ರಕ್ಷಾಬಂಧನಕ್ಕಾಗಿ ಮುನ್ನಾದಿನವೇ ತವರು ಮನೆಗೆ ಬಂದ ಸೋದರಿಯರು; ಹಬ್ಬದ ದಿನ ಅಣ್ಣನ ಜೀವವಿಲ್ಲದ ಕೈಯಿಗೆ ರಾಖಿ ಕಟ್ಟುವಂತಾಯ್ತು

ತೆಲಂಗಾಣದ ನಲಗೊಂದಾ ಜಿಲ್ಲೆಯ ಇಂಡುಗುಲಾ ಗ್ರಾಮ ಪಂಚಾಯಿತಿಯಲ್ಲಿ ಹೀಗೊಂದು ಘಟನೆ ನಡೆದಿದೆ. ಚಿಂತಪಲ್ಲಿ ಲಕ್ಷ್ಮಯ್ಯ (59) ಭಾನುವಾರ, ರಕ್ಷಾಬಂಧನದ ದಿನದಂದೇ ಮೃತಪಟ್ಟಿದ್ದಾರೆ.

ರಕ್ಷಾಬಂಧನಕ್ಕಾಗಿ ಮುನ್ನಾದಿನವೇ ತವರು ಮನೆಗೆ ಬಂದ ಸೋದರಿಯರು; ಹಬ್ಬದ ದಿನ ಅಣ್ಣನ ಜೀವವಿಲ್ಲದ ಕೈಯಿಗೆ ರಾಖಿ ಕಟ್ಟುವಂತಾಯ್ತು
ರಾಖಿ
Edited By:

Updated on: Aug 23, 2021 | 2:29 PM

ನಿನ್ನೆ ರಕ್ಷಾಬಂಧನ. ಸೋದರನಿಗೆ ಸೋದರಿಯರು ಪ್ರೀತಿಯಿಂದ ರಕ್ಷಾ ಬಂಧನ (Rakhi)ವನ್ನು ಕಟ್ಟಿ, ಸದಾ ನಿನ್ನ ರಕ್ಷೆ, ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ, ರಕ್ಷಾ ಬಂಧನದ ದಿನದಂದೇ, ರಾಖಿ ಕಟ್ಟಲು ಕಾಯುತ್ತಿದ್ದ ಸೋದರಿಯರನ್ನೆಲ್ಲ ಬಿಟ್ಟು ಈ ಲೋಕದಿಂದಲೇ ಹೊರಟುಹೋಗಿದ್ದಾರೆ. ಆ ಸೋದರಿಯರು ಕಣ್ಣೀರು ಹಾಕುತ್ತ, ಮೃತ ಸೋದರನ ಕೈಗೇ ರಕ್ಷಾ ಬಂಧನ ಕಟ್ಟಿದ್ದಾರೆ.

ತೆಲಂಗಾಣದ ನಲಗೊಂದಾ ಜಿಲ್ಲೆಯ ಇಂಡುಗುಲಾ ಗ್ರಾಮ ಪಂಚಾಯಿತಿಯಲ್ಲಿ ಹೀಗೊಂದು ಘಟನೆ ನಡೆದಿದೆ. ಚಿಂತಪಲ್ಲಿ ಲಕ್ಷ್ಮಯ್ಯ (59) ಭಾನುವಾರ, ರಕ್ಷಾಬಂಧನದ ದಿನದಂದೇ ಮೃತಪಟ್ಟಿದ್ದಾರೆ. ಆದರೆ ರಕ್ಷಾಬಂಧನದಂದು ಅಣ್ಣನಿಗೆ ರಾಖಿ ಕಟ್ಟಲೆಂದೇ ಅವರ ಐವರು ಸೋದರಿಯರು ಶನಿವಾರ ಸಂಜೆಯೇ ವಿವಿಧ ಗ್ರಾಮಗಳಿಂದ ತವರುಮನೆಗೆ ಬಂದಿದ್ದರು. ಮರುದಿನ ಬೆಳಗ್ಗೆಯಷ್ಟೊತ್ತಿಗೆ ಲಕ್ಷ್ಮಯ್ಯ ಆಕಸ್ಮಾತ್​ ಆಗಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾರೆ. ಅದನ್ನು ನೋಡಿದ ಸೋದರಿಯರು ತುಂಬ ದುಃಖಪಟ್ಟಿದ್ದಾರೆ.

ಅದಾದ ಬಳಿಕ ಲಕ್ಷ್ಮಯ್ಯನವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಯಿತು. ಅದಕ್ಕೂ ಮೊದಲು ಸೋದರಿಯರಾದ ಎರಾ ಲಕ್ಷ್ಮಮ್ಮ, ನಾಮಾ ಪದ್ಮಾ, ಅಲ್ಲಾಪುರಿ ವೆಂಕಟಮ್ಮ, ಕದಿರಿ ಕೋಟಮ್ಮಾ ಮತ್ತು ಜಕ್ಕಿ ಕವಿತಾ ತಮ್ಮ ಅಣ್ಣನ ಜೀವವಿಲ್ಲದ ಕೈಯಿಗೇ ರಾಖಿ ಕಟ್ಟಿದ್ದಾರೆ. ಈ ಐವರು ಇಷ್ಟು ವರ್ಷದಲ್ಲಿ ಒಂದು ಬಾರಿಯೂ ತಮ್ಮ ಸೋದರ ಲಕ್ಷ್ಮಯ್ಯನವರಿಗೆ ರಾಖಿ ಕಟ್ಟುವುದನ್ನು ತಪ್ಪಿಸಿರಲಿಲ್ಲ. ಆದರೆ ಈ ಬಾರಿ ತನ್ನ ಎಲ್ಲ ಸೋದರಿಯರ ಎದುರೇ, ರಕ್ಷಾ ಬಂಧನದಂದೇ ಲಕ್ಷ್ಮಯ್ಯ ತೀರಿಕೊಂಡಿದ್ದಾರೆ. ಸೋದರಿಯರು ತಮ್ಮ ಜೀವವಿಲ್ಲದ ಸೋದರನ ಕೈಗೆ ರಾಖಿ ಕಟ್ಟುವುದನ್ನು ನೋಡಿ ಇಡೀ ಹಳ್ಳಿಗರು ಕಣ್ಣಲ್ಲಿ ನೀರು ಹಾಕಿದ್ದಾರೆ. ಇದೊಂದು ತುಂಬ ಭಾವನಾತ್ಮಕ ಸನ್ನಿವೇಶವಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Vodafone Idea: ವೊಡಾಫೋನ್ ಐಡಿಯಾದ ಬಿಎಸ್​ಎನ್ಎಲ್​ ಎಂಟಿಎನ್​ಎಲ್​ ವಿಲೀನಕ್ಕೆ ಸರ್ಕಾರದ ವಿರೋಧ

Viral Video: ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ​ ವಿಡಿಯೋದಿಂದ ಸಂಕಷ್ಟಕ್ಕೆ ಸಿಲುಕಿದ ನರ್ಸ್