ಸಿಂಘು ಗಡಿಯಲ್ಲಿ ರೈತರ ಸಭೆ ಮುಕ್ತಾಯ; ನ. 29ರಂದು ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರಾಲಿ ಹಿಂಪಡೆದ ಕಿಸಾನ್ ಯೂನಿಯನ್

ಸಭೆಯಲ್ಲಿ ಟ್ರಾಕ್ಟರ್ ರಾಲಿ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನವಂಬರ್ 29 ರಂದು ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರಾಲಿ ರದ್ದುಗೊಳಿಸಿ ಕಿಸಾನ್ ಯೂನಿಯನ್ ಹೇಳಿಕೆ ನೀಡಿದೆ.

ಸಿಂಘು ಗಡಿಯಲ್ಲಿ ರೈತರ ಸಭೆ ಮುಕ್ತಾಯ; ನ. 29ರಂದು ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರಾಲಿ ಹಿಂಪಡೆದ ಕಿಸಾನ್ ಯೂನಿಯನ್
ರೈತರ ಪ್ರತಿಭಟನೆ ಚಿತ್ರ

ದೆಹಲಿ: ಸಿಂಘು ಗಡಿಯಲ್ಲಿ ನಡೆಯುತ್ತಿದ್ದ ರೈತರ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಟ್ರಾಕ್ಟರ್ ರಾಲಿ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನವಂಬರ್ 29 ರಂದು ನಡೆಸಲು ಉದ್ದೇಶಿಸಿದ್ದ ಟ್ರಾಕ್ಟರ್ ರಾಲಿ ರದ್ದುಗೊಳಿಸಿ ಕಿಸಾನ್ ಯೂನಿಯನ್ ಹೇಳಿಕೆ ನೀಡಿದೆ. ನವೆಂಬರ್ 29ರಂದು ಟ್ರ್ಯಾಕ್ಟರ್ ರಾಲಿ ನಡೆಯುವುದಿಲ್ಲ. ಟ್ರ್ಯಾಕ್ಟರ್ ರಾಲಿ ಸ್ಥಗಿತಗೊಳಿಸಿದ ಬಗ್ಗೆ ರೈತ ಸಂಘಟನೆಗಳ ಪರವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ನೀಡಿದೆ. ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ನವೆಂಬರ್ 27) ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆಯಲಾಗಿದೆ. ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಎಂಎಸ್‌ಪಿ ಸಂಬಂಧ ಸಮಿತಿಯನ್ನು ರಚಿಸಬೇಕು. ಈ ವಿಚಾರ ಸೇರಿದಂತೆ ನಮ್ಮ ಬೇಡಿಕೆಗಳ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ. ಡಿಸೆಂಬರ್ 4ರವರೆಗೆ ಪ್ರಧಾನಿಗೆ ಉತ್ತರಿಸಲು ಅವಕಾಶ ನೀಡಿದ್ದೇವೆ. ಟ್ರ್ಯಾಕ್ಟರ್ ರಾಲಿಯನ್ನು ನಿಜವಾಗಿ ಹಿಂಪಡೆದಿಲ್ಲ, ಸ್ಥಗಿತಗೊಳಿಸಿದ್ದೇವೆ. ಡಿಸೆಂಬರ್ 4 ರಂದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಮೂರು ಕೃಷಿ ಕಾಯ್ದೆ(Farm Laws) ಗಳನ್ನು ವಾಪಸ್​ ಪಡೆಯುವ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್ ಈ ಬಿಲ್​ ಮಂಡನೆ ಮಾಡಲಿದ್ದಾರೆ. ಅಂದು ಕಡ್ಡಾಯವಾಗಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಹಾಜರಿರಲೇಬೇಕು ಎಂದು ವಿಪ್​ ಜಾರಿ ಮಾಡಲಾಗಿದೆ. ಹಾಗೇ, ರಾಜ್ಯಸಭೆ ಸದಸ್ಯರಿಗೂ ವಿಪ್ ಜಾರಿಯಾಗಿದೆ. ಇನ್ನು ಕಾಂಗ್ರೆಸ್ ಕೂಡ ತನ್ನ ಸಂಸದರಿಗೆ ಮೂರು ಸಾಲಿನ ವಿಪ್​ ಜಾರಿ ಮಾಡಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. ಮೂರು ಕೃಷಿ ಕಾಯ್ದೆಗಳ ರದ್ದತಿ ಮಸೂದೆಯನ್ನೂ ಅಧಿವೇಶನದ ಇತರ 26 ಕಾರ್ಯಸೂಚಿಯೊಂದಿಗೆ ಕೇಂದ್ರ ಸರ್ಕಾರ ಸೇರಿಸಿದೆ. ಇನ್ನುಳಿದಂತೆ ಕ್ರಿಪ್ಟೋಕರೆನ್ಸಿ ಮಸೂದೆ, ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ಸರ್ಕಾರದ ಪಾಲನ್ನು ಶೇ.51ರಿಂದ ಶೇ.26ಕ್ಕೆ ಇಳಿಸುವ ಬಿಲ್​ಗಳೂ ಸೇರಿದ್ದು, ಇವು ಬಹುಮುಖ್ಯವಾಗಿವೆ.  ಈ ಕೃಷಿ ಕಾಯ್ದೆಗಳನ್ನು ಕಳೆದ ವರ್ಷದ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಮಾಡಲಾಗಿತ್ತು. ಆದರೆ ಕೃಷಿ ಮಸೂದೆಗಳು ಪಾಸ್ ಆಗಿ ಕಾಯ್ದೆಯಾಗಿ ರೂಪುಗೊಂಡಾಗಿನಿಂದಲೂ ರೈತರು ಸಿಕ್ಕಾಪಟೆ ಪ್ರತಿಭಟನೆ ಮಾಡುತ್ತಲೇ ಇದ್ದರು. ಕಳೆದೊಂದು ವರ್ಷದಿಂದಲೂ ದೆಹಲಿಯ ಗಡಿಭಾಗಗಳಲ್ಲಿ ರೈತರ ಹೋರಾಟ ಮುಂದುವರಿದಿತ್ತು.

ಇದನ್ನೂ ಓದಿ: Farmers Protest ಕೃಷಿ ಕಾನೂನು ವಿರುದ್ಧ ರೈತರ ಹೋರಾಟಕ್ಕೆ ಒಂದು ವರ್ಷ; ದೆಹಲಿಗೆ ಹರಿದು ಬರುತ್ತಿದೆ ರೈತರ ದಂಡು

ಇದನ್ನೂ ಓದಿ: 3 ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯುವ ಮಸೂದೆ ಸಂಸತ್ತಿನಲ್ಲಿ ಸೋಮವಾರ ಮಂಡನೆ; ಬಿಜೆಪಿ ಸಂಸದರಿಗೂ ವಿಪ್ ಜಾರಿ

Published On - 3:16 pm, Sat, 27 November 21

Click on your DTH Provider to Add TV9 Kannada