AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್: ಕಾರಿನಲ್ಲಿ 9 ವರ್ಷದ ಬಾಲಕನ ಕೈಗೆ ಸಿಕ್ಕಿದ ಪಿಸ್ತೂಲ್​​ನಿಂದ ಹಾರಿದ ಗುಂಡು; ಅಪ್ಪ ಸಾವು

ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ದಲ್ಜಿತ್ ಸಿಂಗ್ ಜಿತಾ ಅವರು ಪತ್ನಿ ಹಾಗೂ ಪುತ್ರನೊಂದಿಗೆ ಕಾರಿನಲ್ಲಿ ಸಹೋದರಿಯ ಮನೆಗೆ ಹೋಗುತ್ತಿದ್ದರು. ಅಷ್ಟರಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಗನ ಕೈಗೆ ದಲ್ಜಿತ್ ಪಿಸ್ತೂಲ್ ಸಿಕ್ಕಿತ್ತು

ಪಂಜಾಬ್: ಕಾರಿನಲ್ಲಿ 9 ವರ್ಷದ ಬಾಲಕನ ಕೈಗೆ ಸಿಕ್ಕಿದ ಪಿಸ್ತೂಲ್​​ನಿಂದ ಹಾರಿದ ಗುಂಡು; ಅಪ್ಪ ಸಾವು
ದಲ್ಜಿತ್ ಸಿಂಗ್ ಜೀತಾ
ರಶ್ಮಿ ಕಲ್ಲಕಟ್ಟ
|

Updated on: Jul 31, 2023 | 5:49 PM

Share

ಲುಧಿಯಾನ ಜುಲೈ 31: ರಾಯಕೋಟ್‌ನ ಅಕಲ್‌ಘರ್ ಖುರ್ದ್ ಗ್ರಾಮದಲ್ಲಿ 9 ವರ್ಷದ ಮಗ ಹಾರಿಸಿದ ಬುಲೆಟ್‌ನಿಂದ ಗಾಯಗೊಂಡ ಅಪ್ಪ ದಲ್ಜಿತ್ ಸಿಂಗ್ ಜೀತಾ ಸೋಮವಾರ ಬೆಳಿಗ್ಗೆ ಲುಧಿಯಾನದ (Ludhiana) ಡಿಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 45 ವರ್ಷದ ರೈತ ದಲ್ಜಿತ್ ಸಿಂಗ್ ಕಳೆದ ಎರಡು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ದಲ್ಜಿತ್ ಸಿಂಗ್ ಸಾವಿಗೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ. ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ದಲ್ಜಿತ್ ಸಿಂಗ್ ಜಿತಾ ಅವರು ಪತ್ನಿ ಹಾಗೂ ಪುತ್ರನೊಂದಿಗೆ ಕಾರಿನಲ್ಲಿ ಸಹೋದರಿಯ ಮನೆಗೆ ಹೋಗುತ್ತಿದ್ದರು. ಅಷ್ಟರಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಗನ ಕೈಗೆ ದಲ್ಜಿತ್ ಪಿಸ್ತೂಲ್ ಸಿಕ್ಕಿತ್ತು. ಮಗ ಆಟಿಕೆಯಂತೆ ಪಿಸ್ತೂಲ್‌ನೊಂದಿಗೆ ಆಟವಾಡಲು ಪ್ರಾರಂಭಿಸಿದ್ದಾನೆ. ಆಗ ಇದ್ದಕ್ಕಿದ್ದಂತೆ ಟ್ರಿಗರ್ ಎಳೆದು ಗುಂಡು ದಲ್ಜಿತ್‌ನ ಬೆನ್ನಿಗೆ ತಗುಲಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುಂಡು ದಲ್ಜಿತ್ ಅವರ ಹೊಕ್ಕುಳ ಬಳಿ ಹೊಟ್ಟೆಯ ಮುಂಭಾಗದಲ್ಲಿ ತೂರಿಕೊಂಡಿದೆ. ದಲ್ಜಿತ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅವರನ್ನು ಲುಧಿಯಾನಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಇಂದು ಬೆಳಿಗ್ಗೆ ನಿಧನರಾದರು ಎಂದು ಟಿವಿ9 ಪಂಜಾಬಿ ವರದಿ ಮಾಡಿದೆ.

ಇದನ್ನೂ ಓದಿ: Toddler: ಆರು ತಿಂಗಳಲ್ಲಿ ನೊಬೆಲ್ ವಿಶ್ವ ದಾಖಲೆ ತನ್ನದಾಗಿಸಿಕೊಂಡ ಮುದ್ದು ಮಗು.. ಏನು ಸಾಧನೆ ಮಾಡಿದ್ದಾನೆ ಗೊತ್ತಾ?

ದಲ್ಜಿತ್ ಸಿಂಗ್ ಜಿತಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸಿವಿಲ್ ಆಸ್ಪತ್ರೆ ಜಾಗರಾನ್‌ನಲ್ಲಿ ನಡೆಸಲಾಗುತ್ತಿದೆ ಎಂದು ಚೌಕಿ ಲೋಹ್ತಬಡ್ಡಿಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ