27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರ ಅಘೋರಿ ರೂಪ ಕಂಡು ಬೆಚ್ಚಿಬಿದ್ದ ಕುಟುಂಬ
27 ವರ್ಷಗಳ ಹಿಂದೆ ಕಾಣೆಯಾಗಿದ್ದ ಜಾರ್ಖಂಡ್ ವ್ಯಕ್ತಿ ಅರಘೋರಿ ರೂಪದಲ್ಲಿ ಮಹಾಕುಂಭ ಮೇಳದಲ್ಲಿ ಪತ್ತೆಯಾಗಿದ್ದಾರೆ. ಗಂಗಾ ಸಾಗರ್ ಮೂಲತಃ ಜಾರ್ಖಂಡ್ನವರು 65 ವರ್ಷ ವಯಸ್ಸಿನ ಅವರು ಈಗ ಬಾಬಾ ರಾಜ್‌ಕುಮಾರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1998ರಲ್ಲಿ ಪಾಟ್ನಾಗೆ ಹೋಗಿದ್ದ ನಂತರ ನಾಪತ್ತೆಯಾಗಿದ್ದರು. ಬಳಿಕ ಒಮ್ಮೆಯೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರ ಪತ್ನಿ ಧನ್ವಾ ದೇವಿ ಅವರು ತಮ್ಮ ಇಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ಅವರನ್ನು ಒಬ್ಬಂಟಿಯಾಗಿ ಕಷ್ಟಪಟ್ಟು ಬೆಳೆಸಿದರು.
![27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರ ಅಘೋರಿ ರೂಪ ಕಂಡು ಬೆಚ್ಚಿಬಿದ್ದ ಕುಟುಂಬ](https://images.tv9kannada.com/wp-content/uploads/2025/01/aghori-2.jpg?w=1280)
ಗಂಗಾಸಾಗರ್ ಎಂಬ ವ್ಯಕ್ತಿ 27 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು, ಅವರ ಕುಟುಂಬದವರು ಹುಡುಕದ ಸ್ಥಳವಿಲ್ಲ, ಆದರೆ ಎಲ್ಲಯೂ ಇವರ ಕುರುಹು ದೊರೆತಿರಲಿಲ್ಲ. ಈಗ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಅವರನ್ನು ಅಘೋರಿ ರೂಪದಲ್ಲಿ ಕಂಡು ಕುಟುಂಬದವರು ಬೆಚ್ಚಿಬಿದ್ದಿದ್ದಾರೆ.
ಗಂಗಾ ಸಾಗರ್ ಮೂಲತಃ ಜಾರ್ಖಂಡ್ನವರು 65 ವರ್ಷ ವಯಸ್ಸಿನ ಅವರು ಈಗ ಬಾಬಾ ರಾಜ್‌ಕುಮಾರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1998ರಲ್ಲಿ ಪಾಟ್ನಾಗೆ ಹೋಗಿದ್ದ ನಂತರ ನಾಪತ್ತೆಯಾಗಿದ್ದರು. ಬಳಿಕ ಒಮ್ಮೆಯೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರ ಪತ್ನಿ ಧನ್ವಾ ದೇವಿ ಅವರು ತಮ್ಮ ಇಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ಅವರನ್ನು ಒಬ್ಬಂಟಿಯಾಗಿ ಕಷ್ಟಪಟ್ಟು ಬೆಳೆಸಿದರು.
ಗಂಗಾಸಾಗರ್ ಅವರ ಕಿರಿಯ ಸಹೋದರ ಮುರಳಿ ಯಾದವ್ ಮಾತನಾಡಿ, ಕುಂಭ ಮೇಳದಲ್ಲಿ ನಮ್ಮ ಸಂಬಂಧಿಕರು ಗಂಗಾಸಾಗರ್ ಅವರನ್ನು ಹೋಲುವ ವ್ಯಕ್ತಿಯನ್ನು ಗಮನಿಸಿ ಅವರು ಫೋಟೊ ತೆಗೆದು ಕಳುಹಿಸಿದ್ದರು. ಧನ್ವಿ ದೇವಿ ಹಾಗೂ ಇಬ್ಬರು ಪುತ್ರರು ಅವರನ್ನು ವಾಪಸ್ ಕರೆತರಲೆಂದು ಕುಂಭ ಮೇಳಕ್ಕೆ ಹೋಗಿದ್ದರು. ಅವರು ಮೇಳದಲ್ಲಿ ಬಾಬಾ ರಾಜ್‌ಕುಮಾರ್ ಅವರನ್ನು ಭೇಟಿಯಾದಾಗ, ಅವರು ತಮ್ಮ ಹಿಂದಿನ ಗುರುತನ್ನು ಗಂಗಾಸಾಗರ್ ಯಾದವ್ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು.
ಮತ್ತಷ್ಟು ಓದಿ: ಅಘೋರಿಗಳ ನಿಗೂಢ ಲೋಕ; ಅವರೇಕೆ ಶವಗಳ ಜೊತೆ ಇರುತ್ತಾರೆ?
ಉದ್ದವಾದ ಹಲ್ಲುಗಳು, ಅವರ ಹಣೆಯ ಮೇಲೆ ಗಾಯ ಮತ್ತು ಮೊಣಕಾಲಿನ ಮೇಲೆ ಗಮನಾರ್ಹವಾದ ಗಾಯದಂತಹ ವಿವರಗಳನ್ನು ಗುರುತಿಸಿದರು. ಧನ್ವಾ ದೇವಿ ಮತ್ತು ಮುರಳಿ ಯಾದವ್ ಅವರು ವ್ಯಕ್ತಿಯ ನಿಜವಾದ ಗುರುತನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.
ನಾವು ಕುಂಭಮೇಳ ಮುಗಿಯುವವರೆಗೂ ಕಾಯುತ್ತೇವೆ ಮತ್ತು ಅಗತ್ಯವಿದ್ದರೆ, ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುತ್ತೇವೆ. ಪರೀಕ್ಷೆಯು ಹೊಂದಾಣಿಕೆಯಾಗದಿದ್ದರೆ, ನಾವು ಬಾಬಾ ರಾಜ್‌ಕುಮಾರ್‌ಗೆ ಕ್ಷಮೆಯಾಚಿಸುತ್ತೇವೆ ಎಂದು ಮುರಳಿ ಯಾದವ್ ಹೇಳಿದ್ದಾರೆ. ಗಂಗಾಸಾಗರ್ ನಾಪತ್ತೆಯಾಗಿದ್ದು ಅವರ ಕುಟುಂಬದ ಮೇಲೆ ಅದರಲ್ಲೂ ಪುಟ್ಟ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿತ್ತು. ಹಿರಿಯ ಮಗನಿಗೆ ಆಗ ಕೇವಲ ಎರಡು ವರ್ಷ, ಕಿರಿಯ ಮಗ ಇನ್ನೂ ಪತ್ನಿಯ ಹೊಟ್ಟೆಯೊಳಗಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ