Electoral bonds: ಚುನಾವಣಾ ಬಾಂಡ್ ನಿಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ್ದು ಎಷ್ಟು ಪಾಲು?

ಚುನಾವಣಾ ಆಯೋಗಕ್ಕೆ ನೀಡಿದ ಘೋಷಣೆಗಳ ಪ್ರಕಾರ ಬಿಜೆಪಿ 2017-2022ರ ಅವಧಿಯಲ್ಲಿ ಬಾಂಡ್‌ಗಳ ಮೂಲಕ 5,271.97 ಕೋಟಿ ರೂ. ಸಂಗ್ರಹಿಸಿದೆ. ಅದೇ ವೇಳೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು 952.29 ಕೋಟಿ ರೂ ಸಂಗ್ರಹಿಸಿದೆ. 2022-2023ರ ಹಣಕಾಸು ವರ್ಷಕ್ಕೆ ಪಕ್ಷಗಳ ವಾರ್ಷಿಕ ವರದಿಗಳನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.

Electoral bonds: ಚುನಾವಣಾ ಬಾಂಡ್ ನಿಧಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ್ದು ಎಷ್ಟು ಪಾಲು?
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Feb 15, 2024 | 4:49 PM

ದೆಹಲಿ ಫೆಬ್ರುವರಿ 15: ಚುನಾವಣಾ ಬಾಂಡ್‌ಗಳ ಯೋಜನೆಯನ್ನು (electoral bonds scheme )ಪರಿಚಯಿಸಿದ ಆರು ವರ್ಷಗಳಲ್ಲಿ, ಬಾಂಡ್‌ಗಳ ಮೂಲಕ ನೀಡಲಾದ ನಿಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅಥವಾ ಶೇ57 ಬಿಜೆಪಿಗೆ (BJP) ಹೋಗಿದೆ. ಚುನಾವಣಾ ಆಯೋಗಕ್ಕೆ (Election Commission) ನೀಡಿದ ಘೋಷಣೆಗಳ ಪ್ರಕಾರ ಪಕ್ಷವು 2017-2022ರ ನಡುವೆ ಬಾಂಡ್‌ಗಳ ಮೂಲಕ 5,271.97 ಕೋಟಿ ರೂ. ಸಂಗ್ರಹಿಸಿದೆ. ಅದೇ ವೇಳೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು 952.29 ಕೋಟಿ ರೂ ಸಂಗ್ರಹಿಸಿದೆ. 2022-2023ರ ಹಣಕಾಸು ವರ್ಷಕ್ಕೆ ಪಕ್ಷಗಳ ವಾರ್ಷಿಕ ವರದಿಗಳನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ. ರಾಜಕೀಯ ಪಕ್ಷಗಳಿಗೆ ಅನಾಮಧೇಯ ನಿಧಿಯನ್ನು ಅನುಮತಿಸುವ ಕೇಂದ್ರದ ಯೋಜನೆಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಸರ್ವಾನುಮತದ ತೀರ್ಪಿನಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು “ವಿತರಿಸುವ ಬ್ಯಾಂಕ್ ಈ ಮೂಲಕ ಚುನಾವಣಾ ಬಾಂಡ್‌ಗಳ ವಿತರಣೆಯನ್ನು ನಿಲ್ಲಿಸುತ್ತದೆ” ಎಂದು ನಿರ್ದೇಶಿಸಿದ್ದು “ಏಪ್ರಿಲ್ 12, 2019 ರ ನ್ಯಾಯಾಲಯದ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಗೆ ಕೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, “ರಾಜಕೀಯ ಪಕ್ಷಗಳಿಗೆ ಅನಿಯಮಿತ ಕಾರ್ಪೊರೇಟ್ ನಿಧಿಯನ್ನು ಅನುಮತಿಸುವ ಕಂಪನಿಗಳ ಕಾಯಿದೆಯ ಸೆಕ್ಷನ್ 182(1) ರ ನಿಬಂಧನೆಯನ್ನು ಅಳಿಸುವುದು ನಿರ್ಧಾರಗಳು ಅಥವಾ ತೆಗೆದುಕೊಂಡ ಕ್ರಮಗಳು ಸ್ಥಾಪಿತ ಸತ್ಯಗಳನ್ನು ಆಧರಿಸಿರುವುದಿಲ್ಲ, ಬದಲಿಗೆ ಹೆಚ್ಚಿನ ಭಾಗದಲ್ಲಿ ಅಭಿಪ್ರಾಯಗಳನ್ನು ಆಧರಿಸಿವೆ. ಇವು ಆರ್ಟಿಕಲ್ 14 ರ ಉಲ್ಲಂಘನೆಯಾಗಿದೆ ಎಂದು ಹೇಳಿವೆ.

ಜನವರಿ 2, 2018 ರಂದು ನರೇಂದ್ರ ಮೋದಿ ಸರ್ಕಾರವು ಸೂಚಿಸಿದ ಯೋಜನೆಯಡಿಯಲ್ಲಿ, ಭಾರತದ ಯಾವುದೇ ನಾಗರಿಕರು ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ಘಟಕದಿಂದ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ನಗದು ದೇಣಿಗೆಗೆ ಪರ್ಯಾಯವಾಗಿ ಮತ್ತು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಮಾರ್ಗವಾಗಿ ಇದನ್ನು ಪಿಚ್ ಮಾಡಲಾಯಿತು. ಆರ್‌ಟಿಐ ಮೂಲಕ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪಡೆದ ಮಾಹಿತಿಯ ಪ್ರಕಾರ 2017-2018 ಮತ್ತು 2021-2022 ರ ನಡುವಿನ ಅವಧಿಯಲ್ಲಿ, 9,208.23 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಚುನಾವಣಾ ಆಯೋಗಕ್ಕೆ ಗೆ ಪಕ್ಷಗಳು ಸಲ್ಲಿಸಿದ ವಾರ್ಷಿಕ ಲೆಕ್ಕಪರಿಶೋಧಕ ಖಾತೆ ಹೇಳಿಕೆಗಳ ವಿಶ್ಲೇಷಣೆಯು ಬಿಜೆಪಿಗೆ ಬಾಂಡ್‌ಗಳ ಮೂಲಕ 2017-2018 ರಿಂದ 2021-2022 ರವರೆಗೆ ಸಿಕ್ಕಿದ್ದು 5,271.97 ಕೋಟಿ ರೂ. ಎಂದು ಹೇಳಿದೆ.  ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್‌ಗಳ ನಿಧಿಯ ದೊಡ್ಡ ಸ್ವೀಕೃತದಾರರಾಗಿದ್ದಾರೆ, 2011 ರಿಂದ ಪಶ್ಚಿಮ ಬಂಗಾಳದಲ್ಲಿ ಸರ್ಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ವರ್ಷಗಳಲ್ಲಿ 767.88 ಕೋಟಿ ರೂಪಾಯಿಗಳ ಕೊಡುಗೆಗಳನ್ನು ಘೋಷಿಸಿ, ಬಿಜೆಪಿ ಮತ್ತು ಕಾಂಗ್ರೆಸ್ ನಂತರ ಮೂರನೇ ಸ್ಥಾನದಲ್ಲಿದೆ.

ಒಡಿಶಾದ ಆಡಳಿತಾರೂಢ ಬಿಜು ಜನತಾ ದಳವು 2018-2019 ಮತ್ತು 2021-2022 ರ ನಡುವೆ ಚುನಾವಣಾ ಬಾಂಡ್‌ಗಳಲ್ಲಿ 622 ಕೋಟಿ ರೂ ಪಡೆದಿದ್ದು. 2000 ರಿಂದ ರಾಜ್ಯವನ್ನು ಆಳಿದ ಪಕ್ಷವು ಯೋಜನೆಯ ಮೊದಲ ವರ್ಷದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ಕೊಡುಗೆಗಳನ್ನು ಘೋಷಿಸಲಿಲ್ಲ.

2021 ರಿಂದ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ, 2019-2020 ರಿಂದ 2021-2022 ರವರೆಗಿನ ಮೂರು ವರ್ಷಗಳಲ್ಲಿ 431.50 ಕೋಟಿ ರೂಪಾಯಿಗಳ ಕೊಡುಗೆಗಳನ್ನು ಘೋಷಿಸಿತು. ಹಿಂದಿನ ಎರಡು ಆರ್ಥಿಕ ವರ್ಷಗಳಿಗೆ ಅದರ ಹೇಳಿಕೆಗಳಲ್ಲಿ ಅದು ಯಾವುದೇ ಚುನಾವಣಾ ಬಾಂಡ್ ಕೊಡುಗೆಗಳನ್ನು ಹೊಂದಿಲ್ಲ.

ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಮತ್ತು ಇತ್ತೀಚೆಗೆ ರಾಷ್ಟ್ರೀಯ ಪಕ್ಷವಾಗಿ ಮಾರ್ಪಟ್ಟಿರುವ ಆಮ್ ಆದ್ಮಿ ಪಕ್ಷವು “ಚುನಾವಣಾ ಬಾಂಡ್ / ಚುನಾವಣಾ ಟ್ರಸ್ಟ್” ವಿಭಾಗದಲ್ಲಿ ವರ್ಷಗಳಲ್ಲಿ 48.83 ಕೋಟಿ ರೂಪಾಯಿಗಳ ಕೊಡುಗೆಗಳನ್ನು ಸ್ವೀಕರಿಸಿದೆ ಎಂದು ಘೋಷಿಸಿತು. ಕೇವಲ ಬಾಂಡ್‌ಗಳ ಮೂಲಕ ಎಷ್ಟು ಮೊತ್ತ ಸ್ವೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಇದನ್ನೂ ಓದಿ: Electoral Bonds: ರಾಜಕೀಯ ಪಕ್ಷಗಳ ನಿಧಿಯ ಬಗ್ಗೆ ಮಾಹಿತಿ ಅತ್ಯಗತ್ಯ: ಚುನಾವಣಾ ಬಾಂಡ್​ ಅಸಂವಿಧಾನಿಕ ಎಂದ ಸುಪ್ರೀಂ

ಹಲವಾರು ವರ್ಷಗಳಿಂದ ಬಿಹಾರದಲ್ಲಿ ಅಧಿಕಾರದಲ್ಲಿರುವ ಜೆಡಿಯು ವಿವಿಧ ಒಕ್ಕೂಟಗಳ ಮುಖ್ಯಸ್ಥರಾಗಿ 2019-2020 ರಿಂದ 2021-2022 ರವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು 24.40 ಕೋಟಿ ರೂ ಸ್ವೀಕರಿಸಿದೆ. ಆಡಳಿತರೂಢವಲ್ಲದ ಪಕ್ಷಗಳಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಎನ್‌ಸಿಪಿ ಪಡೆದ ಕೊಡುಗೆಯು 51.5 ಕೋಟಿ ರೂ. ಸಿಪಿಐ, ಸಿಪಿಐ(ಎಂ), ಬಿಎಸ್‌ಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಮೇಘಾಲಯದ ಆಡಳಿತ ಪಕ್ಷ) ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ಕೊಡುಗೆಯನ್ನು ಪಡೆದಿಲ್ಲ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ