ಭಾರತೀಯರ ಕನಸಾಗಿರುವ ಚಂದ್ರಯಾನ 3(Chandrayaan 3) ಮಿಷನ್ ಇನ್ನೇನು ಕೆಲವೇ ದಿನಗಳಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದ್ದು, ಮಿಷನ್ ಯಶಸ್ವಿಯಾಗುವ ಭರವಸೆ ಎಲ್ಲರಿಗೂ ಇದೆ. ಹಾಗೆಯೇ ಈ ಯೋಜನೆಗೆ ಇಸ್ರೋ ವಿಜ್ಞಾನಿಗಳ ಶ್ರಮ ಕೂಡ ಅಷ್ಟೇ ಇದೆ. ಚಂದ್ರಯಾನ 2 ಮಿಷನ್ ವಿಫಲವಾದ ಬಳಿಕ ಧೃತಿ ಗೆಡದೆ ಹಗಲು ರಾತ್ರಿ ಎನ್ನದೆ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಆದರೆ ಚಂದ್ರಯಾನ 3 ಮಿಷನ್ನಲ್ಲಿ ಇಸ್ರೋ ವಿಜ್ಞಾನಿಗಳು ಕಳೆದ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎನ್ನುವ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಾದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ನೋಡೋಣ.
ದಿ ರಣವೀರ್ ಶೋ ಪಾಡ್ಕಾಸ್ಟ್ನಲ್ಲಿ ಪಾಲ್ಗೊಂಡಿದ್ದ ಖ್ಯಾತ ಯೂಟ್ಯೂಬರ್ ತೆಹ್ಸೀನ್ ಎಂಬುವವರು ಚಂದ್ರಯಾನ 3 ಮಿಷನ್ನಲ್ಲಿ ಕೆಲಸ ಮಾಡಿರುವ ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಸರ್ಕಾರದ ಮೇಲೆ ಕೋಪ ಬರುತ್ತದೆ ಎಂದು ಹೇಳಿದ್ದರು.
ಮತ್ತಷ್ಟು ಓದಿ: Fact Check: ಹಿಂದೂಗಳ ಜತೆ ವ್ಯಾಪಾರ ಬಹಿಷ್ಕರಿಸಿ ಎಂದರೇ ಬೆಂಗಳೂರಿನ ಮುಸ್ಲಿಮರು? ವಾಸ್ತವ ಇಲ್ಲಿದೆ ನೋಡಿ
ಇಸ್ರೋ ವಿಜ್ಞಾನಿಗಳು ತಮ್ಮ ಸಂಬಳವನ್ನು ಪ್ರತಿ ತಿಂಗಳ ಕೊನೆಯ ದಿನದಂದು ಸ್ವೀಕರಿಸುತ್ತಾರೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ದೃಢಪಡಿಸಿದೆ.
ಇಸ್ರೋ ವಿಜ್ಞಾನಿಗಳ ಸಂಬಳದ ಕುರಿತು ತೆಹ್ಸೀನ್ ಹೇಳಿದ್ದು ಸುಳ್ಳು ಎಂದು ಪಿಐಬಿ ಫ್ಯಾಕ್ಟ್ಚೆಕ್ನಲ್ಲಿ ತಿಳಿಸಿದೆ.
.@tehseenp claims that ISRO scientists haven’t received salaries for the last 3 months#PIBFactCheck
✔️This claim is #Fake
✔️@isro scientists get their monthly salary on last day of every month pic.twitter.com/RHa81wt2cy
— PIB Fact Check (@PIBFactCheck) August 16, 2023
ತೆಹ್ಸೀನ್ ಪೂನಾವಾಲಾ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಅಲಾ ಅವರ ಸಹೋದರ, ಇದ್ರೋದಲ್ಲಿ ಸಂಬಳ ಪಡೆಯದ 10 ವಿಜ್ಞಾನಿಗಳ ಹೆಸರು ಹಾಗೂ ಹುದ್ದೆಯ ಬಗ್ಗೆ ಮಾಹಿತಿ ಕೊಡಿ ಎಂದು ಶೆಹಜಾದ್ ಅವರನ್ನು ಕೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ