Fact Check: ರಾಮನವಮಿಯಂದು ಬುರ್ಜ್ ಖಲೀಫಾದಲ್ಲಿ ಡಿಸ್ಪ್ಲೇ ಆದ ಶ್ರೀರಾಮ; ಎಡಿಟ್ ಮಾಡಿದ ಚಿತ್ರ ವೈರಲ್
ಬುರ್ಜ್ ಖಲೀಫಾದ ಪರಿಶೀಲಿಸಿದ ಸಾಮಾಜಿಕ ಮಾಧ್ಯಮ ಪುಟಗಳಾದ Facebook ಮತ್ತು Instagram ನಲ್ಲಿ ರಾಮನವಮಿ ದೃಶ್ಯಗಳನ್ನು ಸೂಚಿಸುವ ಯಾವುದೇ ಪೋಸ್ಟ್ ಕಂಡುಬಂದಿಲ್ಲ
ದುಬೈನ (Dubai) ಜನಪ್ರಿಯ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾದ (Burj Khalifa) ಮೇಲೆ ಹಿಂದೂ ದೇವತೆ ರಾಮನ ಚಿತ್ರ ಡಿಸ್ಪ್ಲೇ ಆಗಿದೆ ಎಂದು ತೋರಿಸುವ ಪೋಸ್ಟ್ ರಾಮನವಮಿಯಂದು(Ram Navami) ವೈರಲ್ ಆಗಿತ್ತು. ಆದರೆ ಈ ವೈರಲ್ ಚಿತ್ರ ಎಡಿಟ್ ಮಾಡಿದ್ದು. ಮೂಲ ಚಿತ್ರದಲ್ಲಿ ರಾಮನ ಫೋಟೊ ಇಲ್ಲ ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿ ವರದಿ ಮಾಡಿದೆ. ಮಾರ್ಚ್ 30, 2023 ರಂದು ಆಚರಿಸಲಾದ ರಾಮ ನವಮಿಯಂದು ದೇಶದ ಕೆಲವಡೆ ಹಿಂಸಾಚಾರ ನಡೆದಿರುವುದು ಸುದ್ದಿಯಾಗಿದೆ. ವರದಿಗಳ ಪ್ರಕಾರ, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿರುವ ಹಲವಾರು ಘಟನೆಗಳು ನಡೆದಿವೆ. ಇದೆಲ್ಲದರ ನಡುವೆಯೇ ಬುರ್ಜ್ ಖಲೀಫಾದಲ್ಲಿ ಹಿಂದೂ ದೇವತೆ ರಾಮನ ಲೇಸರ್ ಪ್ರೊಜೆಕ್ಷನ್ ಅನ್ನು ತೋರಿಸುವ ವಿಡಿಯೊದ ಸ್ಕ್ರೀನ್‌ಶಾಟ್‌ನಂತೆ ಕಂಡುಬರುವ ಫೋಟೊ ವೈರಲ್ ಆಗಿದೆ. ಚಿತ್ರದಲ್ಲಿ ಜೈ ಶ್ರೀ ರಾಮ್ ಎಂಬ ಪಠ್ಯ ಕೂಡಾ ಇದೆ. ಇದು ನವ ಭಾರತದ ಶಕ್ತಿ. ದುಬೈನ ಬುರ್ಜ್ ಖಲೀಫಾದಲ್ಲಿ ರಾಮ್ ನವಮಿ ಆಚರಣೆ ಎಂಬ ಶೀರ್ಷಿಕೆಯೊಂದಿಗೆ ಫೋಟೋ ವೈರಲ್ ಆಗಿದೆ.
ಇದೇ ಚಿತ್ರ ಟ್ವಿಟರ್‌ನಲ್ಲಿಯೂಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಸ್ಟೋರಿಯಾಗಿ ಹಂಚಿಕೊಂಡ ಚಿತ್ರದಿಂದ ವೈರಲ್ ಚಿತ್ರವನ್ನು ಕ್ರಾಪ್ ಮಾಡಿದಂತೆ ಇದು ಕಾಣುತ್ತದೆ.
Indian ?? muslims should learn something from this
Burj Khalifa#RamNavamiViolence #HindusUnderAttack pic.twitter.com/VxisYIo2UW
— Izlamic Terrorist (@raviagrawal3) March 31, 2023
ಫ್ಯಾಕ್ಟ್ ಚೆಕ್
ಬೂಮ್ ಲೈವ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು, ಬುರ್ಜ್ ಖಲೀಫಾದ ವೆರಿಫೈಡ್ ಫೇಸ್‌ಬುಕ್ ಪುಟವನ್ನು ಪರಿಶೀಲಿಸಿದೆ. ಮಾರ್ಚ್ 30 ರಂದು ಈ ಪುಟದಲ್ಲಿನ ಫೇಸ್‌ಬುಕ್ ಪೋಸ್ಟ್ ಈ ಋತುವಿನ ಕೊನೆಯ ಲೇಸರ್ ಮತ್ತು ಲೈಟ್ ಶೋ ಅನ್ನು ಮಾರ್ಚ್ 31 ರಂದು ನಡೆಯಲಿದೆ ಎಂದು ಘೋಷಿಸಿತು. ಬುರ್ಜ್ ಖಲೀಫಾದ ಪರಿಶೀಲಿಸಿದ ಸಾಮಾಜಿಕ ಮಾಧ್ಯಮ ಪುಟಗಳಾದ Facebook ಮತ್ತು Instagram ನಲ್ಲಿ ರಾಮನವಮಿ ದೃಶ್ಯಗಳನ್ನು ಸೂಚಿಸುವ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ವರದಿಗಳು ಅಥವಾ ಬುರ್ಜ್ ಖಲೀಫಾದಿಂದ ಅಧಿಕೃತ ದೃಢೀಕರಣವೂ ಸಿಕ್ಕಿಲ್ಲ. ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸ್ಟಾಕ್ ಫೋಟೋ ಸೈಟ್‌ಗಳು, ಇಸ್ಟಾಕ್‌ಫೋಟೋ ಮತ್ತು ಅಡೋಬಿ ಸ್ಟಾಕ್‌ನಲ್ಲಿ ಬುರ್ಜ್ ಖಲೀಫಾದ ಚಿತ್ರ ಲಭ್ಯವಿದೆ. ಆದರೆ ರಾಮನ ಫೋಟೊ ಇದರಲಿಲ್ಲ.
ವೈರಲ್ ಫೋಟೋದೊಂದಿಗೆ ಸ್ಟಾಕ್ ಫೋಟೋ ಚಿತ್ರದ ಹೋಲಿಕೆ ಮಾಡಿದಾಗ ಫೋಟೋದ ಇತರ ಅಂಶಗಳು ನಿಖರವಾಗಿ ಹೊಂದಾಣಿಕೆಯಾಗಿರುವುದು ಕಾಣಿಸಿದೆ. ಹೀಗಾಗಿ ವೈರಲ್ ಚಿತ್ರ ಎಡಿಟ್ ಮಾಡಿದ್ದು ಎಂಬುದು ಸ್ಪಷ್ಟ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Mon, 3 April 23