The Presidential Years ಪ್ರಣಬ್ ಮುಖರ್ಜಿ ಆತ್ಮಚರಿತ್ರೆ.. ಕಾಂಗ್ರೆಸ್ ಮತ್ತು ಮೋದಿ ಇಬ್ಬರಿಗೂ ಬಿಸಿ ತುಪ್ಪ

ಪ್ರಣಬ್ ಮುಖರ್ಜಿ ಅವರ ಅತ್ಮ ಚರಿತ್ರೆಯ ಕೊನೆ ಭಾಗ, The Presidential Years ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಇದು ರಾಷ್ಟ್ರದ ರಾಜಕೀಯ ವಲಯದಲ್ಲಿ ಸುಂಟರಗಾಳಿ ಎಬ್ಬಿಸುವುದು ಖಂಡಿತ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಬಗೆಗಿನ ಟೀಕೆಗಳನ್ನೊಳಗೊಂಡ ಕೃತಿ ಇದಾಗಿದೆ.

The Presidential Years ಪ್ರಣಬ್ ಮುಖರ್ಜಿ ಆತ್ಮಚರಿತ್ರೆ.. ಕಾಂಗ್ರೆಸ್ ಮತ್ತು ಮೋದಿ ಇಬ್ಬರಿಗೂ ಬಿಸಿ ತುಪ್ಪ
The Presidential Years ರಚನೆಯಲ್ಲಿ ತೊಡಗಿರುವ ಪ್ರಣಬ್​ ದಾ
Follow us
ಡಾ. ಭಾಸ್ಕರ ಹೆಗಡೆ
| Updated By: ಸಾಧು ಶ್ರೀನಾಥ್​

Updated on: Dec 12, 2020 | 6:11 PM

ಕೆಲವರು ಬದುಕಿದ್ದಾಗಲೂ ವಿವಾದ ಸೃಷ್ಟಿಸುತ್ತಾರೆ. ಮತ್ತೆ ಸತ್ತ ಮೇಲೆ ವಿವಾದಕ್ಕೆ ಕಾರಣಕರ್ತರಾಗುತ್ತಾರೆ. ಆದರೆ ಬದುಕಲ್ಲೂ, ಉಸಿರು ಬಿಟ್ಟ ಮೇಲೂ ವಿವಾದ ಹುಟ್ಟಿಸಿದ ಕೆಲವರಲ್ಲಿ ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಒಬ್ಬರು. ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಅವರ ಅಧ್ಯಕ್ಷೀಯ ವರ್ಷಗಳು (The Presidential Years) ಎಂಬ ಆತ್ಮಚರಿತ್ರೆಯ ಕೊನೆಯ ಭಾಗ ಮತ್ತೆ ವಿವಾದವನ್ನು ಹುಟ್ಟು ಹಾಕುವುದು ನಿಶ್ಚಿತ.

ಈ ಪುಸ್ತಕದ ಪ್ರಕಾಶಕರಾದ, ರೂಪಾ ಆ್ಯಂಡ್ ಕೋ ಹಂಚಿಕೊಂಡ ಮಾಹಿತಿಯಂತೆ, ಮುಖರ್ಜಿ 2014 ರ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಗೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ. ಇದನ್ನು ಓದಿ ಬಿಜೆಪಿ ಖುಷಿಯಾಗಬೇಕಾದ್ದಿಲ್ಲ. ಏಕೆಂದರೆ, ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೂಡ ಖಂಡತುಂಡವಾಗಿಯೇ ಮಾತನಾಡಿದ್ದಾರೆ. ಮುಖರ್ಜಿ ಪ್ರಕಾರ ಮೋದಿಯವರ ಎನ್​ಡಿಎ-1 ಆಳ್ವಿಕೆಯಲ್ಲಿ ಮೋದಿ ನಿರಂಕುಶಿಯಾಗಿದ್ದರು ಎಂದು ಹೇಳಿದ್ದಾರೆ.

ಮುಂದಿನ ತಿಂಗಳು ಬಿಡುಗಡೆ ಆಗಲಿರುವ ಅವರ ಆತ್ಮ ಚರಿತ್ರೆಯ ಕೊನೆಯ ಕಂತಿನಲ್ಲಿ ಅವರು ಇನ್ನೊಂದು ವಿಚಾರವನ್ನು ಹೇಳಿಯೇ ಬಿಟ್ಟಿದ್ದಾರೆ. ಅದೇನೆಂದರೆ, ಕೆಲವು ಕಾಂಗ್ರೆಸ್ಸಿಗರು ಮುಖರ್ಜಿಯವರಿಗೆ ಖಾಸಗಿಯಾಗಿ ಹೇಳಿದ್ದರಂತೆ: ನೀವು ಪ್ರಧಾನಿಯಾಗಿದ್ದಿದ್ದರೆ ಕಾಂಗ್ರೆಸ್ ಮತ್ತು ಯುಪಿಎ 2014 ರಲ್ಲಿ ಸೋಲುತ್ತಿರಲಿಲ್ಲ. ಅಷ್ಟು ಹೇಳಿರುವ ಅವರು ಅಲ್ಲಿಗೆ ನಿಲ್ಲುವುದಿಲ್ಲ. ಮುಂದುವರೆದು ತಾನು ಆ ವಾದವನ್ನು ನಂಬಲ್ಲ ಎಂದು ಮುಖರ್ಜಿ ಬರೆದುಕೊಂಡಿದ್ದಾರೆ. ಮುಖರ್ಜಿ 2012 ರಿಂದ 2017ರ ತನಕ ಭಾರತದ ರಾಷ್ಟ್ರಪತಿಯಾಗಿದ್ದರು.

ದೇಶವನ್ನು ಆಳುವ ಮತ್ತು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಪ್ರಧಾನಿ ಅವರ ಮೇಲಿರುತ್ತದೆ. ಮತ್ತು ರಾಷ್ಟ್ರದ ಆಗುಹೋಗುಗಳ ಗತಿಯನ್ನು ಪ್ರಧಾನಿಯ ನಡುವಳಿಕೆಯಲ್ಲಿ ಗುರುತಿಸಲಾಗುತ್ತದೆ. ಮನಮೋಹನ್ ಸಿಂಗ್ ಅವರು ತಮ್ಮ ಮಿತ್ರ ಪಕ್ಷಗಳ ಕೂಟ ಉಳಿಸಿಕೊಳ್ಳುವುದರಲ್ಲಿ ವ್ಯಸ್ತರಾಗಿದ್ದರು. ಸಂಸತ್ತಿನ ಸದನ ಕಲಾಪದಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ತುಂಬಾ ಕಡಿಮೆ ಆಗಿತ್ತು. ಸಿಂಗ್ ಪಕ್ಷದ ಲೋಕಸಭಾ ಸದಸ್ಯರ ಜೊತೆ ಸಂಪರ್ಕ ಕಡಿದುಕೊಂಡುಬಿಟ್ಟಿದ್ದರು. ಇದರಿಂದಾಗಿ ಸರಕಾರದ ಕೆಲಸದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಸೋನಿಯಾ ಗಾಂಧಿ ಪಕ್ಷದ ವ್ಯವಹಾರವನ್ನು ಸ್ವಂತಿಕೆಯ ಮೂಲಕ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದರು. ಹಾಗಾಗಿ ಪಕ್ಷ ಸೋಲುಂಡಿತು ಎಂದು ಅವರು ಹೇಳಿದ್ದಾರೆ.

The Presidential Years ರಚನೆಯಲ್ಲಿ ತೊಡಗಿರುವ ಪ್ರಣಬ್​ ಮುಖರ್ಜಿ

ಪ್ರಧಾನಿ ಮೋದಿಯವರ ಮೊದಲ ಅವಧಿಯಲ್ಲಿ, ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಬಂಧ ತುಂಬಾ ಹಳಸಿತ್ತು. ಇದಕ್ಕೆ ಒಂದು ಕಾರಣವೇನೆಂದರೆ ಪ್ರಧಾನಿ ಮೋದಿಯವರ ಆಳ್ವಕೆಯ ರೀತಿ ಓರ್ವ ನಿರಂಕುಶಾಧಿಕಾರಿಯದ್ದಾಗಿತ್ತು.

ಅಮೇರಿಕದ ಅಂದಿನ ಆಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ಅಮೇರಿಕದಿಂದ ತಂದ ವಾಹನದಲ್ಲಿಯೇ ಅವರು ಓಡಾಡಬೇಕು. ಅಷ್ಟೇ ಅಲ್ಲ, ಭಾರತದ ರಾಷ್ಟ್ರಪತಿ ಮುಖರ್ಜಿ ಕೂಡ ಅವರ ಜೊತೆ ಹೋಗಬೇಕೆಂದು ಅಮೇಮೆರಿಕಾದ ಭದ್ರತಾ ಅಧಿಕಾರಿಗಳು ಒತ್ತಾಯ ಮಾಡಿದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಅವರು ಆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಭಾರತದ ಅತಿಥಿಯಾಗಿ ಬಂದಿರುವ ಅವರು ಭಾರತ ನೀಡುವ ರಕ್ಷಣಾ ವ್ಯವಸ್ಥೆ ಬಗ್ಗೆ ನಂಬುಗೆ ಇರಬೇಕು. ಆದ್ದರಿಂದ ಭಾರತ ನೀಡುವ ಕಾರಿನಲ್ಲಿಯೇ ಅಮೆರಿಕಾದ ಅಧ್ಯಕ್ಷರು ಓಡಾಡಬೇಕೆಂದು ಒತ್ತಾಯಿಸಿದ್ದನ್ನು ಸ್ಮರಿಸಿದ್ದಾರೆ. ಈ ಪುಸ್ತಕದಲ್ಲಿ ಇಂಥ ಅನೇಕ ಸ್ವಾರಸ್ಯ ಘಟನೆಗಳು ಇವೆ ಎಂದು ರೂಪಾ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್