AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಆಯ್ತು ತಮಿಳುನಾಡಲ್ಲೂ ಬೀದಿ ನಾಯಿ ಹಾವಳಿಗೆ ಕಡಿವಾಣ ಸಾಧ್ಯತೆ, ಬೆಂಗಳೂರಿನ ಕಥೆ ಏನು?

ಬೀದಿ ನಾಯಿ(Stray Dog)ಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್(Supreme Court) ಇತ್ತೀಚೆಗೆ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ. ಈ ವಿಷಯವು ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಈಗ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಬೀದಿ ನಾಯಿಗಳ ಸಮಸ್ಯೆಯನ್ನು ನಿಭಾಯಿಸಲು ಪ್ರಮುಖ ಆದೇಶವನ್ನು ನೀಡುವ ಸಾಧ್ಯತೆ ಗಾಢವಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೂಡ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಇಲ್ಲಿನ ಸರ್ಕಾರವು ಕೂಡ ಬೀದಿ ನಾಯಿಗಳ ಹಾವಳಿ ತಡೆಯಲು ಇದೇ ಮಾದರಿಯ ಕಾರ್ಯ ಕೈಗೊಳ್ಳುವರಾ ಎಂದು ಕಾದು ನೋಡಬೇಕಿದೆ.

ದೆಹಲಿ ಆಯ್ತು ತಮಿಳುನಾಡಲ್ಲೂ ಬೀದಿ ನಾಯಿ ಹಾವಳಿಗೆ ಕಡಿವಾಣ ಸಾಧ್ಯತೆ, ಬೆಂಗಳೂರಿನ ಕಥೆ ಏನು?
ನಾಯಿ Image Credit source: Reuters
ನಯನಾ ರಾಜೀವ್
|

Updated on: Aug 13, 2025 | 10:59 AM

Share

ನವದೆಹಲಿ, ಆಗಸ್ಟ್​ 13: ಬೀದಿ ನಾಯಿ(Stray Dog)ಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್(Supreme Court) ಇತ್ತೀಚೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದು ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.  ಈಗ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಬೀದಿ ನಾಯಿಗಳ ಸಮಸ್ಯೆಯನ್ನು ನಿಭಾಯಿಸಲು ಪ್ರಮುಖ ಆದೇಶವನ್ನು ನೀಡುವ ಸಾಧ್ಯತೆ ಗಾಢವಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೂಡ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಇಲ್ಲಿನ ಸರ್ಕಾರವು ಕೂಡ ಬೀದಿ ನಾಯಿಗಳ ಹಾವಳಿ ತಡೆಯಲು ಇದೇ ಮಾದರಿಯ ಕಾರ್ಯ ಕೈಗೊಳ್ಳುವರಾ ಎಂದು ಕಾದು ನೋಡಬೇಕಿದೆ.

ದೆಹಲಿಯಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್​ ಆದೇಶಿಸಿದೆ. ಆ ಆದೇಶದ ಒಂದು ದಿನದ ಬಳಿಕ ಮದ್ರಾಸ್ ಹೈಕೋರ್ಟ್​​ನ ಮಧುರೈ ಪೀಠವು ತಮಿಳುನಾಡಉ ಸರ್ಕಾರವು ರಾಜ್ಯದಲ್ಲಿ ಬೀದಿ ನಾಯಿಗಳನ್ನು ಇದೇ ರೀತಿಯಲ್ಲಿ ನಿರ್ವಹಿಸುವಂತೆ ನಿರ್ದೇಶಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಿದೆ.ಬೀದಿ ಪ್ರಾಣಿಗಳಿಗೆ ಸಂಬಂಧಿಸಿದ ಅರ್ಜಿಗಳ ಗುಂಪನ್ನು ವಿಚಾರಣೆ ನಡೆಸುವಾಗ ಹೈಕೋರ್ಟ್‌ನ ಪೀಠವು ಈ ಹೇಳಿಕೆ ನೀಡಿದೆ.

ಈ ವರ್ಷವೇ ತಮಿಳುನಾಡಿನಲ್ಲಿ 3.67 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 20 ಜನರು ರೇಬೀಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕೆಲವು ಬೀದಿ ನಾಯಿಗಳು, ಬೀದಿಗಳಲ್ಲಿ ಓಡಾಡುವ ಬೀದಿ ಪ್ರಾಣಿಗಳು ಮತ್ತು ದೇವಾಲಯಗಳಲ್ಲಿ ಭಕ್ತರ ಮೇಲೆ ನಾಯಿಗಳು ದಾಳಿ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ.ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ಮಾರ್ಗಸೂಚಿಗಳನ್ನು ವಿವರವಾಗಿ ಅಧ್ಯಯನ ಮಾಡಿ ನಂತರ ಜಂಟಿ ಆದೇಶವನ್ನು ಹೊರಡಿಸುವುದಾಗಿ ಪೀಠ ಹೇಳಿದೆ.

ಮತ್ತಷ್ಟು ಓದಿ: ತೆರೆದ ಜಾಗದಲ್ಲಿ ಆಹಾರ ಬಿಸಾಡಬೇಡಿ; ಬೀದಿ ನಾಯಿಗಳ ಹಾವಳಿ ಕುರಿತು ಸುಪ್ರೀಂ ಕೋರ್ಟ್ ಸೂಚನೆ

ಸುಪ್ರೀಂ ಕೋರ್ಟ್‌ನ ಸೂಚನೆಗಳ ಮೇರೆಗೆ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ಪ್ರಾಣಿ ಕಲ್ಯಾಣ ಕಾರ್ಯಕರ್ತರು ದೇಶದಲ್ಲಿ ಪ್ರಾಣಿಗಳನ್ನು ಸಾಕಲು ಆಶ್ರಯಗಳ ಕೊರತೆ, ಕಾರ್ಯಪಡೆ ಮತ್ತು ಪ್ರಾಣಿ ತಜ್ಞರ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ದೊಡ್ಡ ಸಂಖ್ಯೆಯ ಬೀದಿ ನಾಯಿಗಳನ್ನು ನಿಭಾಯಿಸುವುದು ಸುಲಭವಲ್ಲ ಎಂದು ಹೇಳಿದರು. ಪ್ರಾಣಿ ಕಲ್ಯಾಣ ಕಾರ್ಯಕರ್ತರು ನಾಯಿಗಳಿಗೂ ಈ ಜಗತ್ತಿನಲ್ಲಿ ಬದುಕುವ ಹಕ್ಕಿದೆ ಎಂದು ಹೇಳುತ್ತಾರೆ. ಅವುಗಳನ್ನು ಆಶ್ರಯದಲ್ಲಿ ಇಡುವುದರಿಂದ ನಾಯಿಗಳು ಹಸಿವು ಮತ್ತು ಬಾಯಾರಿಕೆಯಿಂದ ಸಾಯುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಬೀದಿ ನಾಯಿಗಳ ಸಮಸ್ಯೆಯನ್ನು ನಿಭಾಯಿಸಲು, ಅವುಗಳ ಸಂತಾನಹರಣ ಮತ್ತು ಲಸಿಕೆಗಾಗಿ ಅಭಿಯಾನವನ್ನು ನಡೆಸುವ ಅವಶ್ಯಕತೆಯಿದೆ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಹೇಳಿದ್ದಾರೆ.

ಅದೇ ಸಮಯದಲ್ಲಿ, ಕೆಲವರು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಬೆಂಬಲಿಸುತ್ತಿದ್ದಾರೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಅವು ಹಿಂಸಾತ್ಮಕವಾಗುತ್ತಿರುವುದರಿಂದ, ಈ ವಿಷಯದಲ್ಲಿ ಕಠಿಣ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್​ ಸೂಚನೆ ಏನು? ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ರೇಬೀಸ್ ಸೋಂಕನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸುವ ಬಗ್ಗೆ 8 ವಾರಗಳ ಒಳಗೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಬೀದಿ ನಾಯಿಗಳ ವಿರುದ್ಧದ ಕ್ರಮದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ. ಈ ಕೆಲಸಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಅಡ್ಡಿಪಡಿಸಿದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಎಂಸಿಡಿ, ಎನ್‌ಡಿಎಂಸಿ ಮತ್ತು ದೆಹಲಿ ಎನ್‌ಸಿಆರ್‌ನ ಸಂಬಂಧಪಟ್ಟ ಅಧಿಕಾರಿಗಳು ಪ್ರತಿದಿನ ಬೀದಿ ನಾಯಿಗಳನ್ನು ಹಿಡಿಯುವ ದಾಖಲೆಯನ್ನು ಇಟ್ಟುಕೊಳ್ಳಬೇಕು ಮತ್ತು ಹಿಡಿದ ನಂತರ ಒಂದೇ ಒಂದು ಬೀದಿ ನಾಯಿಯನ್ನು ಹಿಂತಿರುಗಿಸಬಾರದು ಮತ್ತು ಎಲ್ಲವನ್ನೂ ಆಶ್ರಯದಲ್ಲಿ ಇಡಬೇಕು  ಎಂದು ನ್ಯಾಯಾಲಯ ಹೇಳಿದೆ. ರೇಬೀಸ್ ಮತ್ತು ನಾಯಿ ಕಡಿತದ ಎಲ್ಲಾ ಪ್ರಕರಣಗಳನ್ನು ಸಹ ವರದಿ ಮಾಡಬೇಕು. ಬೀದಿ ನಾಯಿಗಳ ಬಗ್ಗೆ ದೂರು ಸ್ವೀಕರಿಸಿದ ನಾಲ್ಕು ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಲಸಿಕೆ ಲಭ್ಯತೆಯ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ನಾಯಿ ಕಡಿತದ ಘಟನೆಗಳನ್ನು ಜನರು ವರದಿ ಮಾಡಲು ಸಹಾಯವಾಣಿಯನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ