25 ಕೋಟಿ ರೂ. ಲಾಟರಿ ಗೆದ್ದರೂ ನೆಮ್ಮದಿ ಇಲ್ಲ: ಅಳಲು ತೋಡಿಕೊಂಡ ಕೇರಳದ ಆಟೋ ಚಾಲಕ

ಕೇರಳದ ಆಟೋ ಚಾಲಕ 25 ಕೋಟಿ ಲಾಟರಿ ಗೆದ್ದರೂ ಮನಸ್ಸಿನ ನೆಮ್ಮದಿ ಇಲ್ಲದಂತಾಗಿದೆ. ಈ ಬಗ್ಗೆ ಸ್ವತಃ ಅವರೇ ಅಳಲು ತೋಡಿಕೊಂಡಿದ್ದಾರೆ.

25 ಕೋಟಿ ರೂ. ಲಾಟರಿ ಗೆದ್ದರೂ ನೆಮ್ಮದಿ ಇಲ್ಲ: ಅಳಲು ತೋಡಿಕೊಂಡ ಕೇರಳದ ಆಟೋ ಚಾಲಕ
Kerala lottery
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Sep 28, 2022 | 3:37 PM

ತಿರುವನಂತಪುರಂ: ಮುಖ್ಯವಾಗಿ ಮನಷ್ಯನಿಗೆ ನೆಮ್ಮದಿ ಮುಖ್ಯ. ಮನಸ್ಸಿಗೆ ನೆಮ್ಮದಿಯೇ ಇಲ್ಲ ಅಂದ ಮೇಲೆ ಎಷ್ಟು ಶ್ರೀಮಂತಿಕೆ ಶ್ರೀಮಂತಿಕೆ ಇದ್ದರೇನು ಅಲ್ವೇ? ಇದೀಗ ಇಂತಹ ಸ್ಥಿತಿ ಇತ್ತೀಚೆಗೆ 25 ಕೋಟಿ ರೂ ಗೆದ್ದ ಕೇರಳದ ಆಟೋ ಚಾಲಕನಿಗೆ ಬಂದಿದೆ.  ಕೇರಳ ಸರ್ಕಾರ ನಡೆಸುವ ಓಣಂ ಬಂಪರ್​ ಲಾಟರಿಯಲ್ಲಿ ಆಟೋ ಚಾಲಕ ಅನೂಪ್​ ಪ್ರಥಮ ಬಹುಮಾನವಾಗಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಇದು ಕೇರಳ ಇತಿಹಾಸದಲ್ಲಿಯೇ ಲಾಟರಿ ಟಿಕೆಟ್​ನಲ್ಲಿ ನೀಡಿದ ಅತಿದೊಡ್ಡ ಮೊತ್ತವಾಗಿದೆ. ಡ್ರಾ ದಿನಾಂಕ ಮುನ್ನಾ ದಿನ ಅನೂಪ್ ಮಗನ ಪಿಗ್ಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೂ ಸೇರಿಸಿ 500 ರೂ.ನ ಲಾಟರಿ ಟಿಕೆಟ್​ ಖರೀದಿಸಿದ್ದರು. ಅದ್ರೆ, ಇದೀಗ  25 ಕೋಟಿ ಲಾಟರಿ ಗೆದ್ದರೂ ಅನೂಪ್​ಗೆ ನೆಮ್ಮದಿ ಇಲ್ಲದಂತಾಗಿದೆಯಂತೆ.

ಅಳಲು ತೋಡಿಕೊಂಡ ಅನೂಪ್

ಸಹಾಯ ಯಾಚಿಸುವವರು ಪ್ರತಿದಿನ ಮನೆಗೆ ಬರುತ್ತಿದ್ದು, ಮನೆಯಲ್ಲಿ ನೆಮ್ಮದಿಯಿಂದಿರಲು ಸಾಧ್ಯವಾಗುತ್ತಿಲ್ಲ’ ಎಂದು ಕೇರಳ ಸರಕಾರದ ತಿರುವೋಣಂ ಬಂಪರ್‌ ಲಾಟರಿ ವಿಜೇತ ತಿರುವನಂತಪುರಂ ಶ್ರೀವರಾಹಂ ನಿವಾಸಿ, ರಿಕ್ಷಾ ಚಾಲಕ ಅನೂಪ್‌ ವಿಡಿಯೋ ಮಮೂಲಕ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ₹12 ಕೋಟಿ ಗೆದ್ದ ಆಟೋ ಚಾಲಕ; ಕೇರಳ ತಿರುವೋಣಂ ಬಂಪರ್ ಲಾಟರಿ ವಿಜೇತ ಯಾರು ಎಂಬ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ

ಲಾಟರಿ ಹೊಡೆದಾಗ ನನಗೆ ತುಂಬಾ ಖುಷಿಯಾಗಿತ್ತು. ಆದರೆ ಈಗಿನ ನನ್ನ ಪರಿಸ್ಥಿತಿ ನೋಡಿದರೆ, ಅದನ್ನು ನಾನು ಗೆಲ್ಲಲೇಬಾರದಿತ್ತು ಎಂದು ಅನಿಸುತ್ತಿದೆ. ಲಾಟರಿ ಗೆದ್ದ ಕಾರಣದಿಂದ ನನಗೆ ಹೊರಗಡೆ ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಆರ್ಥಿಕ ಸಹಾಯಕ್ಕಾಗಿ ಮನೆ ಮುಂದೆ ಬರುವ ಜನರಿಂದ ತಪ್ಪಿಸಿಕೊಳ್ಳಲು ನಾನು ನನ್ನ ಸಹೋದರಿಯ ಮನೆ ಅಥವಾ ಇನ್ಯಾರದೋ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಲಾಟರಿ ಗೆದ್ದ ಹಣ ನನಗೆ ಇನ್ನೂ ಬಂದಿಲ್ಲ. ಇದನ್ನು ನಾನು ಜನರಿಗೆ ಹೇಳಿದರೆ ನಂಬುತ್ತಿಲ್ಲ. ನಾನು ಲಾಟರಿ ಗೆದ್ದಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ ಅದರಿಂದ ನಾನು ಇಷ್ಟೊಂದು ತೊಂದರೆ ಅನುಭವಿಸುತ್ತೇನೆ ಎಂದು ಭಾವಿಸಿರಲಿಲ್ಲ. ತೆರಿಗೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಸಿಕ್ಕ ಹಣವನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನಾನು ಬ್ಯಾಂಕ್​ನ​ಲ್ಲಿ ಹಾಕುತ್ತೇನೆ ಎಂದಿದ್ದಾರೆ.

ಪ್ರತಿದಿನ ಮನೆಗೆ ಜನರು ಸಹಾಯ ಕೇಳಿಕೊಂಡು ಬರುತ್ತಾರೆ. ನಾನು ನನ್ನ ಮನೆಯನ್ನು ಈಗ ಇರುವಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದುಕೊಂಡಿದ್ದೇನೆ. ಎರಡನೇ ಅಥವಾ ಮೂರನೇ ಬಹುಮಾನ ಗೆದ್ದಿದ್ದರೆ ಚೆನ್ನಾಗಿರುತ್ತಿತ್ತು. ಈ ಮೊದಲ ಬಹುಮಾನದಿಂದಾಗಿ ನನ್ನ ಮನೆಗೆ ನಾನೇ ಹೋಗಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಸಂಬಂಧಿಕರ ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Wed, 28 September 22

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ