ಇನ್ಮುಂದೆ.. ಸಿಂಗಲ್ ಇರುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ, ಉಳಿದ ಕಡೆಗಳಲ್ಲಿ?

ಇನ್ಮುಂದೆ.. ಸಿಂಗಲ್ ಇರುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ, ಉಳಿದ ಕಡೆಗಳಲ್ಲಿ?

ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು, ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಕೇಂದ್ರ ಸರ್ಕಾರ ಕಟ್ಟಾಜ್ಞೆ ಹೊರಡಿಸಿತ್ತು, ಆದರೆ ಇಂದಿನಿಂದ ಮಾಸ್ಕ್ ಧಾರಣೆಯಲ್ಲಿ ಕೊಂಚ ಬದಲಾವಣೆ ತಂದಿದೆ.

ಇನ್ನು ಮುಂದೆ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೆ ಮಾಸ್ಕ್​ ಧರಿಸುವ ಅಗತ್ಯವಿಲ್ಲ. ಆದರೆ ಜನ ಗುಂಪಾಗಿ ಇದ್ದರೆ ಮಾತ್ರ ಮಾಸ್ಕ್ ಧರಿಸಬೇಕು. ಜೊತೆಗೆ ಗುಂಪು ಗುಂಪಾಗಿ ಜಾಗಿಂಗ್, ಸೈಕ್ಲಿಂಗ್ ಹಾಗೂ ರನ್ನಿಂಗ್ ಮಾಡುವ ವೇಳೆ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕೆಂದು ಕೇಂದ್ರ ಸರ್ಕಾರದಿಂದ ಹೊಸ ಗೈಡ್ ಲೈನ್ ಹೊರಬಿದ್ದಿದೆ.

Click on your DTH Provider to Add TV9 Kannada