AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ, ಸ್ನೇಹಿತನ ಕೊನೆಯ ಆಸೆಯಂತೆ ಅಂತ್ಯಕ್ರಿಯೆ ವೇಳೆ ಕುಣಿದ ವ್ಯಕ್ತಿ

ವ್ಯಕ್ತಿಯೊಬ್ಬ ಸ್ನೇಹಿತನ ಅಂತ್ಯಕ್ರಿಯೆ ವೇಳೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಇವರೆಂಥಾ ಸ್ನೇಹಿತ ಎಂದು ಕೇಳಬೇಡಿ, ಇವರಂಥಾ ಸ್ನೇಹಿತ ಇನ್ಯಾರೂ ಇರಲು ಸಾಧ್ಯವಿಲ್ಲ. ತನ್ನ ಸ್ನೇಹಿತನ ಕೊನೆಯ ಆಸೆಯಂತೆ ಮನಸ್ಸಿನಲ್ಲಿ ದುಃಖ ಬೆಟ್ಟದಷ್ಟಿದ್ದರೂ ಅದನ್ನು ತೋರಿಸಿಕೊಳ್ಳದೆ ನೃತ್ಯ ಮಾಡಿದ್ದಾರೆ. ಮೃತರ ಪುತ್ರ ಮುಖೇಶ್ ಜೈನ್, ತಮ್ಮ ತಂದೆ 2023 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಬ್ಬದಂತೆ ತಮ್ಮ ಸಾವನ್ನು ಆಚರಿಸಲು ಬಯಸಿದ್ದರು. ಜನರು ಡಿಜೆ ಜೊತೆ ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆನಂದಿಸಬೇಕೆಂದು ಅವರು ಬಯಸಿದ್ದರು

Video: ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ, ಸ್ನೇಹಿತನ ಕೊನೆಯ ಆಸೆಯಂತೆ ಅಂತ್ಯಕ್ರಿಯೆ ವೇಳೆ ಕುಣಿದ ವ್ಯಕ್ತಿ
ಸ್ನೇಹಿತನಿಗೆ ಅಂತಿಮ ವಿದಾಯ
ನಯನಾ ರಾಜೀವ್
|

Updated on:Jul 31, 2025 | 12:10 PM

Share

ಮಂದಸೌರ್, ಜುಲೈ 31: ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ ಉಮ್ಮಳಿಸಿ ಬರುತ್ತಿದ್ದರೂ ತೋರಿಸಿಕೊಳ್ಳದೆ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಅವರ ಕೊನೆಯ ಆಸೆಯಂತೆ ವ್ಯಕ್ತಿಯೊಬ್ಬರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಮಂದಸೌರ್​​ನಲ್ಲಿ ನಡೆದಿದೆ. ಮಂದಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ಬುಧವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಮೃತ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಲು ನೃತ್ಯಮಾಡಿ ಕಣ್ಣಂಚಲ್ಲಿ ನೀಡಿದ್ದರೂ ಮುಖದಲ್ಲಿ ನಗು ತಂದುಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸೋಹಲ್ ಲಾಲ್ ಜೈನ್ ಎಂಬುವವರು ಕ್ಯಾನ್ಸರ್​​ನಿಂದ ಬಳಲುತ್ತಿದ್ದರು, ತನ್ನ ಆತ್ಮೀಯ ಗೆಳೆಯ ಅಂಬಾಲಾಲ್​​ ಪ್ರಜಾಪತಿಗೆ ಪತ್ರ ಬರೆದು, ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ನೃತ್ಯ ಮಾಡಬೇಕೆಂದು ಬಯಸಿದ್ದರು.

ಮತ್ತಷ್ಟು ಓದಿ: Viral News: ತಾಯಿ ಬದುಕಿರುವಾಗಲೇ ಶವ ಪೆಟ್ಟಿಗೆ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ವ್ಯಕ್ತಿ

ನನ್ನ ಅಂತ್ಯಕ್ರಿಯೆ ನಡೆಯುವಾಗ ಆತ ಅಳು ಮೊಗದಲ್ಲಿ ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು ಆಶಿಸಿದ್ದರು. ಕಣ್ಣೀರು ಹಾಗೂ ನಗುವಿನ ಈ ಸಂಗಮವನ್ನು ನೋಡಿ ಗ್ರಾಮಸ್ಥರು ಭಾವುಕರಾದರು. ಎಲ್ಲರೂ ಈ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ ಮೆಚ್ಚಿದ್ದಾರೆ. ಇಂದಿನ ಕಾಲದಲ್ಲಿ ಇಂಥಾ ಸ್ನೇಹ ಅಪರೂಪ ಎಂದು ಜನರು ಕೊಂಡಾಡಿದರು.

ವಿಡಿಯೋ

ಮೃತರ ಪುತ್ರ ಮುಖೇಶ್ ಜೈನ್, ತಮ್ಮ ತಂದೆ 2023 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಬ್ಬದಂತೆ ತಮ್ಮ ಸಾವನ್ನು ಆಚರಿಸಲು ಬಯಸಿದ್ದರು. ಜನರು ಡಿಜೆ ಜೊತೆ ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆನಂದಿಸಬೇಕೆಂದು ಅವರು ಬಯಸಿದ್ದರು.ತಮ್ಮ ತಂದೆಯ ಕೊನೆಯ ಪ್ರಯಾಣ ಅವರ ಆಶಯದಂತೆ ನಡೆದಿದ್ದಕ್ಕೆ ಕುಟುಂಬವು ಸಂತೋಷವಾಗಿದೆ ಎಂದು ಮುಖೇಶ್ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:10 pm, Thu, 31 July 25

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ