ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ವೈಫೈ ಟವರ್ ಸ್ಥಾಪಿಸುವ ಕೆಲಸಕ್ಕೆ ₹25,000 ನೀಡುತ್ತದೆ ಸರ್ಕಾರ; ಪ್ರಕಟಣೆಯ ಸತ್ಯಾಸತ್ಯತೆ ಏನು?

ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಈ ವರದಿಯ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು , ಅಂತಹ ಯಾವುದೇ ಪ್ರಕಟಣೆಯನ್ನು ಸರ್ಕಾರದಿಂದ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ.

ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ವೈಫೈ ಟವರ್ ಸ್ಥಾಪಿಸುವ ಕೆಲಸಕ್ಕೆ ₹25,000 ನೀಡುತ್ತದೆ ಸರ್ಕಾರ; ಪ್ರಕಟಣೆಯ ಸತ್ಯಾಸತ್ಯತೆ ಏನು?
ಸಾಮಾಜಿಕ ಮಾಧ್ಯಮದಲ್ಲಿ ಹದಿದಾಡುತ್ತಿರುವ ಪ್ರಕಟಣೆ
Updated By: ರಶ್ಮಿ ಕಲ್ಲಕಟ್ಟ

Updated on: Apr 11, 2022 | 5:19 PM

ದೆಹಲಿ: ಡಿಜಿಟಲ್ ಇಂಡಿಯಾ (Digital India)  ವೈಫೈ ನೆಟ್‌ವರ್ಕ್ ಅಡಿಯಲ್ಲಿ ಕೇಂದ್ರ ಸರ್ಕಾರ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಸುಳ್ಳು ಹೇಳಿಕೆಯ ಒಪ್ಪಂದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಹರಿದಾಡುತ್ತಿದೆ. ಡಿಜಿಟಲ್ ಇಂಡಿಯಾ ವೈ-ಫೈ ನೆಟ್‌ವರ್ಕ್ ಅಡಿಯಲ್ಲಿ ಮೊಬೈಲ್ ಟವರ್ ನಿರ್ವಹಣೆಗೆ ತಿಂಗಳಿಗೆ 25,000 ರೂಪಾಯಿ ನೀಡುವುದಾಗಿ ಪತ್ರದಲ್ಲಿ ಭರವಸೆ ನೀಡಲಾಗಿದೆ. ನೋಂದಣಿ ಶುಲ್ಕಕ್ಕಾಗಿ 730 ರೂಪಾಯಿ ಪಾವತಿಸುವಂತೆಯೂ ಪತ್ರದಲ್ಲಿ ತಿಳಿಸಲಾಗಿದೆ. ಒಪ್ಪಂದ ಪತ್ರದ ಪ್ರಕಾರ, 10 ನೇ ತರಗತಿ ಉತ್ತೀರ್ಣರಾದ ಜನರು ಇದಕ್ಕೆ ಅರ್ಹತೆ ಪಡೆದಿರುತ್ತಾರೆ. ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (Press Information Bureau PIB) ಈ  ವರದಿಯ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು , ಅಂತಹ ಯಾವುದೇ ಪ್ರಕಟಣೆಯನ್ನು ಸರ್ಕಾರದಿಂದ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ. ಇದು ಸುಳ್ಳು ಸುದ್ದಿ ಎಂದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ, ವೈ-ಫೈ ನೆಟ್‌ವರ್ಕ್ ಅಡಿಯಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುತ್ತಿದೆ ಎಂದು ಅನುಮೋದನೆ ಪತ್ರದಲ್ಲಿ ಹೇಳಲಾಗಿದೆ. ನೋಂದಣಿ ಶುಲ್ಕದ ನೆಪದಲ್ಲಿ 730 ರೂಪಾಯಿ ಪಾವತಿಸುವಂತೆಯೂ ಪತ್ರದಲ್ಲಿ ತಿಳಿಸಲಾಗಿದೆ. ಇದೆಲ್ಲವೂ ಫೇಕ್ ಎಂದಿದೆ ಪಿಬಿಐ.

ಇದನ್ನೂ ಓದಿ: Fact Check ಬೈಕ್ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕ ಭಗವಂತ್ ಮಾನ್​​ನ ಹಳೇ ಚಿತ್ರ ಎಂದು ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆ ಏನು?