ಚುನಾವಣಾ ಬಾಂಡ್, ಇಲ್ಲಿಯವರೆಗೆ ಸಂಗ್ರಹವಾದ ಹಣ ಎಷ್ಟು? ರಾಜಕೀಯ ಪಕ್ಷಗಳಿಗೆ ಚಿನ್ನದ ಮೊಟ್ಟೆಯಾಗಿದ್ದ ಈ ಬಾಂಡ್​ಗೆ ಸುಪ್ರೀಂ ಕೊಕ್ಕೆ

SBI Issues Electoral Bonds Worth Rs 16,518 Crore Since 2018: ಚುನಾವಣಾ ಬಾಂಡ್ ಅಸಂವಿಧಾನಿಕವಾಗಿದ್ದು, ಅದರ ವಿತರಣೆ ಕೂಡಲೇ ನಿಲ್ಲಿಸುವಂತೆ ಎಸ್​ಬಿಐಗೆ ಸುಪ್ರೀಂಕೋರ್ಟ್ ತಿಳಿಸಿದೆ. 2018ರಲ್ಲಿ ಆರಂಭಗೊಂಡ ಎಲೆಕ್ಟೋರಲ್ ಬಾಂಡ್ ಯೋಜನೆಯಲ್ಲಿ ಬಾಂಡ್ ವಿತರಣೆ ಎಸ್​ಬಿಐ ಮಾತ್ರವೇ ಮಾಡುವುದು. ಇಲ್ಲಿಯವರೆಗೆ 16,518 ಕೋಟಿ ರೂ ಮೌಲ್ಯದ ಚುನಾವಣಾ ಬಾಂಡ್​ಗಳನ್ನು ಎಸ್​ಬಿಐ ವಿತರಿಸಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಚುನಾವಣಾ ಬಾಂಡ್, ಇಲ್ಲಿಯವರೆಗೆ ಸಂಗ್ರಹವಾದ ಹಣ ಎಷ್ಟು? ರಾಜಕೀಯ ಪಕ್ಷಗಳಿಗೆ ಚಿನ್ನದ ಮೊಟ್ಟೆಯಾಗಿದ್ದ ಈ ಬಾಂಡ್​ಗೆ ಸುಪ್ರೀಂ ಕೊಕ್ಕೆ
ಚುನಾವಣಾ ಬಾಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 15, 2024 | 12:06 PM

ನವದೆಹಲಿ, ಫೆಬ್ರುವರಿ 15: ಚುನಾವಣಾ ಬಾಂಡ್ ಅಥವಾ ಎಲೆಕ್ಟೋರಲ್ ಬಾಂಡ್ (Electoral bond) ಅನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ಪರಿಗಣಿಸಿ ತೀರ್ಪು ನೀಡಿದೆ. ಈ ಬಾಂಡ್ ವಿತರಣೆಯನ್ನು ತತ್​ಕ್ಷಣದಿಂದಲೇ ನಿಲ್ಲಿಸುವಂತೆ ಎಸ್​ಬಿಐಗೆ ನ್ಯಾಯಾಲಯ (Supreme Court) ಆದೇಶಿಸಿದೆ. ಹಾಗೆಯೇ, 2019ರ ಏಪ್ರಿಲ್ 12ರಿಂದ ಇಲ್ಲಿಯವರೆಗೆ ಯಾವ್ಯಾವ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಎಷ್ಟೆಷ್ಟು ಹಣ ರವಾನೆಯಾಗಿದೆ ಎಂಬ ಎಲ್ಲಾ ವಿವರಗಳನ್ನೂ ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ (election commission) ಸಲ್ಲಿಸುವಂತೆಯೂ ಸೂಚಿಸಿದೆ. ಎಸ್​ಬಿಐನಿಂದ ಮಾಹಿತಿ ಬಂದು ಒಂದು ವಾರದೊಳಗೆ ಈ ದೇಣಿಗೆಯ ವಿವರವನ್ನು ಚುನಾವಣಾ ಆಯೋಗ ಸಾರ್ವತ್ರಿಕಗೊಳಿಸಬೇಕು ಎಂದೂ ಕೋರ್ಟ್ ಹೇಳಿದೆ.

ಎಸ್​ಬಿಐನಲ್ಲಿ ಇಲ್ಲಿಯವರೆಗೆ ಸಂಗ್ರಹವಾದ ಎಲೆಕ್ಟೋರಲ್ ಬಾಂಡ್ ಮೊತ್ತ 16 ಸಾವಿರ ಕೋಟಿ ರೂಗೂ ಹೆಚ್ಚು

ಕೇಂದ್ರ ಸರ್ಕಾರ 2018ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದ್ದು. ಇದು ಯಾವುದೇ ಸಾರ್ವಜನಿಕರು ಅನಾಮಧೇಯರಾಗಿದ್ದುಕೊಂಡು ರಾಜಕೀಯ ಪಕ್ಷಗಳಿಗೆ ಬಾಂಡ್ ಮೂಲಕ ದೇಣಿಗೆ ನೀಡಬಹುದು. ಎಸ್​ಬಿಐ ಬ್ಯಾಂಕ್​ನಲ್ಲಿ ಮಾತ್ರವೇ ಈ ಬಾಂಡ್ ವಿತರಣೆಗೆ ಅವಕಾಶ ನೀಡಲಾಗಿತ್ತು.

2018ರಲ್ಲಿ ಆರಂಭಗೊಂಡು ಇಲ್ಲಿಯವರೆಗೆ 30 ಕಂತುಗಳಲ್ಲಿ ಎಸ್​ಬಿಐ ಚುನಾವಣಾ ಬಾಂಡ್​ಗಳನ್ನು ವಿತರಿಸಿದೆ. ಈವರೆಗೆ 16,518 ಕೋಟಿ ರೂ ಮೌಲ್ಯದ ಬಾಂಡ್​ಗಳನ್ನು ಖರೀದಿಸಲಾಗಿದೆ. ಅಂದರೆ ಇಷ್ಟು ಮೊತ್ತದ ದೇಣಿಗೆಗಳು ರಾಜಕೀಯ ಪಕ್ಷಗಳಿಗೆ ಸಿಕ್ಕಿವೆ. ಈ ಅಂಕಿ ಅಂಶ ವಿವರವನ್ನು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇತ್ತೀಚೆಗೆ ಲೋಕಸಭೆಯಲ್ಲಿ ನೀಡಿದ್ದಾರೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳ ನಿಧಿಯ ಬಗ್ಗೆ ಮಾಹಿತಿ ಅತ್ಯಗತ್ಯ: ಚುನಾವಣಾ ಬಾಂಡ್​ ಅಸಂವಿಧಾನಿಕ ಎಂದ ಸುಪ್ರೀಂ

ಎಲೆಕ್ಟೋರಲ್ ಬಾಂಡ್ ನಿಷೇಧಿಸಿದ್ದು ಯಾಕೆ?

ಚುನಾವಣಾ ಬಾಂಡ್ ಅಸಂವಿಧಾನಿಕವಾಗಿದ್ದು, ಇದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಸುಪ್ರೀಂ ಕೋರ್ಟ್ ಅಭಿಪ್ರಾಯವಾಗಿದೆ. ಕೋರ್ಟ್​ನ ಪ್ರಮುಖ ಆಕ್ಷೇಪಣೆ ಇರುವುದು ಎಲೆಕ್ಟೋರಲ್ ಬಾಂಡ್​ನ ಗೌಪ್ಯತೆ ವಿಚಾರದ ಬಗ್ಗೆ. ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟವರ ಹೆಸರು ಸಾರ್ವತ್ರಿಕಗೊಳ್ಳುವುದಿಲ್ಲ. ಇದು ಅಸಂವಿಧಾನಿಕ, ಹಾಗೂ ಮಾಹಿತಿ ಹಕ್ಕು ಕಾಯ್ದೆ ನಿಯಮದ ಉಲ್ಲಂಘನೆ ಎಂಬುದು ಕೋರ್ಟ್​ನ ತಗಾದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ