆ ತಂದಿದೆ; ದ್ರೌಪದಿ ಮುರ್ಮು ಕುರಿತ ಸೋನಿಯಾ ಗಾಂಧಿ ಟೀಕೆಗೆ ರಾಷ್ಟ್ರಪತಿ ಭವನ ಆಕ್ರೋಶ
ಇಂದಿನಿಂದ ಅಧಿವೇಶನಗಳು ಆರಂಭವಾಗಿದ್ದು, ಇಂದು ಸಂಸತ್ ಅನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. ಈ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ಸೋನಿಯಾ ಗಾಂಧಿ, ‘ಪಾಪ, ರಾಷ್ಟ್ರಪತಿ ಮುರ್ಮು ಕೊನೆಯಲ್ಲಿ ಬಹಳ ಸುಸ್ತಾಗಿ ಬಿಟ್ಟಿದ್ದರು, ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಇದು ಬೇಸರದ ಸಂಗತಿ’ ಎಂದು ಹೇಳಿದ್ದರು. ಸೋನಿಯಾ ಗಾಂಧಿಯವರ ಹೇಳಿಕೆ ವಿವಾದ ಸೃಷ್ಟಿಸಿತ್ತು. ಈ ಟೀಕೆಗೆ ರಾಷ್ಟ್ರಪತಿ ಭವನ ಪ್ರತಿಕ್ರಿಯಿಸಿದೆ.

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, “ರಾಷ್ಟ್ರಪತಿಗಳು ಕೊನೆಯಲ್ಲಿ ಬಹಳ ದಣಿದಿದ್ದರು. ಆಕೆ ಕಷ್ಟಪಟ್ಟು ಮಾತನಾಡುತ್ತಿದ್ದರು, ಅವರಿಗೆ ಬಹಳ ಸುಸ್ತಾಗಿತ್ತು. ಅಯ್ಯೋ ಪಾಪ… ಅವರನ್ನು ನೋಡಿದರೆ ಬೇಸರವಾಯಿತು. ಅವರ ಭಾಷಣ ಕಳಪೆಯಾಗಿತ್ತು” ಎಂದಿದ್ದರು. ಈ ವೇಳೆ ಸೋನಿಯಾ ಗಾಂಧಿ ಜೊತೆ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದರು. ದ್ರೌಪದಿಯವರ ಭಾಷಣ ತುಂಬ ಬೋರಿಂಗ್ ಆಗಿತ್ತು, ಅವರು ಹೇಳಿದ್ದನ್ನೇ ಹೇಳುತ್ತಿದ್ದರು ಎಂದರು ಎಂದು ಸೋನಿಯಾ ಗಾಂಧಿ ಟೀಕಿಸಿದ್ದರು.
ಈ ಹೇಳಿಕೆಗೆ ರಾಷ್ಟ್ರಪತಿ ಭವನ ಪ್ರತಿಕ್ರಿಯೆ ನೀಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ದೀನದಲಿತರ ಕಲ್ಯಾಣಕ್ಕಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಸಮರ್ಪಣಾಭಾವದಿಂದ ನಿರ್ವಹಿಸುತ್ತಿದ್ದಾರೆ. ಅವರು ಸುಸ್ತಾಗಿರಲಿಲ್ಲ. ಕಾಂಗ್ರೆಸ್ನ ಹಿರಿಯ ನಾಯಕರು ನೀಡಿರುವ ಹೇಳಿಕೆ ರಾಷ್ಟ್ರಪತಿ ಹುದ್ದೆಯ ಘನತೆಗೆ ಧಕ್ಕೆ ತಂದಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಸೋನಿಯಾ ಗಾಂಧಿಯ ಹೆಸರು ಪ್ರಸ್ತಾಪಿಸದೆ ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿದೆ.
#WATCH | Delhi | After the President’s address to the Parliament, Congress MP Sonia Gandhi says,”…The President was getting very tired by the end…She could hardly speak, poor thing…” pic.twitter.com/o6cwoeYFdE
— ANI (@ANI) January 31, 2025
ಇದನ್ನೂ ಓದಿ: Parliament Budget Session 2025: ಕೇಂದ್ರ ಸರ್ಕಾರದ ಸಾಧನೆಗಳನ್ನು ಉಭಯ ಸದನಗಳೆದುರು ಮಂಡಿಸಿದ ರಾಷ್ಟ್ರಪತಿ ಮುರ್ಮು
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಟೀಕೆಯನ್ನು ತಳ್ಳಿಹಾಕಿರುವ ರಾಷ್ಟ್ರಪತಿ ಭವನವು ಈ ಹೇಳಿಕೆ “ಸತ್ಯಕ್ಕೆ ದೂರವಾಗಿದೆ ಮತ್ತು ಇದು ರಾಷ್ಟ್ರಪತಿ ಕಚೇರಿಯ ಘನತೆಗೆ ಧಕ್ಕೆ ತಂದಿದೆ” ಎಂದು ಹೇಳಿದೆ. ಇಂದು ಭಾಷಣ ಮಾಡುವಾಗ ರಾಷ್ಟ್ರಪತಿಗಳು ಯಾವುದೇ ಹಂತದಲ್ಲಿಯೂ ದಣಿದಿರಲಿಲ್ಲ. ವಾಸ್ತವವಾಗಿ, ಅವರು ತಮ್ಮ ಭಾಷಣದ ಮಾಡುವಾಗ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ, ಮಹಿಳೆಯರು ಮತ್ತು ರೈತರಿಗಾಗಿ ಮಾತನಾಡುವುದು ಎಂದಿಗೂ ದಣಿವುಂಟುಮಾಡುವುದಿಲ್ಲ ಎಂದು ನಂಬಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Press Release by President’s Secretariat
Rashtrapati Bhavan refuted Congress leaders’ claims that the President was tired during her address, stating she was energetic while speaking for marginalized groups. The remarks were termed unfortunate.
#Budget @rashtrapatibhvn pic.twitter.com/smN2YfO6NB
— SansadTV (@sansad_tv) January 31, 2025
ಸೋನಿಯಾ ಗಾಂಧಿ ರಾಷ್ಟ್ರಪತಿಗಳ ಭಾಷಣಕ್ಕೆ ಪೂರ್ ಥಿಂಗ್ ಎಂದು ಹೇಳಿದ್ದಕ್ಕೆ ಬಿಜೆಪಿ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಬಡವರ್ಗದವರಿಗೆ ಗೌರವ ನೀಡುತ್ತಿಲ್ಲ ಎಂಬುದು ಇದರಲ್ಲೇ ಗೊತ್ತಾಗುತ್ತಿದೆ. ಇದು ರಾಷ್ಟ್ರಪತಿಗಳಿಗೆ ಮಾಡಿದ ಅವಮಾನವೂ ಹೌದು ಎಂದು ಹೇಳಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Fri, 31 January 25