ಈ ವಾರ ನವರಾತ್ರಿ ಆರಂಭವಾಗಿದ್ದು,ದೇಶದ ವಿವಿಧ ಭಾಗಗಳಲ್ಲಿ ಗರ್ಭಾ (Garba) ನೃತ್ಯಗಳನ್ನು ಆಯೋಜಿಸಲಾಗಿದೆ. ಮುಂಬೈಯ ಮರೈನ್ ಡ್ರೈವ್ನಲ್ಲಿ ಯುವಕ- ಯುವತಿಯರ ಗುಂಪೊಂದು ಗರ್ಭಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವ ವಿಡಿಯೊವೊಂದನ್ನು ಉದ್ಯಮಿ ಆನಂದ್ ಮಹೀಂದ್ರ (Anand Mahindra) ಟ್ವೀಟ್ ಮಾಡಿದ್ದಾರೆ. ಮುಂಬೈನ ಮರೈನ್ ಡ್ರೈವ್. ಮುಂಬೈನ ಬೀದಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದು ಪೂರ್ಣಗೊಂಡಿದೆ. ಆದರೆ ಇವರು ತೆರೆದ ತೋಳುಗಳಿಂದ ಸ್ವಾಗತಿಸಲ್ಪಟ್ಟ ನುಸುಳುಕೋರರು. ನವರಾತ್ರಿಯ ಸಮಯದಲ್ಲಿ ಮುಂಬೈ ನೋಡಬೇಕು. (ನಾನು ಗುಜರಾತ್‌ನ ನಗರಗಳಿಂದ ಪ್ರತಿಭಟನೆಯ ಕೂಗುಗಳನ್ನು ಕೇಳಲಿದ್ದೇನೆ ಎಂದು ನನಗೆ ತಿಳಿದಿದೆ. !)” ಎಂದು ಮಹೀಂದ್ರ ಟ್ವೀಟ್ ನಲ್ಲಿ ಬರೆದಿದ್ದಾರೆ. ಈ ವಿಡಿಯೊವನ್ನು 3 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.ಈ ವಿಡಿಯೊಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ಸರ್ ಹಾಗಾದರೆ ನೀವು ನವರಾತ್ರಿ ಹೊತ್ತಲ್ಲಿ ಅಹಮದಾಬಾದ್‌ಗೆ ಭೇಟಿ ನೀಡಿಲ್ಲ ಎಂದು ಕಾಣುತ್ತದೆ. ನೀವು ಗರ್ಭಾದ ನೈಜ ರೂಪ ಮತ್ತು ಸರಿಯಾದ ಹೆಜ್ಜೆಗಳನ್ನು ಮಿಸ್ ಮಾಡಿಕೊಂಡಿದ್ದೀರಿ ಎಂದಿದ್ದಾರೆ.
Mumbai, Marine drive. The conquest and annexation of Mumbai’s streets is complete. But these are invaders who are welcomed with open arms. No place like Mumbai during Navratri. ( I know I’m going to hear howls of protest from cities in Gujarat! ?) pic.twitter.com/vaGNSVSybE
— anand mahindra (@anandmahindra) September 27, 2022
ಇನ್ನೊಬ್ಬ ಬಳಕೆದಾರರು, ಸರಿಯಾದ ಗರ್ಭಾ ನೋಡಬೇಕಾದರೆ ನೀವು ವಡೋದರಾಕ್ಕೆ ಬರಬೇಕು ಎಂದಿದ್ದಾರೆ. ಸಾಂಪ್ರದಾಯಿಕ ಗರ್ಭಾ ನೋಡಬೇಕಾದರೆ ಅಹಮದಾಬಾದ್ ಗೆ ಬನ್ನಿ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ.
ನೃತ್ಯ ಪ್ರಕಾರದ ಕೆಲವು ಸಾಂಪ್ರದಾಯಿಕ ಸೊಬಗು ವೀಕ್ಷಿಸಲು ಅಹಮದಾಬಾದ್‌ಗೆ ಉತ್ತಮ ಸ್ಥಳವೆಂದು ಬಳಕೆದಾರರು ಹೇಳಿದ್ದಾರೆ . ನವರಾತ್ರಿಯಲ್ಲಿ ಅಹಮದಾಬಾದ್ ನೋಡಬೇಕು. ಮುಂಬೈನ ಗರ್ಭಾ ಸಾಂಪ್ರದಾಯಿಕವಲ್ಲ, ಗರ್ಭಾಕ್ಕಿಂತ ಇದು ದಾಂಡಿಯಾ ತರಹ ಕಾಣುತ್ತಿದೆ . ಗುಜರಾತ್ ಸಾಂಪ್ರದಾಯಿಕ ಸೊಗಡನ್ನು ಹೊಂದಿದೆ ಎಂದಿದ್ದಾರೆ.
ನಾನು ಗುಜರಾತಿ ಮತ್ತು ನಾನು ಎಲ್ಲಿಯಾದರೂ ಗರ್ಭಾವನ್ನು ವೀಕ್ಷಿಸಲು ಇಷ್ಟಪಡುತ್ತೇನೆ ಸರ್ ಎದು ವ್ಯಕ್ತಿಯೊಬ್ಬರು ಬರೆದಿದ್ದಾರೆ.
ಒಂಬತ್ತು ರಾತ್ರಿಗಳ ಹಬ್ಬವಾದ ನವರಾತ್ರಿ ಸೆಪ್ಟೆಂಬರ್ 26 ರಂದು ಪ್ರಾರಂಭವಾಯಿತು. ಈ ಸಮಯದಲ್ಲಿ, ಭಕ್ತರು ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸುತ್ತಾರೆ ಮತ್ತು ಅವರ ಕುಟುಂಬದ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಕೋರುತ್ತಾರೆ.