Shocking News: 7 ತಿಂಗಳ ಗರ್ಭಿಣಿಯನ್ನು ರಸ್ತೆಯಲ್ಲಿ ದರದರನೆ ಎಳೆದುಕೊಂಡು ಹೋದ ಗಂಡ; ಮಹಿಳೆಗೆ ಗರ್ಭಪಾತ
ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಆ ಗರ್ಭಿಣಿಯನ್ನು ಆಕೆಯ ಪೋಷಕರು ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆಗೆ ಗರ್ಭಪಾತವಾಗಿದೆ ಎಂದು ಹೇಳಿದ್ದಾರೆ.
ಲುಧಿಯಾನ: ಪಂಜಾಬ್‌ನ ಲುಧಿಯಾನ (Ludhiana) ಜಿಲ್ಲೆಯ ಮುಲ್ಲನ್‌ಪುರ್ ದಖಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7 ತಿಂಗಳ ಗರ್ಭಿಣಿ ಮಹಿಳೆಗೆ ಮನಬಂದಂತೆ ಥಳಿಸಿದ ಆಕೆಯ ಪತಿ ಮತ್ತು ಅತ್ತೆ ಸೇರಿ ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ. ಈ ಘಟನೆಯಿಂದ ಆಕೆಗೆ ಗರ್ಭಪಾತವಾಗಿದೆ. ಈ ಹಿನ್ನೆಲೆಯಲ್ಲಿ 23 ವರ್ಷದ ರಾಜನ್‌ದೀಪ್ ಕೌರ್ ಅವರ ಗಂಡ ಮತ್ತು ಅತ್ತೆಯ ವಿರುದ್ಧ ಲೂಧಿಯಾನ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಆರೋಪಿಗಳನ್ನು ಮನಕ್ವಾಲ್ ಗ್ರಾಮದ ಜಸ್ಕರನ್ ಸಿಂಗ್, ಆತನ ತಂದೆ ದಿದರ್ ಸಿಂಗ್, ತಾಯಿ ಪರಮ್‌ಜಿತ್ ಕೌರ್ ಮತ್ತು ಆರತಿ ಗುಪ್ತಾ ಎಂದು ಗುರುತಿಸಲಾಗಿದೆ. ಆರತಿ ಗುಪ್ತಾ ಎಂಬಾಕೆಯೊಂದಿಗೆ ಜಸಕ್ರನ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಆತ ತನ್ನ ಗರ್ಭಿಣಿ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಲುಧಿಯಾನ ಜಿಲ್ಲೆಯ ದಖ್ ಗ್ರಾಮದ ನಿವಾಸಿ ರಾಜನ್‌ದೀಪ್ ಕೌರ್ ತನ್ನ ದೂರಿನಲ್ಲಿ ಆರೋಪಿ ಜಸ್ಕರನ್ ಸಿಂಗ್ ಎಂಬಾತನನ್ನು ಎಂಟು ತಿಂಗಳ ಹಿಂದೆ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಮದುವೆಯ ನಂತರ ತನ್ನ ಗಂಡ ಮತ್ತು ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ನಂತರ ತಾನು ತಮ್ಮ ತಾಯಿಯ ಮನೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Shocking News: ಅಕ್ರಮ ಸಂಬಂಧಕ್ಕೆ ವಿರೋಧ; ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಹೆಂಡತಿ
ಸಂತ್ರಸ್ತ ಮಹಿಳೆ ತನ್ನ ಪತಿ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಎಫ್‌ಐಆರ್‌ನಲ್ಲಿ ಆಕೆಯ ಹೆಸರನ್ನೂ ಸಹ ಹೆಸರಿಸಲಾಗಿದೆ. ಆಕೆ ಅದಕ್ಕೆ ವಿರೋಧಿಸಿದಾಗ ಗಂಡ ಮತ್ತು ಆತನ ತಾಯಿ ಸೇರಿ ತನ್ನನ್ನು ಥಳಿಸುತ್ತಿದ್ದರು. ಜಸ್ಕರನ್ ಜುಲೈ 16ರಂದು ತನ್ನ ತಾಯಿಯ ಎದುರೇ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಗಸ್ಟ್ 17ರಂದು ಜಸ್ಕರನ್ ಮತ್ತು ಆಕೆಯ ಅತ್ತೆಯಂದಿರು ನನ್ನ ತಾಯಿಯ ಮನೆಗೆ ಬಂದಿದ್ದರು. ಆಗ ಹೊರಗೆ ನಿಂತು ತನ್ನನ್ನು ನಿಂದಿಸಲು ಪ್ರಾರಂಭಿಸಿದರು ಎಂದು ರಾಜನ್‌ದೀಪ್ ಹೇಳಿದ್ದಾರೆ. ಗಂಡ ಮತ್ತು ಅತ್ತೆ ಮನೆಯೊಳಗೆ ಬಂದು 7 ತಿಂಗಳ ಗರ್ಭಿಣಿಯಾಗಿದ್ದ ಆಕೆಯ ಮೇಲೆ ಹಲ್ಲೆ ನಡೆಸತೊಡಗಿದಾಗ ಆಕೆ ಮನೆಯಿಂದ ಹೊರಬಂದಿದ್ದಾಳೆ. ಆಗ ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಆದರೆ ಆಕೆ ಜೋರಾಗಿ ಕಿರುಚಾಡಿದ ನಂತರ ಆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Murder: ಟೀಚರ್ ಜೊತೆ ಅಕ್ರಮ ಸಂಬಂಧ; ಭಯದಿಂದ ಶಿಕ್ಷಕಿಯನ್ನೇ ಕೊಂದ ಪಿಯುಸಿ ವಿದ್ಯಾರ್ಥಿ
ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಆ ಗರ್ಭಿಣಿಯನ್ನು ಆಕೆಯ ಪೋಷಕರು ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆಗೆ ಗರ್ಭಪಾತವಾಗಿದೆ ಎಂದು ಹೇಳಿದ್ದಾರೆ. ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಮುಲ್ಲನ್‌ಪುರ ದಖಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.