ದೆಹಲಿ: ಉತ್ತರಾಖಂಡ್ನಲ್ಲಿ ಭಾರಿ ಮಳೆ, ಪ್ರವಾಹ (Uttarakhand Rain)ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಜತೆ ಮಾತನಾಡಿದ್ದಾರೆ. ಹಾಗೇ, ಉತ್ತರಾಖಂಡ್ನ ಕೇಂದ್ರ ಸಚಿವರಾದ ಅಜಯ್ ಭಟ್ರೊಂದಿಗೆ ಮಾತನಾಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ. ನಿನ್ನೆ ಉತ್ತರಾಖಂಡ್ ಗವರ್ನರ್ ಲೆಫ್ಟಿನಂಟ್ ಜನರಲ್ ಗುರ್ಮಿತ್ ಸಿಂಗ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ಇನ್ನು ಉತ್ತರಾಖಂಡ್ನಲ್ಲಿ ವಿಪರೀತ ಮಳೆಯಿಂದ ಉಂಟಾಗಿರುವ ಅವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹಾಗೇ, ರಾಜ್ಯದ ಸೆಕ್ರೆಟರಿಯಟ್ನ ವಿಪತ್ತು ನಿಯಂತ್ರಣಾ ಕೊಠಡಿ ಮೂಲಕ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಅಂದರೆ ಅಲ್ಲಿಂದ ಕಾಲಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ. ಉತ್ತರಾಖಂಡ್ನಲ್ಲಿ ಮಳೆ-ಪ್ರವಾಹ ಪರಿಸ್ಥಿತಿಗೆ ಇದುವರೆಗೆ 5ಮಂದಿ ಮೃತಪಟ್ಟಿದ್ದು, ಅದರಲ್ಲಿ ಮೂವರು ನೇಪಾಳದ ಕಾರ್ಮಿಕರಾಗಿದ್ದಾರೆ. ಇನ್ನೆರಡು ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಮಿಕರು ಪುರಿ ಜಿಲ್ಲೆಯ ಲಾನ್ಸ್ಡೌನ್ ಸಮೀಪದ ಸಂಖಲ್ನಲ್ಲಿ ಟೆಂಟ್ನಲ್ಲಿ ಇದ್ದರು. ಅಲ್ಲೇ ಸಮೀಪದ ಹೊಲದ ಗುಂಟ ಹರಿದ ರಭಸದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಜೀವಂತ ಸಮಾಧಿಯಾಗಿದ್ದಾರೆ ಎಂದು ಡಿಸಿ ವಿಜಯ್ಕುಮಾರ್ ಜೋಗ್ಡಂಡೆ ಹೇಳಿದ್ದಾರೆ.
#WATCH | Uttarakhand: Nainital Lake overflows and floods the streets in Nainital & enters building and houses here. The region is receiving incessant heavy rainfall. pic.twitter.com/G2TLfNqo21
— ANI (@ANI) October 19, 2021
ಇದನ್ನೂ ಓದಿ: ಬೆಳಗಾವಿ: ನೈತಿಕ ಪೊಲೀಸ್‌ಗಿರಿ ಪ್ರಕರಣ; ಅನ್ಯಕೋಮಿನ ಸ್ನೇಹಿತೆಯರ ಜತೆ ಮಾತನಾಡುತ್ತಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನ
MS Dhoni: ಸಿಎಸ್ಕೆಯಲ್ಲಿ ಧೋನಿ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಫ್ರಾಂಚೈಸಿ ಮಾಲೀಕ ಶ್ರೀನಿವಾಸನ್
Published On - 12:30 pm, Tue, 19 October 21