Farmers Protest: ನೋಯ್ಡಾದಿಂದ ದೆಹಲಿಗೆ ರೈತರ ಪ್ರತಿಭಟನಾ ಮೆರವಣಿಗೆ, ಬೇಡಿಕೆಗಳೇನೇನು?

|

Updated on: Dec 02, 2024 | 9:14 AM

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಮತ್ತೊಮ್ಮೆ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು ಇಂದು ನೋಯ್ಡಾದಿಂದ ದೆಹಲಿಗೆ ತೆರಳಲಿದ್ದಾರೆ. 10ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ. ಯುನೈಟೆಡ್ ಕಿಸಾನ್ ಮೋರ್ಚಾದ ಮುಖಂಡರು ಡಿಎಂ, ಪೊಲೀಸ್ ಕಮಿಷನರ್, ನೋಯ್ಡಾ, ಗ್ರೇಟರ್ ನೋಯ್ಡಾ ಪ್ರಾಧಿಕಾರದ ಸಿಇಒ ಮತ್ತು ಯಮುನಾ ಪ್ರಾಧಿಕಾರದ ಸಿಇಒಯೊಂದಿಗೆ ಸಭೆ ನಡೆಸಿದ್ದರು, ಅದು ವಿಫಲವಾಗಿತ್ತು.

Farmers Protest: ನೋಯ್ಡಾದಿಂದ ದೆಹಲಿಗೆ ರೈತರ ಪ್ರತಿಭಟನಾ ಮೆರವಣಿಗೆ, ಬೇಡಿಕೆಗಳೇನೇನು?
ಪ್ರತಿಭಟನೆ
Image Credit source: Economic Times
Follow us on

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಮತ್ತೊಮ್ಮೆ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು ಇಂದು ನೋಯ್ಡಾದಿಂದ ದೆಹಲಿಗೆ ತೆರಳಲಿದ್ದಾರೆ. 10ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ. ಯುನೈಟೆಡ್ ಕಿಸಾನ್ ಮೋರ್ಚಾದ ಮುಖಂಡರು ಡಿಎಂ, ಪೊಲೀಸ್ ಕಮಿಷನರ್, ನೋಯ್ಡಾ, ಗ್ರೇಟರ್ ನೋಯ್ಡಾ ಪ್ರಾಧಿಕಾರದ ಸಿಇಒ ಮತ್ತು ಯಮುನಾ ಪ್ರಾಧಿಕಾರದ ಸಿಇಒಯೊಂದಿಗೆ ಸಭೆ ನಡೆಸಿದ್ದರು, ಅದು ವಿಫಲವಾಗಿತ್ತು.

ಇದಾದ ಬಳಿಕ ದೆಹಲಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದರು. ಆದರೆ ಅವರನ್ನು ತಡೆಯಲು ನೋಯ್ಡಾ ಪೊಲೀಸರು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ದೆಹಲಿಗೆ ಬರುವ ಕೆಲವು ಮಾರ್ಗಗಳನ್ನು ಮುಚ್ಚಲಾಗಿದೆ ಮತ್ತು ಮಾರ್ಗಗಳನ್ನು ಬದಲಾಯಿಸಲಾಗಿದೆ. ಶಾಲೆಗಳನ್ನೂ ಆನ್‌ಲೈನ್‌ ಮಾಡಲಾಗಿದೆ.

ಇಂದು 12 ಗಂಟೆಗೆ ಮಹಾಮಾಯಾ ಮೇಲ್ಸೇತುವೆಯ ಕೆಳಗೆ ರೈತರು ತಮ್ಮ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ. ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ದೆಹಲಿಗೆ ತೆರಳಲಿದ್ದಾರೆ. ನೋಯ್ಡಾ ಪೊಲೀಸರು ಗೌತಮ್ ಬುದ್ಧ ನಗರದಿಂದ ದೆಹಲಿಗೆ ಸಂಪರ್ಕಿಸುವ ಎಲ್ಲಾ ಗಡಿಗಳಲ್ಲಿ ರೈತರನ್ನು ತಡೆಯಲು ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದಾರೆ.

ಮತ್ತಷ್ಟು ಓದಿ: ಕಾಂಗ್ರೆಸ್​ಗಾಗಿಯೇ ನಡೆದಿತ್ತಾ ರೈತರ ಪ್ರತಿಭಟನೆ, ಆದರೂ ಹರ್ಯಾಣದಲ್ಲಿ ಸೋತಿದ್ಹೇಗೆ, ಕಾರಣ ಬಿಚ್ಚಿಟ್ಟ ರೈತ ಮುಖಂಡ

ಗೌತಮ್ ಬುದ್ಧ ನಗರದಿಂದ ದೆಹಲಿಗೆ ಬಂದು ಹೋಗಲು ಜನರು ಮೆಟ್ರೋ ಬಳಸಬೇಕು ಎಂದು ನೋಯ್ಡಾ ಪೊಲೀಸರು ಮನವಿ ಮಾಡಿದ್ದಾರೆ. 2014ರ ಜನವರಿ 1ರ ನಂತರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸಂತ್ರಸ್ತರಾದ ಎಲ್ಲ ರೈತರಿಗೆ ಶೇ.10 ಅಭಿವೃದ್ಧಿ ಪಡಿಸಿದ ನಿವೇಶನಗಳು, ಶೇ.64.7 ಹೆಚ್ಚುವರಿ ಪರಿಹಾರ, ಹೊಸ ಭೂಸ್ವಾಧೀನ ಕಾನೂನಿನಂತೆ ಮಾರುಕಟ್ಟೆ ದರದ 4 ಪಟ್ಟು ಪರಿಹಾರ, ಉದ್ಯೋಗ ಮತ್ತು ಪುನರ್ವಸತಿ ಸೇರಿದಂತೆ ಎಲ್ಲ ಸವಲತ್ತುಗಳು, ನಿವೇಶನಗಳ ಇತ್ಯರ್ಥ ಇತ್ಯಾದಿ ಹಲವು ಬೇಡಿಕೆಗಳನ್ನು ಹೊಂದಿದ್ದಾರೆ.

ಗೌತಮ್ ಬುದ್ಧ ನಗರ, ಆಗ್ರಾ, ಅಲಿಗಢ ಮತ್ತು ಬುಲಂದ್‌ಶಹರ್ ಸೇರಿದಂತೆ 20 ಜಿಲ್ಲೆಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ