ಫೆಮಾ ಪ್ರಕರಣ: ಫೆ.19ರಂದು ವಿಚಾರಣೆಗೆ ಹಾಜರಾಗಲು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾಗೆ ಇಡಿ ಸಮನ್ಸ್
ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ಇಡಿ ಸಮನ್ಸ್ ನೀಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣದಲ್ಲಿ ವಿಚಾರಣೆಗಾಗಿ ಫೆಬ್ರವರಿ 19 ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹೇಳಿದೆ

ದೆಹಲಿ ಫೆಬ್ರುವರಿ 15: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಪ್ರಕರಣದಲ್ಲಿ ವಿಚಾರಣೆಗಾಗಿ ಫೆಬ್ರವರಿ 19 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಗುರುವಾರ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ (Mahua moitra) ಅವರಿಗೆ ಸಮನ್ಸ್ ನೀಡಿದೆ. ಲೋಕಪಾಲ್ ಉಲ್ಲೇಖಿಸಿದ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (CBI) ಮೊಯಿತ್ರಾ ಅವರನ್ನೂ ತನಿಖೆಗೆ ಒಳಪಡಿಸಿದೆ. ಮೊಯಿತ್ರಾ ಅವರು ಲೋಕಸಭೆಯ ಪ್ರಶ್ನೆಗಳಲ್ಲಿ ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದು, ಉಡುಗೊರೆಗಳ ವಿನಿಮಯಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರ ಆಜ್ಞೆಯ ಮೇರೆಗೆ ಇದನ್ನು ಮಾಡಲಾಗಿದೆ.ಮೊಯಿತ್ರಾ ಅವರು ವಿತ್ತೀಯ ಲಾಭಕ್ಕಾಗಿ ರಾಷ್ಟ್ರೀಯ ಭದ್ರತೆಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ದುಬೆ ಆರೋಪಿಸಿದ್ದರು.
ಡಿಸೆಂಬರ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಹೊರಹಾಕಲಾಯಿತು. ಅದಾನಿ ಗ್ರೂಪ್‌ನ ವ್ಯವಹಾರಗಳನ್ನು ಪ್ರಶ್ನಿಸಿದ್ದಕ್ಕಾಗಿ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಪ್ರತಿಪಾದಿಸಿದ ಮೊಯಿತ್ರಾ ಅವರು ಯಾವುದೇ ಈ ಆರೋಪವನ್ನು ನಿರಂತರವಾಗಿ ನಿರಾಕರಿಸಿದ್ದಾರೆ.
“ಲೋಕಪಾಲ್ ಕಾಯಿದೆಯ ಪ್ರಕಾರ ವೆಬ್‌ಸೈಟ್‌ನಲ್ಲಿ ಯಾವುದೇ ರೆಫರಲ್ ಆದೇಶವನ್ನು ಲೋಕಪಾಲ್ ಅಪ್‌ಲೋಡ್ ಮಾಡಿಲ್ಲ, ಅಥವಾ ಸಿಬಿಐ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಮಾಧ್ಯಮ ಸರ್ಕಸ್‌ನಂತೆ ‘ಮೂಲಗಳು’ ಪತ್ರಕರ್ತರಿಗೆ ಹೇಳುತ್ತಿವೆ. ನನ್ನನ್ನು ಬೇಟೆಯಾಡುವ ಮುನ್ನ ₹ 13,000 ಕೋಟಿ ಅದಾನಿ ಕಲ್ಲಿದ್ದಲು ಹಗರಣದ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆಗೆ ನಡೆಸಬೇಕು ಎಂದು ಮೊಯಿತ್ರಾ ನವೆಂಬರ್‌ನಲ್ಲಿ ಹೇಳಿದ್ದರು.
ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಸಿಬಿಐ ಪ್ರಶ್ನೆಗಳಿಗೆ ಮೊಯಿತ್ರಾ ಪ್ರತಿಕ್ರಿಯೆ ಸಲ್ಲಿಕೆ
ಗುರುವಾರ, ಮೊಯಿತ್ರಾ ಅವರು ತಮ್ಮ ಸಂಸದೀಯ ವಿಚಾರಣೆಯಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಪ್ರಶ್ನೆಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಪ್ರಸ್ತುತ ಆಕೆಯ ಪ್ರತಿಕ್ರಿಯೆಗಳನ್ನು ಪರಿಶೀಲಿಸುತ್ತಿದ್ದು ಇದಾದ ನಂತರ ಭ್ರಷ್ಟಾಚಾರ-ವಿರೋಧಿ ಒಂಬುಡ್ಸ್‌ಮನ್ ಲೋಕಪಾಲ್‌ಗೆ ವರದಿಯನ್ನು ಸಲ್ಲಿಸಲಿದೆ.
ಇದನ್ನೂ ಓದಿ: ಬಂಗಲೆ ತೆರವು ನೋಟಿಸ್ ಪ್ರಶ್ನಿಸಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ಲೋಕಪಾಲ್ ಉಲ್ಲೇಖದ ಆಧಾರದ ಮೇಲೆ ಮೊಯಿತ್ರಾ ವಿರುದ್ಧದ ಆರೋಪಗಳ ಕುರಿತು ಸಿಬಿಐ ಪ್ರಾಥಮಿಕ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ, ಸಂಸ್ಥೆಯು ವಕೀಲ ಜೈ ದೇಹದ್ರಾಯ್ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Thu, 15 February 24



