ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲಂನ ಎಡದಂಡೆ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟನಲ್ಲಿ ಅಗ್ನಿ ಅವಗಡ ಸಂಭವಿಸಿದೆ. ಅಂಡರ್ ಗ್ರೌಂಡನಲ್ಲಿದ್ದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಧಿಡೀರ್ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಭಾರಿ ಸ್ಫೋಟದ ಶಬ್ದ ಕೇಳಿಸಿದ ಕಾರಣ ಅಲ್ಲಿನ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಘಟನೆ ವೇಳೆ 15ಕ್ಕೂಹೆಚ್ಚು ಜನರು ಅಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ 8ಜನರನ್ನು ಅಗ್ನಿ ಶ್ಯಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಇಂದು ಬೆಳಿಗ್ಗೆ ಸಿ.ಎಂ. ಜಗನ್ ಮೋಹನ್ ರೆಡ್ಡಿಯವರ ಶ್ರೀಶೈಲಂ ಭೇಟಿ ನಿಗದಿಯಾಗಿತ್ತು. ಘಟನೆ ತಡ ರಾತ್ರಿ ನಡೆದ ಪರಿಣಾಮ ಭಾರಿ ಅನಾಹುತ ತಪ್ಪಿದೆ.
ನಾಪತ್ತೆಯಾಗಿದ್ದ 9 ಜನರ ಪೈಕಿ ಮೂವರ ಮೃತ ದೇಹ ಪತ್ತೆ..
ಅವಗಡದಲ್ಲಿ ನಾಪತ್ತೆಯಾಗಿದ್ದ 9 ಜನರ ಪೈಕಿ ಮೂವರ ಮೃತ ದೇಹ ಪತ್ತೆಯಾಗಿದ್ದು, ಅಸಿಸ್ಟಂಟ್ ಇಂಜನಿಯರುಗಳಾದ ಮೋಹನ್, ಸುಂದರ್, ಫಾತೀಮಾ ಬೇಗಂ ಮೃತ ಪಟ್ಟ ದುರ್ಧೈವಿಗಳಾಗಿದ್ದಾರೆ. ಸಿಐಎಸ್ ಎಫ್ ರಕ್ಷಣಾ ತಂಡದಿಂದ ಮೃತ ದೇಹಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪತ್ತೆಯಾಗಿರುವ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
Published On - 8:33 am, Fri, 21 August 20