Fact Check | ಶಾರುಖ್ ಖಾನ್​​ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 6:36 PM

ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರ.

Fact Check | ಶಾರುಖ್ ಖಾನ್​​ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ
ಶಾರುಖ್ ಖಾನ್
Follow us on

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್​​ನಂತೆ ಕಾಣುತ್ತಿರುವ ಈ ಯುವಕ ಕಾಶ್ಮೀರದವ ಎಂಬ ಶೀರ್ಷಿಕೆಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರವಾಗಿದೆ.

ಫೇಸ್ ಆ್ಯಪ್​​ನಲ್ಲಿ ಯಾವುದಾದರೊಂದು ಫೋಟೊವನ್ನು ಅಪ್ ಲೋಡ್ ಮಾಡಿ ಫೋಟೊದಲ್ಲಿರುವ ವ್ಯಕ್ತಿಯನ್ನು ಯುವಕನಾಗಿ, ಮಗುವಿನಂತೆ ಕಾಣುವ ಇಲ್ಲವೇ, ಗಡ್ಡ, ಮೀಸೆ ಇರುವಂತೆ ಮಾಡುವ ಅನೇಕ ಫಿಲ್ಟರ್​ಗಳಿವೆ. ಈ ಫಿಲ್ಟರ್​ಗಳನ್ನು ಬಳಸಿ ಶಾರುಖ್ ಖಾನ್ ಫೋಟೊವನ್ನು ಎಡಿಟ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್
ಈ ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ಐ ಲವ್ ಇಂಡಿಯಾ ಡಾಟ್ ಕಾಂ ಎಂಬ ವೆಬ್​ಸೈಟ್​ನಲ್ಲಿ ಪ್ರಕಟವಾದ ಶಾರುಖ್ ಖಾನ್ ಚಿತ್ರವನ್ನು ಫೇಸ್​ಆ್ಯಪ್​ನಲ್ಲಿ ಎಡಿಟ್ ಮಾಡಿದೆ ಎಂದು ಹೇಳಿದೆ.

ಫೇಸ್ ಆ್ಯಪ್ ನಲ್ಲಿ ಎಡಿಟ್ ಮಾಡಿದ ಚಿತ್ರ

Fact Check | ಸೋನಿಯಾಗಾಂಧಿ ‘ಬಾರ್ ಡ್ಯಾನ್ಸರ್’‌ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ