ಕೊವಿಡ್ ನಿಯಮ ಉಲ್ಲಂಘಿಸಿ ವೇದಿಕೆಯಲ್ಲಿ ನೃತ್ಯ ಮಾಡಿದ ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಯಾದವ್ ವಿರುದ್ಧ ಎಫ್​ಐಆರ್​ ದಾಖಲು

| Updated By: shruti hegde

Updated on: Jun 04, 2021 | 1:51 PM

ಕೊವಿಡ್​ ನಿಯಮ ಉಲ್ಲಂಘಿಸಿದಕ್ಕಾಗಿ ಮುಖಂಡ ಶೈಲೇಂದ್ರ ಸಿಂಗ್​ ಮತ್ತು ಅವರ ಜತೆಗೆ ನೃತ್ಯ ಮಾಡಿದ ಇನ್ನಿತರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಕೊವಿಡ್ ನಿಯಮ ಉಲ್ಲಂಘಿಸಿ ವೇದಿಕೆಯಲ್ಲಿ ನೃತ್ಯ ಮಾಡಿದ ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಯಾದವ್ ವಿರುದ್ಧ ಎಫ್​ಐಆರ್​ ದಾಖಲು
ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಯಾದವ್
Follow us on

ದೆಹಲಿ: ಸಮಾಜವಾದಿ ಪಕ್ಷದ ಮುಖಂಡ ಶೈಲೇಂದ್ರ ಯಾದವ್​ ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೊವಿಡ್​ ನಿಯಮ ಉಲ್ಲಂಘಿಸಿ ವೇದಿಕೆಯಲ್ಲಿ ನೃತ್ಯ ಮಾಡಿದ ಮುಖಂಡ ಶೈಲೇಂದ್ರ ಸಿಂಗ್​ ಮತ್ತು ಅವರ ಜತೆಗೆ ನೃತ್ಯ ಮಾಡಿದ ಇನ್ನಿತರರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದ ವಿವಾಹ ಸಂಭ್ರಮದಲ್ಲಿ ಶೈಲೇಂದ್ರ ಯಾದವ್​ ನೃತ್ಯ ಮಾಡುತ್ತಿದ್ದರು. ಸಮಾಜವಾದಿ ಪಕ್ಷದ ಅಭಿಯಾನಗೀತೆ ಸಮಾಜ್​ವಾದ್ ಕಾ ಜಾಂಡಾ ಫಿರ್​​ ಸೆ ಯುಪಿ ಮೆ ಲಹ್ರಾಯೆಂಗೆ ಬ್ಯಾಗ್ರೌಂಡ್​​ ಮ್ಯೂಸಿಕ್​ಗೆ ನೃತ್ಯ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

ಗೋಖರ್​ಪುರದ ಎಸ್​ಎಸ್​ಪಿ ದಿನೇಶ್​ ಕುಮಾರ್​ ಪಿ, ಕೊವಿಡ್​ ಸೋಂಕಿನ ನಿಯಂತ್ರಣಕ್ಕೆ ಇರುವ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ನಾಯಕ ಶೈಲೇಂದ್ರ ಯಾದವ್​, ಸಂಘಟಕರು ಮತ್ತು ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದ ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: 

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೊವಿಡ್ ಶಿಷ್ಟಾಚಾರ ಉಲ್ಲಂಘನೆ: ಆಯೋಜಕರಿಗೆ 10 ಸಾವಿರ ರೂಪಾಯಿ ದಂಡ

ಕೊವಿಡ್​ ನಿಯಮ ಉಲ್ಲಂಘನೆ: ಅಧಿಕಾರಿಗಳನ್ನು ನೋಡುತ್ತಲೇ ವಧುವನ್ನೇ ಬಿಟ್ಟು ವರ ಪರಾರಿ!