ಪತಿಯೊಂದಿಗೆ ವಾಸಿಸದಿದ್ದರೂ ಪತ್ನಿ ಜೀವನಾಂಶವನ್ನು ಪಡೆಯಬಹುದು: ಸುಪ್ರೀಂ

ಒಂದೊಮ್ಮೆ ಹಲವು ಕಾರಣಗಳಿಂದಾಗಿ ಪತ್ನಿ ಪತಿಯೊಂದಿಗೆ ವಾಸಿಸದಿದ್ದರೂ ಕೂಡ ಆಕೆ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಜಾರ್ಖಂಡ್‌ನ ವಿಚ್ಛೇದಿತ ದಂಪತಿಗಳು ಮೇ 1, 2014 ರಂದು ವಿವಾಹವಾದರು ಆದರೆ ಆಗಸ್ಟ್ 2015 ರಲ್ಲಿ ಬೇರ್ಪಟ್ಟ ಪ್ರಕರಣದಲ್ಲಿ ಪೀಠವು ಅಧಿಕೃತ ತೀರ್ಪು ನೀಡಿತು.

ಪತಿಯೊಂದಿಗೆ ವಾಸಿಸದಿದ್ದರೂ ಪತ್ನಿ ಜೀವನಾಂಶವನ್ನು ಪಡೆಯಬಹುದು: ಸುಪ್ರೀಂ
ಸುಪ್ರೀಂಕೋರ್ಟ್​Image Credit source: Citizens for Justice and Peace
Follow us
ನಯನಾ ರಾಜೀವ್
|

Updated on: Jan 12, 2025 | 11:24 AM

ಮಹಿಳೆ ತನ್ನ ಪತಿಯೊಂದಿಗೆ ವಾಸಿಸಲು ನಿರಾಕರಿಸಲು ಸರಿಯಾದ ಕಾರಣಗಳಿದ್ದರೆ, ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ (CJI) ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಈ ಅಭಿಪ್ರಾಯಪಟ್ಟಿದೆ.

ಸಂಗಾತಿಯೊಂದಿಗೆ ಸಹಬಾಳ್ವೆ ಮಾಡಬೇಕೆಂಬ ತೀರ್ಪನ್ನು ಪಾಲಿಸದ ನಂತರವೂ ಸಹ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶದ ಹಕ್ಕನ್ನು ನೀಡಬಹುದು ಎಂದು ತೀರ್ಪು ನೀಡಿದೆ. ಜಾರ್ಖಂಡ್‌ನ ವಿಚ್ಛೇದಿತ ದಂಪತಿಗಳು ಮೇ 1, 2014 ರಂದು ವಿವಾಹವಾಗಿದ್ದರು ಆದರೆ ಆಗಸ್ಟ್ 2015 ರಲ್ಲಿ ಬೇರ್ಪಟ್ಟ ಪ್ರಕರಣದಲ್ಲಿ ಪೀಠವು ಅಧಿಕೃತ ತೀರ್ಪು ನೀಡಿತು.

ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಪತಿ ರಾಂಚಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು ಮತ್ತು ಅವರು ಆಗಸ್ಟ್ 21, 2015 ರಂದು ಆಕೆ ಗಂಡನ ಮನೆಯನ್ನು ತೊರೆದಿದ್ದಳು. ಅವಳನ್ನು ಮರಳಿ ಕರೆತರಲು ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ನಂತರ ಹಿಂತಿರುಗಲಿಲ್ಲ ಎಂದು ಪತಿ ಹೇಳಿದ್ದ.

ಮತ್ತಷ್ಟು ಓದಿ: ಹೆತ್ತವರನ್ನು ಮಕ್ಕಳು ನೋಡಿಕೊಳ್ಳದಿದ್ದರೆ ಗಿಫ್ಟ್​ ಡೀಡ್ ರದ್ದು: ಸುಪ್ರೀಂಕೋರ್ಟ್​

ಕಾರು ಖರೀದಿಸಲು 5 ಲಕ್ಷ ರೂ. ಹಣ ಕೊಡಬೇಕು ಎಂದು ಪತಿ ಪೀಡಿಸಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಪತ್ನಿ ಹೇಳಿದ್ದಾಳೆ. ಆತನಿಗೆ ವಿವಾಹೇತರ ಸಂಬಂಧವಿದ್ದು, 2015ರ ಜನವರಿ 1 ರಂದು ತನಗೆ ಗರ್ಭಪಾತವಾಗಿತ್ತು, ಆದರೆ ಪತಿ ತನ್ನನ್ನು ನೋಡಲು ಬರಲಿಲ್ಲ ಎಂದು ಹೇಳಿದ್ದಾಳೆ.

ಈ ಮೊದಲು ನನಗೆ ವಾಶ್​ರೂಂ ಬಳಸಲು ಕೂಡ ಅನುಮತಿ ಇರಲಿಲ್ಲ, ಹಾಗೆಯೇ ಮನೆಯ ಗ್ಯಾಸ್​ ಬಳಸಲು ಅನುಮತಿ ನೀಡಿದರೆ ಮನೆಗೆ ಬರುತ್ತೇನೆ ಎಂದು ಹೇಳಿದ್ದಳು. ಕೌಟುಂಬಿಕ ನ್ಯಾಯಾಲಯವು 2022ರಲ್ಲಿ ಪತಿಯೊಂದಿಗೆ ವಾಸಿಸುವಂತೆ ಆದೇಶ ನೀಡಿತ್ತು. ಆಕೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಕುಟುಂಬ ನ್ಯಾಯಾಲಯವು ತಿಂಗಳಿಗೆ 10,000 ರೂ ಜೀವನಾಂಶವನ್ನು ಪತ್ನಿಗೆ ಆಕೆಯ ಪತಿಯಿಂದ ಪಾವತಿಸಲು ಆದೇಶಿಸಿದೆ.

ಆದರೆ ಜೀವನಾಂಶ ಕೊಡಬೇಕು ಆಕೆ ಮನೆಗೆ ಬರಬೇಕೆಂದು ಕೋರ್ಟ್​ ತೀರ್ಪು ನೀಡಿದ್ದರೂ ಆಕೆ ಮನೆಗೆ ಬಂದಿಲ್ಲ ಎಂದು ಪತಿ ಹೈಕೋರ್ಟ್​ ಮೆಟ್ಟಿಲೇರಿದ್ದ.ಪತ್ನಿ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದೇಶದಿಂದ ನೊಂದ ಪತ್ನಿ ಸುಪ್ರೀಂ ಕೋರ್ಟ್‌ನಲ್ಲಿ ಆದೇಶವನ್ನು ಪ್ರಶ್ನಿಸಿದ್ದು, ಅದರ ಪರವಾಗಿ ತೀರ್ಪು ನೀಡಿದೆ. ಹಾಗೆಯೇ ಪತ್ನಿ ದೂರವಿದ್ದರೂ ಜೀವನಾಂಶ ಪಾವತಿಸಬೇಕೆಂದು ಕೋರ್ಟ್ ಆದೇಶಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ