ಬಂಗಲೆ ತೆರವು ನೋಟಿಸ್ ಪ್ರಶ್ನಿಸಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ತನಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ತೆರವು ಮಾಡುವಂತೆ ತನಗೆ ಕಳುಹಿಸಿದ್ದ ನೋಟಿಸ್ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮಹುವಾ ಮೊಯಿತ್ರಾ(Mahua Moitra) ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ . ಗುರುವಾರ ಹೊರಡಿಸಿದ ತನ್ನ ಆದೇಶದಲ್ಲಿ, ಮೊಯಿತ್ರಾ ಅವರು ಸಂಸದೆಯಾಗಿ ಅಮಾನತುಗೊಂಡಿರುವುದರಿಂದ ಬಂಗಲೆಯಲ್ಲಿ ವಾಸಿಸುವ ಹಕ್ಕು ಇಲ್ಲ ಎಂದು ಹೈಕೋರ್ಟ್ ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದ ಮೇಲೆ ಡಿಸೆಂಬರ್ 8 ರಂದು ಅವರನ್ನು ಉಚ್ಛಾಟಿಸಿದ ಬಳಿಕ ಜನವರಿ 7ರೊಳಗೆ ಬಂಗೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು.
ನಂತರ ತೃಣಮೂಲ ಕಾಂಗ್ರೆಸ್‌ನ ನಾಯಕರು ಡಿಒಇ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು. ಆದಾಗ್ಯೂ, ಜನವರಿ 4 ರಂದು ನ್ಯಾಯಾಲಯವು ಮಹುವಾ ಮೊಯಿತ್ರಾ ಅವರಿಗೆ ಸರ್ಕಾರವು ಮಂಜೂರು ಮಾಡಿದ ವಸತಿಗೃಹದಲ್ಲಿ ಉಳಿಯಲು ಅನುಮತಿಗಾಗಿ DoE ಅನ್ನು ಸಂಪರ್ಕಿಸಲು ಕೇಳಿತು.
ಮತ್ತಷ್ಟು ಓದಿ: ಸರ್ಕಾರಿ ಬಂಗಲೆ ತೆರವು ಆದೇಶದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಮಹುವಾ ಮೊಯಿತ್ರಾ
ತನ್ನನ್ನು ಪದಚ್ಯುತಗೊಳಿಸುವಂತೆ ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯು ಅಂಗೀಕರಿಸಿದ ನಂತರ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಸಂಸತ್ತಿನ ಆಂತರಿಕ ವಿಚಾರಗಳಲ್ಲಿ ತಾನು ಮೂಗು ತೂರಿಸಲು ಸಾಧ್ಯವಿಲ್ಲ
ಮೊಯಿತ್ರಾ ಅವರು ತಕ್ಷಣ ಬಂಗಲೆಯನ್ನು ಖಾಲಿ ಮಾಡುವಂತೆ ಡಿಒಇಯ ಸೂಚನೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋದರು. ಆದಾಗ್ಯೂ, ನ್ಯಾಯಾಲಯವು ಆಕೆಯ ಮನವಿಯನ್ನು ತಿರಸ್ಕರಿಸಿತು.
ಆದರೆ ಮಹುವಾ ಮೊಯಿತ್ರಾ ಆಸ್ಪತ್ರೆಗೆ ದಾಖಲಾಗಿದ್ದಾರೆ, ಐಸಿಯುನಲ್ಲಿದ್ದಾರೆ ಈಗ ಮನೆಯಿಂದ ಹೊರಹಾಕಬೇಡಿ ಎಂದು ಮೊಯಿತ್ರಾ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ