AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ತಾಯಿ ಬದುಕಿರುವಾಗಲೇ ಶವ ಪೆಟ್ಟಿಗೆ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ವ್ಯಕ್ತಿ

ಮಗ ತಾಯಿ ಬದುಕಿರುವಾಗಲೇ ಶವಪೆಟ್ಟಿಗೆ ತರಿಸಿ ಆಕೆಯನ್ನು ಅದರಲ್ಲಿ ಕೂರಿಸಿ ಮೆರವಣಿಗೆ ಮಾಡಿಸಿರುವ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. ಶವ ಪೆಟ್ಟಿಗೆಯನ್ನು ಹೊತ್ತು ಮೆರವಣಿಗೆ ಮಾಡಲು 16 ಜನರನ್ನು ಅವರು ಕರೆಸಿದ್ದರು. ಆ ವ್ಯಕ್ತಿ ಆ ರೀತಿ ನಡೆದುಕೊಂಡಿದ್ದೇಕೆ ಎಂಬುದನ್ನು ನೋಡೋಣ. ವ್ಯಕ್ತಿ ಶವಪಟ್ಟಿಗೆಯನ್ನು ಖರೀದಿಸಿದ ಬಳಿಕ 70 ವರ್ಷದ ತಾಯಿಯನ್ನು ಅದರಲ್ಲಿ ಕೂರಿಸಿ ಮನೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ.

Viral News: ತಾಯಿ ಬದುಕಿರುವಾಗಲೇ ಶವ ಪೆಟ್ಟಿಗೆ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ವ್ಯಕ್ತಿ
ಶವಪೆಟ್ಟಿಗೆ
ನಯನಾ ರಾಜೀವ್
|

Updated on: Jul 13, 2025 | 11:06 AM

Share

ಚೀನಾ, ಜುಲೈ 13: ಹಿರಿ ಜೀವಗಳು ಹೆಚ್ಚು ವರ್ಷ ಬದುಕಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಹಲವು ಆಚರಣೆಗಳನ್ನು ಜನರು ಮಾಡುವುದನ್ನು ಭಾರತದಲ್ಲಿ  ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಗ ತಾಯಿ ಬದುಕಿರುವಾಗಲೇ ಶವಪೆಟ್ಟಿಗೆ ತರಿಸಿ ಆಕೆಯನ್ನು ಅದರಲ್ಲಿ ಕೂರಿಸಿ ಮೆರವಣಿಗೆ ಮಾಡಿಸಿರುವ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. ಶವ ಪೆಟ್ಟಿಗೆಯನ್ನು ಹೊತ್ತು ಮೆರವಣಿಗೆ ಮಾಡಲು 16 ಜನರನ್ನು ಅವರು ಕರೆಸಿದ್ದರು. ಆ ವ್ಯಕ್ತಿ ಆ ರೀತಿ ನಡೆದುಕೊಂಡಿದ್ದೇಕೆ ಎಂಬುದನ್ನು ನೋಡೋಣ.

ವ್ಯಕ್ತಿ ಶವಪಟ್ಟಿಗೆಯನ್ನು ಖರೀದಿಸಿದ ಬಳಿಕ 70 ವರ್ಷದ ತಾಯಿಯನ್ನು ಅದರಲ್ಲಿ ಕೂರಿಸಿ ಮನೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ.ಶವಪೆಟ್ಟಿಗೆಯನ್ನು ಶವವಾಹನದ ಮೇಲೆ ಇರಿಸಲಾಯಿತು. ಶವ ಪೆಟ್ಟಿಗೆಯ ಒಳಗೆ ಮಹಿಳೆ ಕುಳಿತಿದ್ದರು. ಬ್ಯಾಂಡ್ ನುಡಿಸಲಾಗುತ್ತಿತ್ತು. ಇದು ನೋಡಲು ನಿಜವಾದ ಶವ ಮೆರವಣಿಗೆಯಂತೆಯೇ ಇತ್ತು.

ಇದು ಚೀನಾದ ಗ್ರಾಮೀಣ ಭಾಗದಲ್ಲಿ ಆಚರಿಸುವ ಸಾಂಪ್ರದಾಯಿಕ ಆಚರಣೆಯಾಗಿದೆ. ದಕ್ಷಿಣ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಡೆಯ ಟಾವೊಯುವಾನ್ ಕೌಂಟಿಯ ಶುವಾಂಗ್ಕ್ಸಿಕೌ ಪಟ್ಟಣದ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದಾರೆ. ಈ ಆಚರಣೆ ಮಾಡುವುದರಿಂದ ತಾಯಿಯ ಆಯಸ್ಸು ಹೆಚ್ಚಾಗುತ್ತದೆ ಎಂಬುದು ನಂಬಿಕೆಯಾಗಿದೆ. ಸಾಮಾನ್ಯವಾಗಿ ವೃದ್ಧರು ಇದರಿಂದ ತುಂಬಾ ಸಂತೋಷಪಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಿಲ್ಲ.

ಮತ್ತಷ್ಟು ಓದಿ: ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ

ಅದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಈ ಆಚರಣೆಗೆ 2.4 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ. ವಯಸ್ಸಾದ ತಾಯಿಗೆ ಶವಪೆಟ್ಟಿಗೆಯನ್ನು ಖರೀದಿಸುವುದು ಅವರ ದೀರ್ಘಾಯುಷ್ಯವನ್ನು ಹಾರೈಸುವ ಸಾಂಕೇತಿಕ ಸೂಚಕವಾಗಿದೆ.

ಶವಪೆಟ್ಟಿಗೆಯನ್ನು ಹೊರುವವರ ಸಂಖ್ಯೆಯ ಬಗ್ಗೆ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲದಿದ್ದರೂ, ಪದ್ಧತಿಗಳ ಪ್ರಕಾರ, ಶವಪೆಟ್ಟಿಗೆಯನ್ನು ಸಾಮಾನ್ಯವಾಗಿ ಎಂಟು ಅಥವಾ ಹದಿನಾರು ಜನರು ಹೊತ್ತೊಯ್ಯುತ್ತಾರೆ. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಶವ ಪೆಟ್ಟಿಗೆ ನೆಲದ ಮೇಲೆ ಇರಿಸದಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು