AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸವಾರರಿಗೆ 1 ತಿಂಗಳ ರಿಲೀಫ್, ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಣೆ

ನೋ ವೇ ಜಾನ್ಸೇ ಇಲ್ಲ. ನೀವು ತಿಪ್ಪರಲಾಗ ಹಾಕಿದ್ರೂ ಫಾಸ್ಟ್​ ಟ್ಯಾಗ್‌ ಇಲ್ಲ ಅಂದ್ರೆ ಟೋಲ್‌ನಿಂದ ನಿಮ್ಮ ವಾಹನ ಮುಂದಕ್ಕೆ ಹೋಗಲ್ಲ. ಫಾಸ್ಟ್ ಟ್ಯಾಗ್ ಹಾಕದಿದ್ರೆ ನೀವು ಡಬ್ಬಲ್ ಟೋಲ್ ಕಟ್ಟಬೇಕು. ನಾವು ಕೊಟ್ಟ ಡೆಡ್‌ಲೈನ್‌ನೊಳಗೆ ನೀವು ಫಾಸ್ಟ್ ಟ್ಯಾಗ್‌ ಅಳವಡಿಸಿಕೊಳ್ಳಬೇಕು ಅಂತ ಕೇಂದ್ರ ಫುಲ್ ಖಡಕ್ ಆಗಿ ಹೇಳಿತ್ತು. ಆದ್ರೆ ಫಾಸ್ಟ್‌ ಟ್ಯಾಗ್ ಭಯದಲ್ಲಿದ್ದ ವಾಹನ ಸವಾರರಿಗೆ ಕೇಂದ್ರ ಪದೇ ಪದೇ ರಿಲೀಫ್ ನೀಡ್ತಿದೆ. ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಿಸಿದ ಕೇಂದ್ರ! ಯೆಸ್‌, ಕೇಂದ್ರ […]

ಸವಾರರಿಗೆ 1 ತಿಂಗಳ ರಿಲೀಫ್, ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಣೆ
ಸಾಧು ಶ್ರೀನಾಥ್​
|

Updated on: Dec 15, 2019 | 7:17 AM

Share

ನೋ ವೇ ಜಾನ್ಸೇ ಇಲ್ಲ. ನೀವು ತಿಪ್ಪರಲಾಗ ಹಾಕಿದ್ರೂ ಫಾಸ್ಟ್​ ಟ್ಯಾಗ್‌ ಇಲ್ಲ ಅಂದ್ರೆ ಟೋಲ್‌ನಿಂದ ನಿಮ್ಮ ವಾಹನ ಮುಂದಕ್ಕೆ ಹೋಗಲ್ಲ. ಫಾಸ್ಟ್ ಟ್ಯಾಗ್ ಹಾಕದಿದ್ರೆ ನೀವು ಡಬ್ಬಲ್ ಟೋಲ್ ಕಟ್ಟಬೇಕು. ನಾವು ಕೊಟ್ಟ ಡೆಡ್‌ಲೈನ್‌ನೊಳಗೆ ನೀವು ಫಾಸ್ಟ್ ಟ್ಯಾಗ್‌ ಅಳವಡಿಸಿಕೊಳ್ಳಬೇಕು ಅಂತ ಕೇಂದ್ರ ಫುಲ್ ಖಡಕ್ ಆಗಿ ಹೇಳಿತ್ತು. ಆದ್ರೆ ಫಾಸ್ಟ್‌ ಟ್ಯಾಗ್ ಭಯದಲ್ಲಿದ್ದ ವಾಹನ ಸವಾರರಿಗೆ ಕೇಂದ್ರ ಪದೇ ಪದೇ ರಿಲೀಫ್ ನೀಡ್ತಿದೆ.

ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಿಸಿದ ಕೇಂದ್ರ! ಯೆಸ್‌, ಕೇಂದ್ರ ಸರ್ಕಾರ ಮೊದಲು ಡಿಸೆಂಬರ್ 1 ಫಾಸ್ಟ್ಟ್‌ಟ್ಯಾಗ್‌ ಅಳವಡಿಕೆಗೆ ಲಾಸ್ಟ್ ಡೇಟ್ ಅಂತ ಹೇಳಿತ್ತು. ನಂತ್ರ ಆ ಡೇಟನ್ನ ಡಿಸೆಂಬರ್ 15ರವರೆಗೂ ವಿಸ್ತರಿಸಿತ್ತು. ಆದ್ರೆ ಈಗ ಕೇಂದ್ರ ವಾಹನ ಸವಾರರಿಗೆ ಕೊಂಚ ರಿಲೀಫ್ ನೀಡಿದೆ. ಕೇಂದ್ರ ಫಾಸ್ಟ್ಟ್‌ ಟ್ಯಾಗ್‌ ಅಳವಡಿಕೆಗೆ ಜನವರಿ 15 ತನಕ ಕಾಲಾವಕಾಶ ನೀಡಿದೆ.

ಸವಾರರಿಗೆ ‘ಫಾಸ್ಟ್ ​ಟ್ಯಾಗ್’ನಿಂದ 1 ತಿಂಗಳ ರಿಲೀಫ್! ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್‌ ಗೇಟ್ ಮೂಲಕ ಸಾಗಲು ಫಾಸ್ಟ್ಟ್‌ ಟ್ಯಾಗ್ ಸ್ಟಿಕ್ಕರ್ ಅಳವಡಿಕೆ ಕಡ್ಡಾಯ ಅಂತ ಕೇಂದ್ರ ಆದೇಶ ಹೊರಡಿಸಿತ್ತು. ಡಿಸೆಂಬರ್ 15 ಅಂದ್ರೆ ಇಂದು ಫಾಸ್ಟ್ಟ್‌ಟ್ಯಾಗ್ ಅಳವಡಿಕೆಗೆ ಲಾಸ್ಟ್ ಡೇಟ್ ಅಂತ ಹೇಳಿತ್ತು. ಆದ್ರೆ ಇದೀಗ ಆರ್‌ಎಫ್‌ಐಡಿ ಸ್ಟಕ್ಕರ್‌ ಕೊರತೆಯಿಂದ ಅರ್ಧದಷ್ಟು ಟೋಲ್‌ಗಳಲ್ಲಿ ಮಾತ್ರ ಸ್ಕ್ಯಾನರ್‌ಗಳನ್ನ ಅಳವಡಿಸಲಾಗಿದೆ. ಇನ್ನುಳಿದ ಟೋಲ್‌ಗಳಲ್ಲಿ ಸ್ಕ್ಯಾನರ್‌ ಅಳವಡಿಕೆ ಬಾಕಿ ಇದೆ. ಅಲ್ಲದೇ ಮಾಹಿತಿ ಕೊರತೆಯಿಂದ ಸಾಕಷ್ಟು ವಾಹನ ಸವಾರರು ಫಾಸ್ಟ್ಟ್‌ಟ್ಯಾಗ್ ಅಳವಡಿಸಿಕೊಂಡಿಲ್ಲ. ಹೀಗಾಗಿ ಜನವರಿ 15ರ ತನಕ ಫಾಸ್ಟ್ಟ್‌ಟ್ಯಾಗ್‌ ಅಳವಡಿಕೆಗೆ ಕೇಂದ್ರ ಡೆಡ್‌ಲೈನ್‌ ವಿಸ್ತರಿಸಲಾಗಿದೆ.

ಜನವರಿ 15 ರ ತನಕ ಗಡುವು ವಿಸ್ತರಣೆ ಮಾಡಿರುವ ಕೇಂದ್ರ ಹೆದ್ದಾರಿ ಪ್ರಾಧಿಕಾರ ಮೊದಲ ಹಂತದಲ್ಲಿ ಪ್ರತಿ ಟೋಲ್‍ನ ಶೇ.75ರಷ್ಟು ಗೇಟ್ ಗಳಿಕೆ ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಸಿ, ಶೇ.25ರಷ್ಟು ಗೇಟ್​ಗಳಲ್ಲಿ ನಗದು ಸ್ವೀಕರಿಸುವಂತೆ ತಿಳಿಸಿದೆ. ಅಲ್ಲದೇ ಶೇ.25ರಷ್ಟು ಗೇಟ್‍ಗಳನ್ನು ಹಂತ ಹಂತವಾಗಿ ಫಾಸ್ಟ್ ಟ್ಯಾಗ್​ಗೆ ಒಳಪಡಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆರ್‌ಎಫ್‌ಐಡಿ ಕೊರತೆಯಿಂದ ಕೇಂದ್ರ ಫಾಸ್ಟ್‌ಟ್ಯಾಗ್‌ ಅಳವಡಿಕೆ ಜನವರಿ 15ರ ತನಕ ಗಡುವು ವಿಸ್ತರಿಸಿದೆ. ಇದು ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದಂತು ಸುಳ್ಳಲ್ಲ.