Fact Check: ಕೋಚೆಲ್ಲಾದಲ್ಲಿ ಭಾರತದ ಧ್ವಜ ಬೀಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಾ ನಟ, ಗಾಯಕ ದಿಲ್ಜಿತ್ ದೋಸಾಂಜ್?

|

Updated on: Apr 28, 2023 | 9:02 PM

Diljit Dosanjh: ದಿಲ್ಜಿತ್ ಪಂಜಾಬಿ ಭಾಷೆಯಲ್ಲಿ ದ್ವೇಷವನ್ನು ಹರಡಬೇಡಿ, ಸಂಗೀತ ಎಲ್ಲರಿಗೂ ಸೇರಿದ್ದು, ಒಂದು ದೇಶದ್ದು ಮಾತ್ರವಲ್ಲ ಎಂದು ಹೇಳುತ್ತಿದ್ದಾರೆ. ಅವರು ಭಾರತೀಯ ತ್ರಿವರ್ಣ ಧ್ವಜದ ಬಗ್ಗೆ ಗೌರವ ಹೊಂದಿಲ್ಲ ಎಂದು ಆರೋಪಿಸಲಾಗಿದೆ

Fact Check: ಕೋಚೆಲ್ಲಾದಲ್ಲಿ ಭಾರತದ ಧ್ವಜ ಬೀಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಾ ನಟ, ಗಾಯಕ ದಿಲ್ಜಿತ್ ದೋಸಾಂಜ್?
ದಿಲ್ಜಿತ್ ದೋಸಾಂಜ್
Follow us on

ಕ್ಯಾಲಿಫೋರ್ನಿಯಾದ ಕೋಚೆಲ್ಲಾ (Coachella) ಸಂಗೀತೋತ್ಸವದಲ್ಲಿ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ವಿಡಿಯೊವೊಂದು ವೈರಲ್ ಆಗಿದೆ. ದಿಲ್ಜಿತ್ ತನ್ನ ಪ್ರದರ್ಶನದ ಸಮಯದಲ್ಲಿ ಹುಡುಗಿಯೊಬ್ಬಳು ಭಾರತದ ಧ್ವಜವನ್ನು(Indian tricolour) ಬೀಸುತ್ತಿರುವುದಕ್ಕೆ ಆಕ್ಷೇಪಿಸಿದ್ದಾರೆ ಎಂಬ ಆರೋಪದೊಂದಿಗೆ ಈ ವಿಡಿಯೊ ವೈರಲ್ ಆಗಿದೆ. ಟ್ವೀಟ್ ಪ್ರಕಾರ, ದಿಲ್ಜಿತ್ ಪಂಜಾಬಿ ಭಾಷೆಯಲ್ಲಿ ದ್ವೇಷವನ್ನು ಹರಡಬೇಡಿ, ಸಂಗೀತ ಎಲ್ಲರಿಗೂ ಸೇರಿದ್ದು, ಒಂದು ದೇಶದ್ದು ಮಾತ್ರವಲ್ಲ ಎಂದು ಹೇಳುತ್ತಿದ್ದಾರೆ. ಅವರು ಭಾರತದ ತ್ರಿವರ್ಣ ಧ್ವಜದ ಬಗ್ಗೆ ಗೌರವ ಹೊಂದಿಲ್ಲ ಎಂದು ಆರೋಪಿಸಲಾಗಿದೆ. ಇದೇ ಟ್ವೀಟ್ ನ್ನು ಉಲ್ಲೇಖಿಸಿದ ಮಿಸ್ಟರ್ ಸಿನ್ಹಾ ಎಂಬ ಟ್ವೀಟಿಗರು ದಿಲ್ಜಿತ್ ಖಲಿಸ್ತಾನಿ ಪಾಸ್ಪೋರ್ಟ್ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ್ದು ಆತ “2 ರೂಪಾಯಿ” ಕಲಾವಿದ ಎಂದಿದ್ದಾರೆ.


ಪತ್ರಕರ್ತ ಅಭಿಜಿತ್ ಮಜುಂದಾರ್ ಕೂಡಾ ಪನ್‌ಫ್ಯಾಕ್ಟ್‌ನ ಟ್ವೀಟ್ ಅನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ವಿದೇಶಾಂಗ ಕಚೇರಿ ದಿಲ್ಜಿತ್ ಅವರ ಭಾರತ ಪ್ರವೇಶವನ್ನು ನಿರ್ಬಂಧಿಸಬೇಕು. ಅವರು ನಿರಂತರವಾಗಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ದಿಲ್ಜಿತ್ ಖಲಿಸ್ತಾನಿ ಕೈಗೊಂಬೆ ಎಂದಿದ್ದಾರೆ.

ಫ್ಯಾಕ್ಟ್ ಚೆಕ್

ದಿಲ್ಜಿತ್ ದೋಸಾಂಜ್ ಅವರೇ ಈ ಬಗ್ಗೆ ಟ್ವೀಟ್ ಮಾಡಿ ಸುಳ್ಳು ಸುದ್ದಿ ಮತ್ತು ನಕಾರಾತ್ಮಕತೆಯನ್ನು ಹರಡುವುದನ್ನು ತಡೆಯಲು ಜನರನ್ನು ಒತ್ತಾಯಿಸಿದ್ದಾರೆ. ಇದು ನನ್ನ ದೇಶದ ಧ್ವಜ ಮತ್ತು ಇದು ನನ್ನ ದೇಶಕ್ಕಾಗಿರುವುದು. ಅಂದರೆ ನನ್ನ ಸಾಧನೆ ನನ್ನ ದೇಶಕ್ಕಾಗಿ ಎಂದು ನಾನು ಪಂಜಾಬಿಯಲ್ಲಿ ಹೇಳಿದ್ದು. ನಿಮಗೆ ಪಂಜಾಬಿ ಅರ್ಥವಾಗದಿದ್ದರೆ, ದಯವಿಟ್ಟು ಗೂಗಲ್ ಮಾಡಿ. ಏಕೆಂದರೆ ಕೋಚೆಲ್ಲಾ ಎಲ್ಲಾ ದೇಶಗಳ ಜನರು ಬರುವ ದೊಡ್ಡ ಸಂಗೀತ ಉತ್ಸವವಾಗಿದೆ. ಆದ್ದರಿಂದಲೇ ಸಂಗೀತ ಎಲ್ಲರಿಗೂ ಸೇರಿದ್ದು. ಒಳ್ಳೆಯದನ್ನು ತಪ್ಪಾಗಿ ನಿರೂಪಿಸುವುದು ಹೇಗೆ ಎಂಬುದನ್ನು ಜನರು ನಿಮ್ಮಿಂದ ಕಲಿಯಬೇಕು. ಇದನ್ನೂ ಗೂಗಲ್ ಮಾಡಿ ಎಂದಿದ್ದಾರೆ.


ಇದನ್ನೂ ಓದಿ: ಸಲಿಂಗ ವಿವಾಹಗಳು ಮಾನವನ ಅಸ್ತಿತ್ವಕ್ಕೆ ಹಾನಿಯುಂಟು ಮಾಡುತ್ತವೆ: ಸಿಜೆಐಗೆ ಹಿಂದೂ ಧಾರ್ಮಿಕ ಸಂಘಟನೆ ಪತ್ರ

ಟ್ವೀಟಿಗ ಜಾಸ್ ಒಬೆರಾಯ್ ದಿಲ್ಜಿತ್ ಅವರ ಕ್ಲಿಪ್ ಅನ್ನು ಟ್ವೀಟ್ ಮಾಡಿ ಪಂಜಾಬಿ ಭಾಷೆಯ ಅನುವಾದ ಮಾಡಿದ್ದಾರೆ.ದಿಲ್ಜಿತ್ ತಮ್ಮ ಮಾತುಗಳ ಮೂಲಕ ಸೌಹಾರ್ದತೆ ಮತ್ತು ಸಹೋದರತ್ವವನ್ನು ಹರಡಲು ಬಯಸಿದ್ದರು ಮತ್ತು ಪಂಜಾಬ್ ಮತ್ತು ಭಾರತಕ್ಕೆ ತಮ್ಮ ಪ್ರದರ್ಶನವನ್ನು ಅರ್ಪಿಸಿದ್ದಾರೆ ಸಿಖ್ ವಿರೋಧಿ ಹ್ಯಾಂಡಲ್‌ಗಳು ಅವರ ಮಾತುಗಳನ್ನು ತಪ್ಪಾಗಿ ನಿರೂಪಿಸುವ ಮೂಲಕ ಅವರ ವಿರುದ್ಧ ಸುಳ್ಳು ಮತ್ತು ದ್ವೇಷವನ್ನು ಹರಡುತ್ತಿದ್ದಾರೆ. ಅವರು ಭಾರತೀಯ ಧ್ವಜವನ್ನು ಕೆಳಗಿಳಿಸಲು ಹುಡುಗಿಯನ್ನು ಕೇಳಲಿಲ್ಲ ಎಂದಿದ್ದಾರೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Fri, 28 April 23