3C Formula: ಸುರಕ್ಷಿತ ಭಾರತಕ್ಕಾಗಿ ‘3C’ ಸೂತ್ರ, ಪರಸ್ಪರ ಸಹಕಾರದ ತತ್ವವನ್ನು ಪಾಲಿಸಿ: ಅಮಿತ್ ಶಾ
Amit Shah: ಸುರಕ್ಷಿತ ಭಾರತಕ್ಕಾಗಿ '3C' ಸೂತ್ರವನ್ನು ಮುಂದಿಟ್ಟಿರುವ ಅಮಿತ್ ಶಾ, ಜಂಟಿ ಪ್ರಯತ್ನಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ದೇಶದಲ್ಲಿ ಅಪರಾಧ ಮುಕ್ತ ಮತ್ತು ಸುರಕ್ಷಿತ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ತರಲಾಗಿದೆ.
ಸೂರಜ್‌ಕುಂಡ್: ದೇಶದಲ್ಲಿ ಅಪರಾಧ ಮುಕ್ತ ಮತ್ತು ಸುರಕ್ಷಿತ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ, ಕೇಂದ್ರ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗೃಹ ಇಲಾಖೆಗಳು ಪರಸ್ಪರ ಸಹಕಾರದ ತತ್ವವನ್ನು ಪಾಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ಸುರಕ್ಷಿತ ಭಾರತಕ್ಕಾಗಿ ‘3C’ ಸೂತ್ರವನ್ನು ಮುಂದಿಟ್ಟಿರುವ ಅಮಿತ್ ಶಾ, ಜಂಟಿ ಪ್ರಯತ್ನಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ನಾವು ಸಮನ್ವಯ, ಸಹಕಾರ ಹಾಗೂ ಸಹಯೋಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು, ದೇಶದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಬೇಕು. ಈ ಮೂಲಕ ಒಕ್ಕೂಟ ತತ್ವದ ಗುರಿಗಳನ್ನು ತಲುಪಲು ಪ್ರಯತ್ನಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ನಮ್ಮ ದೇಶದ ಸಂಪನ್ಮೂಲ ಕ್ರೂಢೀಕರಣ ಮತ್ತು ಏಕೀಕರಣ ಕೂಡ ನಮ್ಮ ಪ್ರಮುಖ ಗುರಿಯಾಗಿದೆ. ಇದರಲ್ಲಿ ನಾವು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಅಮಿತ್ ಶಾ ಹೇಳಿದರು. ದೇಶದಲ್ಲಿರುವ ಎಲ್ಲಾ ಗೃಹ ಇಲಾಖೆಗಳೂ ಒಂದು ನಿರ್ದಿಷ್ಟ ಗುರಿಯೊಂದಿಗೆ ಒಟ್ಟಾಗಿ ಕೆಲಸ ಮಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ANI ಸುದ್ಧು ಸಂಸ್ಥೆ ವರದಿ ಮಾಡಿದೆ.
Various suggestions have been received regarding improvement in CrPC & IPC. I'm looking into it in detail, invested hours in it. We will very soon come up with new CrPC, IPC drafts in the Parliament: Union Home Minister Amit Shah, in Haryana pic.twitter.com/QVn17YGVA4
— ANI (@ANI) October 27, 2022
ನಮ್ಮ ದೇಶದಲ್ಲಿರುವ ಎನ್ಐಎಗೆ ವಿದೇಶಿ ಹಕ್ಕುಗಳನ್ನು ನೀಡಲಾಗಿದೆ. 2024ರ ವೇಳೆಗೆ ಪ್ರತಿ ರಾಜ್ಯದಲ್ಲೂ ಎನ್‌ಐಎ ಶಾಖೆಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಅಮಿತ್ ಶಾ ಇದೇ ವೇಳೆ ಮಾಹಿತಿ ನೀಡಿದರು. ಈ ಚಿಂತನ ಶಿಬಿರವು ಸೈಬರ್ ಅಪರಾಧಗಳು, ಮಾದಕ ದ್ರವ್ಯಗಳು, ಗಡಿಯಾಚೆಗಿನ ಭಯೋತ್ಪಾದನೆ, ದೇಶದ್ರೋಹ ಮತ್ತು ಇತರ ಸಾಮಾಜಿಕ ಪಿಡುಗುಗಳನ್ನು ಎದುರಿಸಲು ಜಂಟಿ ಯೋಜನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅಮಿತ್ ಶಾ ಹೇಳಿದರು.
Published On - 6:39 pm, Thu, 27 October 22