ಬೆಂಕಿಯಿಂದ ಹೊತ್ತಿ ಉರಿಯಿತು ಸ್ಟೇಶನ್ನಲ್ಲಿ ನಿಂತಿದ್ದ ರೈಲು; ದಟ್ಟ ಹೊಗೆ, ಭಯಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ
9.13 ರ ಹೊತ್ತಿಗೆ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಒಂದೊಂದೇ ಬೋಗಿಗಳು ಹೊತ್ತಿ ಉರಿದವು. ನಂತರ 9.50ರಷ್ಟರಲ್ಲಿ ಬೆಂಕಿ ನಂದಿಸಲಾಯಿತು ಎಂದು ಸಿಪಿಆರ್ಒ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
ಬಿಹಾರದ ಮಧುಬನಿ ರೈಲ್ವೆ ಸ್ಟೇಶನ್ನಲ್ಲಿ ನಿಂತಿದ್ದ ಖಾಲಿ ರೈಲಿನಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡು (Fire In Train) ಆತಂಕ ಸೃಷ್ಟಿಸಿತ್ತು. ಬೆಳಗ್ಗೆ 9.13ರ ಹೊತ್ತಿಗೆ ಸ್ವತಂತ್ರ ಸೇನಾನಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ರೈಲಿನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಬೆಂಕಿ ಉರಿದು, ದಟ್ಟವಾದ ಹೊಗೆ ಆವರಿಸಿದ್ದ ರೈಲಿನ ವಿಡಿಯೋ ವೈರಲ್ ಆಗಿದೆ. ಅಲ್ಲಿನ ಸಿಬ್ಬಂದಿ ಬಕೆಟ್ಗಳ ಮೂಲಕ ನೀರು ಹಾಕಿ ಬೆಂಕಿ ನಂದಿಸುವ ಯತ್ನ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಬಿಹಾರದ ಜಯನಗರದಿಂದ ದೆಹಲಿಗೆ ಸಂಚರಿಸುವ ರೈಲು.
#WATCH | Fire breaks out in an empty train at Madhubani railway station in Bihar pic.twitter.com/Rps2N8gwKk
— ANI (@ANI) February 19, 2022
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೂರ್ವ ಕೇಂದ್ರ ರೈಲ್ವೆ ಸಿಪಿಆರ್ಒ ವೀರೇಂದ್ರ ಕುಮಾರ್, ಸುಮಾರು 9.13 ರ ಹೊತ್ತಿಗೆ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಒಂದೊಂದೇ ಬೋಗಿಗಳು ಹೊತ್ತಿ ಉರಿದವು. ನಂತರ 9.50ರಷ್ಟರಲ್ಲಿ ಬೆಂಕಿ ನಂದಿಸಲಾಯಿತು. ಅದೃಷ್ಟವಶಾತ್ ಖಾಲಿ ಇತ್ತು ಹಾಗಾಗಿ ಯಾರದ್ದೂ ಪ್ರಾಣ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಕಿಶೋರ್-ನಿತೀಶ್ ಕುಮಾರ್ ಒಟ್ಟಿಗೇ ಡಿನ್ನರ್; ರಾಷ್ಟ್ರ ರಾಜಕೀಯ ವಲಯದಲ್ಲಿ ಶುರುವಾಯ್ತು ಕುತೂಹಲ, ಚರ್ಚೆ !
Published On - 12:32 pm, Sat, 19 February 22