Pakistan Floods: ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧಾರ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2022 | 9:53 AM

ಪಾಕಿಸ್ತಾನವು ವ್ಯಾಪಕ ಪ್ರವಾಹವನ್ನು ಎದುರಿಸುತ್ತಿರುವ ಕಾರಣ ಭಾರತದಿಂದ ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ಪರಿಗಣಿಸುವುದಾಗಿ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಸೋಮವಾರ ಹೇಳಿದ್ದಾರೆ.

Pakistan Floods: ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧಾರ
Floods in Pakistan
Follow us on

ಆಹಾರದ ಬೆಲೆಗಳು ಗಣನೀಯವಾಗಿ ಏರಿಕೆಯಾಗಿರುವುದರಿಂದ ಪ್ರವಾಹದ ಪ್ರಭಾವವನ್ನು ತಗ್ಗಿಸಲು ಪಾಕಿಸ್ತಾನವು ಭಾರತದಿಂದ ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಧಾರ ಮಾಡಿದೆ ಎಂದು ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಸೋಮವಾರ ಹೇಳಿದ್ದಾರೆ.

ನಾವು ಭಾರತದಿಂದ ತರಕಾರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿಕೊಂಡಿದ್ದೇವೆ ಎಂದು ಸಚಿವರು ಸ್ಥಳೀಯ ಜಿಯೋ ನ್ಯೂಸ್ ಟಿವಿಗೆ ತಿಳಿಸಿದರು. ಟರ್ಕಿ ಮತ್ತು ಇರಾನ್ ಕೂಡ ಇತರ ಆಯ್ಕೆಗಳಾಗಿರಬಹುದು ಎಂದು ಅವರು ಹೇಳಿದರು.

ಐತಿಹಾಸಿಕ ಮಾನ್ಸೂನ್ ಮಳೆಯಿಂದ ಉಂಟಾಗಿದ್ದು ಪ್ರವಾಹವು 33 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ, ಇದರಿಂದ ವ್ಯಾಪಕ ಹಾನಿಯನ್ನುಂಟು ಮಾಡಿದೆ ಎಂದು ಹೇಳಲಾಗಿದೆ.

 

ಹೆಚ್ಚಿನ ಮಾಹಿತಿ ನೀಡಲಾಗುವುದು

 

 

Published On - 9:44 am, Tue, 30 August 22