ಮಕ್ಕಳನ್ನು ಆಟಕ್ಕೆ ಕಳಿಸುವ ಪೋಷಕರೇ ಎಚ್ಚರ.. ಚಿಕ್ಕ ಅಜಾಗರೂಕತೆಯೂ ಪ್ರಾಣಕ್ಕೆ ಕುತ್ತಾಗಬಹುದು..

ಐದು ವರ್ಷದ ಮಗು ಲಿಫ್ಟ್ ಬಾಗಿಲಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿರುವ ಘಟನೆ ಮುಂಬೈನ ಧಾರವಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮಕ್ಕಳನ್ನು ಆಟಕ್ಕೆ ಕಳಿಸುವ ಪೋಷಕರೇ ಎಚ್ಚರ.. ಚಿಕ್ಕ ಅಜಾಗರೂಕತೆಯೂ ಪ್ರಾಣಕ್ಕೆ ಕುತ್ತಾಗಬಹುದು..
ಲಿಫ್ಟ್ ಬಾಗಿಲಲ್ಲಿ ಸಿಕ್ಕಿ ಹಾಕಿಕೊಂಡು ಮಗು ಸಾವು

Updated on: Nov 29, 2020 | 12:23 PM

ಮುಂಬೈ: ಮಲಗಿದ್ದ ಮಗುವನ್ನು ಚಿರತೆ ಹೊತ್ತೊಯ್ದ, ಆಟವಾಡುತ್ತಿದ್ದ ಮಗು ನೀರಿನಲ್ಲಿ ಬಿದ್ದು ಮೃತಪಟ್ಟ ಅನೇಕ ಘಟನೆಗಳನ್ನು ಸಾವು ಕೇಳಿದ್ದೇವೆ. ಈಗ ಇದೇ ಮಾದರಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಐದು ವರ್ಷದ ಮಗು ಲಿಫ್ಟ್ ಬಾಗಿಲಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿರುವ ಘಟನೆ ಮುಂಬೈನ ಧಾರವಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಐದು ವರ್ಷದ ಗಂಡು ಮಗು ನಾಲ್ಕನೆ ಮಹಡಿಯಲ್ಲಿರುವ ತನ್ನ ಮನೆಗೆ ಲಿಫ್ಟ್ ಮೂಲಕ ಹೋಗುತ್ತಿದ್ದಾಗ ಲಿಫ್ಟ್​ನ ಮುಂಭಾಗದ ಬಾಗಿಲು ಮತ್ತು ಹಿಂಭಾಗದ ಬಾಗಿಲುಗಳ ಮಧ್ಯೆ ಸಿಲುಕಿಕೊಂಡು ಛಿದ್ರನಾಗಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.

ಇದನ್ನೂ ಓದಿ: ಮದುವೆಯಿಂದ ವಾಪಸಾಗುವಾಗ.. ತಾಯಿಯ ಕೈಯಲ್ಲಿದ್ದ ಮಗು ಬೈಕ್​ನಿಂದ ಆಯತಪ್ಪಿ ಬಿದ್ದು ಸಾವು