ಒತ್ತಡಕ್ಕೆ ಮಣಿದು ಬಿಜೆಪಿ ನಾಯಕನನ್ನು ನಿಷೇಧಿಸಿದ ಫೇಸ್​ಬುಕ್

|

Updated on: Sep 03, 2020 | 4:08 PM

ಪಕ್ಷಾಪಾತ ಮತ್ತು ದ್ವೇಷದ ಸಂದೇಶಗಳನ್ನು ತನ್ನ ಪ್ಲಾಟ್​ಫಾರ್ಮ್​ನಲ್ಲಿ ನಿಯಂತ್ರಿಸುವಲ್ಲಿ ವಿಫಲವಾಗಿದೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ಒತ್ತಡದಲ್ಲಿರುವ ಭಾರತದ ಫೇಸ್​ಬುಕ್ ಪ್ಲಾಟ್​ಫಾರ್ಮ್, ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ತನ್ನ ಪ್ಲಾಟ್​ಫಾರ್ಮ್ ಮತ್ತು ಇನ್​ಸ್ಟಾಗ್ರಾಮ್​ ಬಳಸದಂತೆ ನಿಷೇಧಿಸಿದೆ. ಫೇಸ್​ಬುಕ್​ನ ನೀತಿ ನಿಯಮಗಳನ್ನು ಉಲ್ಲಂಘಿಸಿ, ಹಿಂಸೆ ಮತ್ತು ದ್ವೇಷವನ್ನು ಪ್ರಚುರಪಡಿಸಲು ಪ್ಲಾಟ್​ಫಾರ್ಮ್ ಬಳಸಿದ ಕಾರಣ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆಯೆಂದು ಫೇಸ್​ಬುಕ್​ನ ಒಬ್ಬ ಬಾತ್ಮೀದಾರ ಹೇಳಿದ್ದಾರೆ. ‘‘ಫೇಸ್​ಬುಕ್​ನ ನೀತಿ ನಿಯಮಗಳನ್ನು ಉಲ್ಲಂಘಿಸಿ ಹಿಂಸೆ ಮತ್ತು ದ್ವೇಷವನ್ನು ಪ್ರಚೋದಿಸಲು […]

ಒತ್ತಡಕ್ಕೆ ಮಣಿದು ಬಿಜೆಪಿ ನಾಯಕನನ್ನು ನಿಷೇಧಿಸಿದ ಫೇಸ್​ಬುಕ್
Follow us on

ಪಕ್ಷಾಪಾತ ಮತ್ತು ದ್ವೇಷದ ಸಂದೇಶಗಳನ್ನು ತನ್ನ ಪ್ಲಾಟ್​ಫಾರ್ಮ್​ನಲ್ಲಿ ನಿಯಂತ್ರಿಸುವಲ್ಲಿ ವಿಫಲವಾಗಿದೆಯೆಂಬ ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ಒತ್ತಡದಲ್ಲಿರುವ ಭಾರತದ ಫೇಸ್​ಬುಕ್ ಪ್ಲಾಟ್​ಫಾರ್ಮ್, ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ತನ್ನ ಪ್ಲಾಟ್​ಫಾರ್ಮ್ ಮತ್ತು ಇನ್​ಸ್ಟಾಗ್ರಾಮ್​ ಬಳಸದಂತೆ ನಿಷೇಧಿಸಿದೆ. ಫೇಸ್​ಬುಕ್​ನ ನೀತಿ ನಿಯಮಗಳನ್ನು ಉಲ್ಲಂಘಿಸಿ, ಹಿಂಸೆ ಮತ್ತು ದ್ವೇಷವನ್ನು ಪ್ರಚುರಪಡಿಸಲು ಪ್ಲಾಟ್​ಫಾರ್ಮ್ ಬಳಸಿದ ಕಾರಣ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆಯೆಂದು ಫೇಸ್​ಬುಕ್​ನ ಒಬ್ಬ ಬಾತ್ಮೀದಾರ ಹೇಳಿದ್ದಾರೆ.

‘‘ಫೇಸ್​ಬುಕ್​ನ ನೀತಿ ನಿಯಮಗಳನ್ನು ಉಲ್ಲಂಘಿಸಿ ಹಿಂಸೆ ಮತ್ತು ದ್ವೇಷವನ್ನು ಪ್ರಚೋದಿಸಲು ನಮ್ಮ ಪ್ಲಾಟ್​ಫಾರ್ಮ್ ಉಪಯೋಗಿಸಿರುವುದಕ್ಕೆ ರಾಜಾ ಸಿಂಗ್ ಅವರನ್ನು ನಿಷೇಧಿಸಲಾಗಿದೆ,’’ ಎಂದು ಸದರಿ ಬಾತ್ಮೀದಾರ ತಮ್ಮ ಈಮೇಲ್ ಸ್ಟೇಟ್​ಮೆಂಟ್​ನಲ್ಲಿ ಹೇಳಿದ್ದಾರೆ.

ಸುಮಾರು 30 ಕೋಟಿ ಭಾರತೀಯ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್​ಗೆ ಭಾರತವೇ ಅತಿದೊಡ್ಡ ಮಾರ್ಕೆಟ್. ಇತ್ತೀಚಿಗೆ ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್​ನಲ್ಲಿ ಪ್ರಕಟವಾದ ವರದಿಯೊಂದು, ಭಾರತದ ಫೇಸ್​ಬುಕ್ ಆಡಳಿತ ಪಕ್ಷದ ಪರವಾಗಿದೆ ಎಂದು ಆರೋಪಿಸಿದ ನಂತರ ಅದರ ಮೇಲೆ ಒತ್ತಡ ಜಾಸ್ತಿಯಾಗಿತ್ತು.

ರಾಜಾ ಸಿಂಗ್ ಅವರ ದ್ವೇಷ ಕಾರುವ ಪೋಸ್ಟ್​ಗಳನ್ನು ಫೇಸ್​ಬುಕ್ ನಿರ್ಲಕ್ಷಿಸಿದೆ ಎಂದು ಸಹ ವರದಿಯಲ್ಲಿ ಅರೋಪಿಸಲಾಗಿತ್ತು. ಈ ವರದಿಯ ನಂತರ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರ ಶುರುವಾಗಿದ್ದು ಮಾಹಿತಿ ತಂತ್ರಜ್ಞಾನದ ಸಂಸತ್ ಸಮಿತಿಯು ಭಾರತದ ಫೇಸ್​ಬುಕ್ ಪ್ರತಿನಿಧಿಗಳೊಂದಿಗೆ ಬುಧವಾರದಂದು ಸಭೆ ನಡೆಸಿ ಅದರ ಸಾಮಾಜಿಕ ಜಾಲತಾಣ ದುರ್ಬಳಕೆ ಆಗುತ್ತಿರುವ ಬಗ್ಗೆ ಚರ್ಚಿಸಿತ್ತು.