
ಚೆನ್ನೈ: ತಮಿಳುನಾಡಿನ ತಿರುಮಂಗಲಂನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮದುರೈ ಜಿಲ್ಲೆಯ ತಿರುಮಂಗಲಂನ ರಾಜಲಕ್ಷ್ಮಿ ಫೈರ್ ಹೌಸ್ನಲ್ಲಿ ಘಟನೆ ನಡೆದಿದೆ. ಕೋಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಐವರು ಸತ್ತಿದ್ದು ಮೃತರೆಲ್ಲಾ ಮಹಿಳೆಯರು ಎಂದು ಹೇಳಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಲತ್ರೆಗೆ ದಾಖಲಿಸಲಾಗಿದೆ.