Dehli Chalo: ಬಗೆಹರಿಯಲಿಲ್ಲ ರೈತರ ಸಮಸ್ಯೆ, ಡಿ.14ರಂದು ದೇಶಾದ್ಯಂತ ಪ್ರತಿಭಟನೆ, ಬಿಜೆಪಿ ಕಚೇರಿ ಮುತ್ತಿಗೆಗೆ ಕರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 09, 2020 | 9:00 PM

ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯದಿದ್ದರೆ ದೇಶದ ಆಹಾರ ಸರಪಳಿಗೆ ಕುತ್ತು ಬರಲಿದೆ. ಈ ಕಾನೂನುಗಳನ್ನು ಪ್ರಜಾಸತ್ತಾತ್ಮಕವಾಗಿ ಜಾರಿಗೊಳಿಸಿಲ್ಲ ಎಂದು ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

Dehli Chalo: ಬಗೆಹರಿಯಲಿಲ್ಲ ರೈತರ ಸಮಸ್ಯೆ, ಡಿ.14ರಂದು ದೇಶಾದ್ಯಂತ ಪ್ರತಿಭಟನೆ, ಬಿಜೆಪಿ ಕಚೇರಿ ಮುತ್ತಿಗೆಗೆ ಕರೆ
ದೆಹಲಿ ಚಲೋದಲ್ಲಿ ಪಂಜಾಬ್ ರೈತರು (ಸಂಗ್ರಹ ಚಿತ್ರ)
Follow us on

ದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವ ತಿರಸ್ಕರಿಸಿರುವ ರೈತ ನಾಯಕರು ಡಿ.14ರಂದು ಇಡೀ ದೇಶದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಜೊತೆಗೆ, ಡಿಸೆಂಬರ್ 12ರಂದು ದೆಹಲಿ-ಜೈಪುರ ಮತ್ತು ದೆಹಲಿ-ಆಗ್ರಾ ಹೆದ್ದಾರಿಗಳನ್ನು ತಡೆಯುವುದಾಗಿ ಘೋಷಿಸಿರುವ ರೈತರು, ಅಂದು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ. ದೇಶದ ಇತರ ಭಾಗಗಳ ರೈತರ ಬಳಿ ದೆಹಲಿ ಚಲೋ ಸೇರಲು ಕರೆ ಕೊಟ್ಟಿದ್ದಾರೆ.

ಇತ್ತ 5 ವಿಪಕ್ಷ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್​ರನ್ನು ಭೇಟಿಯಾದರು. ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯದಿದ್ದರೆ ದೇಶದ ಆಹಾರ ಸರಪಳಿಗೆ ಕುತ್ತು ಬರಲಿದೆ. ಈ ಕಾನೂನುಗಳನ್ನು ಪ್ರಜಾಸತ್ತಾತ್ಮಕವಾಗಿ ಜಾರಿಗೊಳಿಸಿಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಪಂಜಾಬ್ ರೈತರನ್ನು ಕೊರೆಯುವ ಚಳಿಯಲ್ಲಿಟ್ಟಿರುವ ಕೇಂದ್ರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದವು. ಈವರೆಗೆ 25 ರಾಜಕೀಯ ಪಕ್ಷಗಳು ನೂತನ ಕೃಷಿ ಕಾಯಿದೆಗೆ ವಿರೋಧ ವ್ಯಕ್ತಪಡಿಸಿವೆ.

APMC ಕಾಯಿದೆ​ಗೆ 8 ತಿದ್ದುಪಡಿ! ಕೇಂದ್ರ ಸರ್ಕಾರದ ಪ್ರಸ್ತಾವನೆಯಲ್ಲಿ ಏನಿದೆ? ಇಲ್ಲಿದೆ ವಿವರ..

Published On - 8:59 pm, Wed, 9 December 20