ಇನ್ನು ಮುಂದೆ ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಅಲ್ಲವಂತೆ! ಮತ್ತಿನ್ನೇನು ಗೊತ್ತಾ?

|

Updated on: Feb 15, 2024 | 3:55 PM

ಗೋವುಗಳ ಉಚ್ಚ್ವಾಸ -ನಿಚ್ಛ್ವಾಸ ನಮ್ಮ ಶ್ವಾಸಕ್ಕೆ ತಂಗಾಳಿಯಾಗಿ ಸಂಗಾತಿಯಾದರೆ .. ನಮ್ಮ ಉಸಿರಿನ ಮೂಲಕ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸುತ್ತದೆ, ಮನಸ್ಸು ಶಾಂತವಾಗಿರುತ್ತದೆ ಎಂದು ‘ಅಖಿಲ ಭಾರತ ಗೋ ಸೇವಾ ಪ್ರತಿಷ್ಠಾನ’ ಸಂಸ್ಥೆಯ ಬಾಲಕೃಷ್ಣಗೌಡ ಹೇಳಿದರು.

ಇನ್ನು ಮುಂದೆ ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಅಲ್ಲವಂತೆ! ಮತ್ತಿನ್ನೇನು ಗೊತ್ತಾ?
ಇನ್ನು ಮುಂದೆ ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಅಲ್ಲವಂತೆ!
Follow us on

ಫೆಬ್ರವರಿ 14 ಅನ್ನುತ್ತಿದ್ದಂತೆ ಕೆಲವರಿಗೆ ಮೈಮನಗಳಲ್ಲಿ ಪ್ರೇಮಿಗಳ ದಿನ (Valentine’s Day) ನೆನಪಾಗುತ್ತದೆ. ಆದರೆ ಇತರರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸೂಚಕವಾಗಿ ಕರಾಳ ದಿನವನ್ನು ಆಚರಿಸುತ್ತಾರೆ. ಆದರೆ ಇವೆರಡಕ್ಕಿಂತಲೂ ಭಿನ್ನವಾಗಿ ಗೋ ದಿನ (Cow Hug Day) ಆಚರಿಸಲಾಗುತ್ತದೆ. ಭಾರತವು ಸನಾತನ ಧರ್ಮ, ಪ್ರೀತಿ ಮತ್ತು ಮೌಲ್ಯಗಳಿಗೆ ಹೆಸರುವಾಸಿ. ಇಂತಹ ದೇಶದಲ್ಲಿ ತಾಯಿಯ ನಂತರ ಗೋವಿಗೆ ಪರಮ ಪ್ರೀತಿ ಗೌರವ ಸಲ್ಲುತ್ತದೆ ( Milk producers).

ಹಾಗಾಗಿಯೇ ನಮಗೆ ಪಾಶ್ಚಿಮಾತ್ಯ ಸಂಸ್ಕೃತಿಯ ‘ವ್ಯಾಲೆಂಟೈನ್ಸ್​​ ಡೆ’ ಇಷ್ಟವಾಗದು. ಹಾಗಾಗಿಯೇ ‘ಪ್ರೇಮಿಗಳ ದಿನ’ವನ್ನು ಗೋವುಗಳ ದಿನಾಚರಣೆ ಮಾಡಲಾಗುತ್ತದೆ ಎಂದು ಬಾಲಕೃಷ್ಣಗೌಡ ಹೇಳುತ್ತಾರೆ. ಹಾಗಾಗಿಯೇ ಹೈದರಾಬಾದ್‌ನ ಲೋವರ್ ಟ್ಯಾಂಕ್ ಬಂಡ್‌ನಲ್ಲಿರುವ ಗೋಶಾಲೆಯಲ್ಲಿ ಹಸುಗಳನ್ನು ಪ್ರೀತಿಯಿಂದ ಮುದ್ದಾಡುವ ಮೂಲಕ ಹಸು ಪ್ರೇಮ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

‘ಅಖಿಲ ಭಾರತ ಗೋ ಸೇವಾ ಪ್ರತಿಷ್ಠಾನ’ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಲವು ಗೋ ಪ್ರೇಮಿಗಳು ಪಾಲ್ಗೊಂಡಿದ್ದರು. ‘ಲವರ್ಸ್ ಡೇ ಬೇಡ… ಮುದ್ದು ಮುದ್ದಾದ ಕೌ ಹಗ್ ಡೇ’ ಆಚರಿಸೋಣ ಎಂಬ ಪ್ಲೆಕಾರ್ಡ್ ಗಳನ್ನು ಪ್ರದರ್ಶಿಸಲಾಯಿತು. ಅಲ್ಲಿನ ಗೋಶಾಲೆಯಲ್ಲಿ ಸಾಕಿದ ಗೋವುಗಳಿಗೆ ಗೋರಕ್ಷಕರು ವಿಶೇಷ ಪೂಜೆ ಸಲ್ಲಿಸಿದರು. ಅವುಗಳನ್ನು ಆಪ್ಯಾಯತೆಯಿಂದ ಅಪ್ಪಿ ಮುದ್ದಾಡುವ ಮೂಲಕ ವಿಶೇಷ ಅನುಭೂತಿ ಪಡೆದರು.

‘ಗೋವನ್ನು ಉಳಿಸಿ.. ಭೂಮಿ ಉಳಿಸಿ’, ‘ಜೈ ಗೋಮಾತಾ’ ಘೋಷಣೆಗಳು ಮೊಳಗಿದವು. ‘ಅಖಿಲ ಭಾರತ ಗೋಸೇವಾ ಪ್ರತಿಷ್ಠಾನ’ದ ಅಧ್ಯಕ್ಷ ಬಾಲಕೃಷ್ಣಗೌಡ, ಗೋವು ಪಾಲನೆಯನ್ನು ಆಚರಿಸಬೇಕು ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. ಗೋವುಗಳನ್ನು ರಕ್ಷಿಸುವ ಅವಶ್ಯಕತೆ ಪ್ರತಿಯೊಬ್ಬ ಭಾರತೀಯನ ಮೇಲಿದೆ. ಫೆಬ್ರವರಿ 14 ರಂದು ರಾಷ್ಟ್ರೀಯ ಗೋವಿನ ಆಲಿಂಗನ ದಿನವನ್ನಾಗಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ, ಕೆಲವು ಮಹಿಳೆಯರು ಮತ್ತು ಹಸು ಪ್ರೇಮಿಗಳು ಹಸು, ಕರುಗಳನ್ನು ಎತ್ತಿಕೊಂಡು ಪ್ರೀತಿಯಿಂದ ಮುದ್ದಾಡಿದರು. ಅವರೊಂದಿಗೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.

ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಪ್ರಾಣಿಗಳನ್ನು ಸಂರಕ್ಷಿಸಲು ಸ್ವಯಂ ಪ್ರೇರಿತವಾಗಿ ಹಲವು ಸೇವಾ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ಕೈಗೊಳ್ಳುತ್ತಿರುವುದಾಗಿ ಬಾಲಕೃಷ್ಣಗೌಡ ತಿಳಿಸಿದರು. ಗೋವುಗಳಿಗೂ ಸೀಮಂತ ಕಾರ್ಯಕ್ರಮಗಳನ್ನು ನಡೆಸಿಕೊಂಡುಬಂದಿದ್ದಾರೆ.