ಅಪ್ಪ-ಮಗ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸದಾ ತಂದೆ-ತಾಯಿ ತಮ್ಮ ಯಾವುದೇ ಕಷ್ಟಗಳು ತಿಳಿಯದಂತೆ ಬೆಳೆಸಿರುತ್ತಾರೆ, ಹಾಗಾಗಿ ಮಕ್ಕಳಿಗೆ ಪೋಷಕರು ಪಡುತ್ತಿರುವ ಕಷ್ಟದ ಅರಿವೇ ಇರುವುದಿಲ್ಲ.
ಹತ್ತಾರು ಜೊತೆ ಚಪ್ಪಲಿ, ಬೈಕ್, ಸ್ಮಾರ್ಟ್ಫೋನ್, ಪೆಟ್ರೋಲ್ಗೆ ದುಡ್ಡು, ಫೋನ್ಗೆ ಕರೆನ್ಸಿ ಹೀಗೆ ಮಕ್ಕಳ ಅಗತ್ಯವನ್ನು ಪೂರೈಸುವುದರಲ್ಲಿಯೇ ಬಡ ತಂದೆ ತಾಯಿ ತಮ್ಮ ಜೀವನ ಕಳೆದುಬಿಡುತ್ತಾರೆ. ತುಂಬಾ ಕಷ್ಟವಾದಾಗ ಈಗ ನೀ ಕೇಳಿದ್ದನ್ನು ತೆಗೆಸಿಕೊಡಲು ಸಾಧ್ಯವಿಲ್ಲ ಸ್ವಲ್ಪ ದಿನ ಕಾಯಿ ಎಂದರೆ ಸಾಕು ಕೋಪಕ್ಕೆ ತಪ್ಪು ನಿರ್ಧಾರ ತೆಗೆದುಕೊಂಡುಬಿಡುತ್ತಾರೆ ಅದಕ್ಕೆ ಈ ಘಟನೆಯೇ ಸಾಕ್ಷಿ.
ಮಹಾರಾಷ್ಟ್ರದ ನಾಂದೇಡ್ನಲ್ಲಿ ಬಡ ರೈತನ ಮಗ ತಂದೆ ಬಳಿ ಸ್ಮಾರ್ಟ್ಫೋಷನ್ ಕೊಡಿಸು ಎಂದು ಬೇಡಿಕೆ ಇಟ್ಟಿದ್ದ, ಆ ಬಾಲಕ ಇನ್ನೂ 10ನೇ ತರಗತಿ ಓದುತ್ತಿದ್ದ. ಆದರೆ ಅದು ಸಾಧ್ಯವಾಗದಿದ್ದಾಗ ಮಗ ಕೋಪದಲ್ಲಿ ನೇಣಿಗೆ ಶರಣಾಗಿದ್ದಾನೆ, ಮಗನ ಸಾವನ್ನು ನೋಡಿ ನೊಂದ ತಂದೆ ಕೂಡ ಮಗ ಮೃತಪಟ್ಟ ಹಗ್ಗದಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಎಲ್ಲರಲ್ಲೂ ನೋವು ಮೂಡಿಸಿದೆ.
ಮತ್ತಷ್ಟು ಓದಿ: ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆ ಮೇಲೆ ಅನುಮಾನ: ಸಂತೆಯಿಂದ ಮಚ್ಚು ತಂದು ಸಿನಿಮೀಯವಾಗಿ ಮೂವರ ಹತ್ಯೆ ಮಾಡಿದ ವ್ಯಕ್ತಿ
ಓಂಕಾರ್ ಎಂಬ ಬಾಲಕ ಮೂವರು ಸಹೋದರರ ಪೈಕಿ ಕಿರಿಯವನಾಗಿದ್ದ, ಆತ ಹಾಸ್ಟೆಲ್ನಲ್ಲಿ ವಾಸವಾಗಿದ್ದ, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದ ತಂದೆಗೆ ಇದು ಸಾಧ್ಯವಾಗಲಿಲ್ಲ. ಹೊಲದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ ಸಾವನ್ನಪ್ಪಿದ್ದ, ಮಗನ ಅವಸ್ಥೆ ನೋಡಿ ನೊಂದ ತಂದೆ ಕೂಡ ಅದೇ ಹಗ್ಗ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ, ಓಂಕಾರ್ ಮತ್ತು ಅವರ ತಂದೆಯ ಅಂತ್ಯಕ್ರಿಯೆಯನ್ನು ಗುರುವಾರ ಸಂಜೆ ನೆರವೇರಿಸಲಾಯಿತು. ಈ ಆಧುನಿಕ ಜಗತ್ತಿನಲ್ಲಿ ಜೀವನದಲ್ಲಿ ಹೆಚ್ಚುತ್ತಿರುವ ನಿರೀಕ್ಷೆಗಳಿಂದಾಗಿ ಉಂಟಾಗುವ ಸಾಮಾಜಿಕ ಒತ್ತಡವನ್ನು ಸಹ ಇದು ಒತ್ತಿ ಹೇಳುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ