AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ IFS ಅಧಿಕಾರಿ ಗಳಿಸಿದ್ದು ಅದೆಷ್ಟು ಆಸ್ತಿ: ಈತನ ಮಗನೀಗ ಪೊಲೀಸರ ಅತಿಥಿ

ಅರಣ್ಯಾಧಿಕಾರಿ ಹಾಗೂ ಆತನ ಕುಟುಂಬದ ಸದಸ್ಯರು ಚಾರ್ಟರ್ಡ್​ ಫ್ಲೈಟ್​ಗಳನ್ನು ಬಾಡಿಗೆಗೆ ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂತು. ಸುಮಾರು ₹ 3 ಕೋಟಿ ಮೌಲ್ಯದ ಫ್ಲೈಟ್ ಬಿಲ್​ಗಳು ಪತ್ತೆಯಾಗಿವೆ.

ಒಡಿಶಾ IFS ಅಧಿಕಾರಿ ಗಳಿಸಿದ್ದು ಅದೆಷ್ಟು ಆಸ್ತಿ: ಈತನ ಮಗನೀಗ ಪೊಲೀಸರ ಅತಿಥಿ
ಪ್ರಾತಿನಿಧಿಕ ಚಿತ್ರ.
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 29, 2020 | 1:17 PM

Share

ಭುವನೇಶ್ವರ: ಒಡಿಶಾ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಭಯ್​ಕಾಂತ್​ ಪಾಠಕ್ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿದೆ.

ಅರಣ್ಯ ಯೋಜನೆ ಮತ್ತು ಅರಣ್ಯೀಕರಣ ವಿಭಾಗದಲ್ಲಿ ಹೆಚ್ಚುವರಿ ಪ್ರಧಾನ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಭಯ್ ಕಾಂತ್ ಪಾಠಕ್ ಮಗನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ.

ಪಾಠಕ್ ಒಡೆತನದ ಆಸ್ತಿಗಳ ಬಗ್ಗೆ ತನಿಖೆ ನಡೆಸಲು ಒಡಿಶಾ ಪೊಲೀಸ್​ ಜಾಗೃತದಳವು ಕಳೆದ ಮೂರು ದಿನಗಳಲ್ಲಿ ಸುಮಾರು 150 ಅಧಿಕಾರಿಗಳನ್ನು ಭಾರತದಾದ್ಯಂತ ಹಲವು ಕಡೆಗಳಲ್ಲಿ ನಿಯೋಜಿಸಿತ್ತು. ಕಾರ್ಯಾಚರಣೆರಣೆಯ ಬಳಿಕ ಅಧಿಕಾರಿ ಹಾಗೂ ಕುಟುಂಬದ ಸದಸ್ಯರು ವಿಮಾನಗಳನ್ನು ಬಾಡಿಗೆಗೆ (ಚಾರ್ಟರ್ಡ್​ ಫ್ಲೈಟ್​) ಪಡೆದಿರುವುದು ತಿಳಿದುಬಂದಿತ್ತು. ಸುಮಾರು ₹ 3 ಕೋಟಿ ಮೌಲ್ಯದ ಫ್ಲೈಟ್ ಬಿಲ್​ಗಳು ಪತ್ತೆಯಾಗಿವೆ.

ಅಭಯ್ ಕಾಂತ್ ಪಾಠಕ್ ಸುಮಾರು ₹9.35 ಕೋಟಿ ಹಣವನ್ನು ಮಗನ ಖಾತೆಗೆ ಜಮಾಮಾಡಿದ್ದು, ಹಲವಾರು ಐಷಾರಾಮಿ ಕಾರುಗಳು ಮತ್ತು ಬೈಕ್​ಗಳು ಮಗನ ಹೆಸರಿನಲ್ಲಿರುವುದು ದೃಢವಾಗಿದೆ. ಶೋಧಕಾರ್ಯದ ವೇಳೆ ನಿವಾಸದಲ್ಲಿ ₹60 ಲಕ್ಷ ನಗದು ಪತ್ತೆಯಾಗಿದೆ. ಜೊತೆಗೆ ದುಬಾರಿ ಮೌಲ್ಯದ ಗೃಹಬಳಕೆ ವಸ್ತುಗಳು ಹಾಗೂ 800ಗ್ರಾಂ ತೂಕದ ಚಿನ್ನಾಭರಣ ದೊರಕಿವೆ. ಮಾತ್ರವಲ್ಲದೇ 23 ಲಕ್ಷ ಮೌಲ್ಯದ ಚಿನ್ನ ಖರೀದಿಗೆ ಸಂಬಂಧಿಸಿದ ದಾಖಲೆಗಳು ವಿಜಿಲೆನ್ಸ್ ಅಧಿಕಾರಿಗಳಿಗೆ ಸಿಕ್ಕಿವೆ.

ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್​ನಲ್ಲಿ ₹90 ಲಕ್ಷಕ್ಕಿಂತ ಹೆಚ್ಚಿನ ಹೋಟೆಲ್ ಬಿಲ್​ಗಳು ಮತ್ತು ಡಿಸೆಂಬರ್ 15ರಂದು ನಡೆಯಬೇಕಿದ್ದ ಆಕಾಶ್ ಪಾಠಕ್ ವಿವಾಹಕ್ಕಾಗಿ ಉದಯಪುರದ ತಾಜ್​ಲೇಕ್ ಪ್ಯಾಲೇಸ್ ಹೋಟೆಲ್​ಗೆ ₹20 ಲಕ್ಷ ಮುಂಗಡ ಹಣವನ್ನು ನೀಡಿರುವ ಮಾಹಿತಿ ತನಿಖೆ ಬಳಿಕ ಸ್ಪಷ್ಟವಾಗಿದೆ.

ಇದನ್ನೂ ಓದಿ: KAS ಅಧಿಕಾರಿ ಡಾ. ಸುಧಾ ಆಪ್ತರಿಗೆ ಬೆಳ್ಳಂಬೆಳಗ್ಗೆ ACB ಶಾಕ್​: ದಾಳಿಯಲ್ಲಿ ನಗದು, ಅಕ್ರಮ ಆಸ್ತಿ ಪತ್ತೆ

Published On - 1:03 pm, Sun, 29 November 20

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?