Interview: ಮೋದಿ ವಿಶೇಷ ಸಂದರ್ಶನ: ದೇಶದ ಹಲವು ವಿಚಾರಗಳನ್ನು ಹಂಚಿಕೊಂಡ ನಮೋ

| Updated By: ರಮೇಶ್ ಬಿ. ಜವಳಗೇರಾ

Updated on: Apr 10, 2024 | 9:52 PM

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಸ್‌ವೀಕ್ ಸಂದರ್ಶನದಲ್ಲಿ ಮುಂಬರುವ ಚುನಾವಣೆ, ಭಾರತದ ಅಭಿವೃದ್ಧಿ, ಆರ್ಥಿಕತೆ ಮಿಲಿಟರಿ, ಪ್ರಜಾಪ್ರತ್ವ, ರಾಜತಾಂತ್ರಿಕ, ಸೇರಿದಂತೆ ಹತ್ತು ವರ್ಷದ ಮತ್ತು ಆಡಳಿತದಲ್ಲಿ ದೇಶದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ, ಯಾವೆಲ್ಲಾ ಯೋಜನೆಗಳನ್ನು ಜಾರಿ ತರಲಾಗಿದೆ ಎನ್ನುವ ಬಗ್ಗೆ ತಮ್ಮ ವಿಚಾರಳನ್ನು ಹಂಚಿಕೊಂಡಿದ್ದಾರೆ.

Interview: ಮೋದಿ ವಿಶೇಷ ಸಂದರ್ಶನ: ದೇಶದ ಹಲವು ವಿಚಾರಗಳನ್ನು ಹಂಚಿಕೊಂಡ ನಮೋ
Follow us on

ನವದೆಹಲಿ, (ಏಪ್ರಿಲ್ 10):  ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಸ್‌ವೀಕ್ ಸಂದರ್ಶನದಲ್ಲಿ ಮುಂಬರುವ ಚುನಾವಣೆ, ಭಾರತದ ಅಭಿವೃದ್ಧಿ, ಆರ್ಥಿಕತೆ ಮಿಲಿಟರಿ, ಪ್ರಜಾಪ್ರತ್ವ, ರಾಜತಾಂತ್ರಿಕ, ಸೇರಿದಂತೆ ದೇಶದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನ್ಯೂಸ್‌ವೀಕ್ ಅಧ್ಯಕ್ಷ ಮತ್ತು ಸಿಇಒ ದೇವ್ ಪ್ರಗದ್, ಗ್ಲೋಬಲ್ ಎಡಿಟರ್ ಇನ್ ಚೀಫ್ ನ್ಯಾನ್ಸಿ ಕೂಪರ್ ಮತ್ತು ಏಷ್ಯಾದ ಸಂಪಾದಕೀಯ ನಿರ್ದೇಶಕ ಡ್ಯಾನಿಶ್ ಮಂಜೂರ್ ಭಟ್ ಅವರೊಂದಿಗೆ ಸುಮಾರು 90 ನಿಮಿಷದ ಈ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೋದಿಯವರ ನಾಯಕತ್ವದಲ್ಲಿ ಆರ್ಥಿಕ ಪ್ರಗತಿಯಿಂದ ಹಿಡಿದು ಚೀನಾದೊಂದಿಗಿನ ಭಾರತದ ಸಂಬಂಧ, ಗಡಿ ವಿವಾದ, ಅಭಿವೃದ್ಧಿ ಕಾರ್ಯಕ್ರಗಗಳು, ಜಾರಿ ತಂದ ಯೋಜನೆಗಳು, ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎನ್ನುವ ಆರೋಪ, ಟೀಕೆಗಳಿಗೆ ಉತ್ತರಿಸಿದ್ದಾರೆ.

ಮೊದಲಿಗೆ ಪ್ರಸ್ತಕ್ತ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿ, ಕೊಟ್ಟ ಭರವಸೆಗಳನ್ನು ಈಡೇರಿಸುವುದಿಲ್ಲ ಎನ್ನುವುದು ಜನರಲ್ಲಿ ಆತಂಕ ಇತ್ತು. ಆದ್ರೆ, ಅವುಗಳನ್ನು ನಾವು ಸಂಪೂರ್ಣವಾಗಿ ಈಡೇಸಿದ್ದೇವೆ. ನಮ್ಮ ಸರ್ಕಾರವು “ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡಿದೆ. ನಮ್ಮ ಕಾರ್ಯಕ್ರಮಗಳ ಲಾಭ ಬೇರೆಯವರಿಗೆ ಸಿಕ್ಕಿದ್ದರೆ ಅದು ತಮಗೂ ತಲುಪುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಭಾರತವು 11ನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಜನರು ನೋಡಿದ್ದಾರೆ. ಈಗ ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು ಎಂಬುದು ದೇಶದ ಆಶಯವಾಗಿದೆ ಎಂದು ಹೇಳಿದರು.

ಎರಡನೇ ಅವಧಿಯ ಅಂತ್ಯದ ವೇಳೆಗೆ ಸರ್ಕಾರಗಳು ಜನ ಬೆಂಬಲವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಜಗತ್ತಿನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರಗಳ ಬಗೆಗಿನ ಅಸಮಾಧಾನವೂ ಹೆಚ್ಚಾಗಿದೆ. ಆದ್ರೆ, ಇಲ್ಲಿ ಅಂದರೆ ಭಾರದತಲ್ಲಿ ನಮ್ಮ ಸರ್ಕಾರಕ್ಕೆ ಜನಬೆಂಬಲ ಹೆಚ್ಚುತ್ತಿದೆ ಎಂದರು.

ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮೋದಿ ಮಾತು

ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕುರಿತು ಮಾಡಿರುವ ಮೋದಿ, ನಾವು ಪ್ರಜಾಪ್ರಭುತ್ವವಾಗಿದ್ದೇವೆ. ನಮ್ಮ ಸಂವಿಧಾನದಲ್ಲಿ ಹೇಳುವುದರಿಂದ ಮಾತ್ರವಲ್ಲ, ಅದು ನಮ್ಮ ವಂಶಪರಂಪರೆಯಲ್ಲಿದೆ. ಭಾರತ ಪ್ರಜಾಪ್ರಭುತ್ವದ ತಾಯಿ. ಅದು ತಮಿಳುನಾಡಿನ ಉತ್ತರಮೇರೂರ್ ಆಗಿರಲಿ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 600 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ 970 ಮಿಲಿಯನ್‌ಗಿಂತಲೂ ಹೆಚ್ಚು ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಾರೆ. ನಿರಂತರವಾಗಿ ಮತದಾರರ ಭಾಗವಹಿಸುವಿಕೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಗೆ ದೊಡ್ಡ ಪ್ರಮಾಣವಾಗಿದೆ. ಭಾರತದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಎಂದರು.

ಒಂದು ಕಾರ್ಯ ವಿಧಾನವಿರುವುದರಿಂದ ಮಾತ್ರ ಭಾರತದಂತಹ ಪ್ರಜಾಪ್ರಭುತ್ವವು ಮುಂದುವರಿಯಲು ಮತ್ತು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮಲ್ಲಿ ಸುಮಾರು 1.5 ಲಕ್ಷ ನೋಂದಾಯಿತ ಮೀಡಿಯಾ ಪಬ್ಲಿಕೇಷನ್​ಗಳಿವೆ. ಮತ್ತು. ನೂರಾರು ಸುದ್ದಿ ವಾಹಿನಿಗಳಿವೆ. ಕೆಲವು ಜನರು ಅವರ ಚಿಂತನೆಯ ಪ್ರಕ್ರಿಯೆಗಳು, ಭಾವನೆಗಳು ಮತ್ತು ಆಕಾಂಕ್ಷೆಗಳಿಂದ ಭಾರತದ ಜನರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಇಂತಹ ಜನರು ಪರ್ಯಾಯವಾಗಿ ತಮ್ಮದೇ ಆದ ಪ್ರತಿಧ್ವನಿ ಕೊಠಡಿಯಲ್ಲಿ ವಾಸಿಸಲು ಒಲವು ತೋರುತ್ತಾರೆ. ಅವರೇ ಮಾಧ್ಯಮ ಸ್ವಾತಂತ್ರ್ಯವನ್ನು ಕುಗ್ಗಿಸಲು ಹೊರಟ್ಟಿದ್ದಾರೆ ಎಂದು ಹೇಳಿದರು.

ಭಾರತೀಯ UPI ಅತ್ಯುತ್ತಮ ಉದಾಹರಣೆಯಾಗಿದೆ. ನಾನು UPI ಅನ್ನು ಹಲವು ಆರ್ಥಿಕ ಅಡೆತಡೆಗಳನ್ನು ನಿವಾರಿಸಿ ಸರಳ ಸಾಧನವಾಗಿ ಮಾಡಿದ್ದೇವೆ. ಇದು ಕಟ್ಟಕಡೆಯ ವ್ಯಕ್ತಿ ಡಿಜಿಟಲ್ ವಹಿವಾಟಿಗೆ ಅನುಕೂಲಕರವಾಗಿದೆ. ನಮ್ಮದು 28 ವರ್ಷಗಳ ಸರಾಸರಿ ವಯಸ್ಸಿನ ಯುವ ದೇಶ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ಮಾತುಗಳನ್ನಾಡಿದ್ದಾರೆ

ಆರ್ಥಿಕ ಬೆಳವಣಿಗೆಯ ಎಂಜಿನ್

ಭಾರತವು ಪ್ರಜಾಪ್ರಭುತ್ವದ ರಾಜಕೀಯ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿ, ತಮ್ಮ ಪೂರೈಕೆ ವೈವಿಧ್ಯಗೊಳಿಸಲು ಬಯಸುವವರಿಗೆ ನೈಸರ್ಗಿಕ ಆಯ್ಕೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ, ಕಾರ್ಪೊರೇಟ್ ತೆರಿಗೆ ಕಡಿತ, ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳು, ಎಫ್‌ಡಿಐ ನಿಯಮಗಳಲ್ಲಿ ಸಡಿಲಿಕೆ. ಇದರ ಪರಿಣಾಮವಾಗಿ ನಾವು ಸುಲಭವಾಗಿ ವ್ಯಾಪಾರ ಮಾಡುವಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡಿದ್ದೇವೆ. ನಮ್ಮ ನಿಯಂತ್ರಕ ಚೌಕಟ್ಟು, ನಮ್ಮ ತೆರಿಗೆ ಪದ್ಧತಿಗಳು ಹಾಗೂ ನಮ್ಮ ಮೂಲಸೌಕರ್ಯಗಳನ್ನು ಜಾಗತಿಕ ಮಾನದಂಡಗಳಿಗೆ ಸಮನಾಗಿ ಮಾಡಲು ನಾವು ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ, ರೈಲು, ವಿಮಾನ ಸೇವೆ

ಕಳೆದ 10 ವರ್ಷಗಳಲ್ಲಿರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ 2014 ರಲ್ಲಿ 91,287 ಕಿಲೋಮೀಟರ್‌, 2023ರಲ್ಲಿ 146,145 ಕಿಲೋಮೀಟರ್‌ ಮಾಡಲಾಗಿದೆ. ಇದರೊಂದಿಗೆ 60 ಪ್ರತಿಶತದಷ್ಟು ಹೆಚ್ಚಾಗಿದೆ. ಹಾಗೇ ವಿಮಾನ ನಿಲ್ದಾಣಗಳನ್ನು ದ್ವಿಗುಣಗೊಳಿಸಿದ್ದೇವೆ . ನಮ್ಮ ಸಾಗರಮಾಲಾ ಯೋಜನೆಯಿಂದ ನಮ್ಮ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಿದ್ದೇವೆ. ನಾವು ನಮ್ಮ ನಾಗರಿಕರ ಸೌಕರ್ಯಕ್ಕಾಗಿ ವಂದೇ ಭಾರತ್ ರೈಲು ಮತ್ತು ಸಾಮಾನ್ಯ ಜನರ ಹಾರಾಟಕ್ಕೆ ಅನುವು ಮಾಡಿಕೊಡಲು ಉಡಾನ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.