ನವದೆಹಲಿ: ಅಗ್ನಿವೀರ್ ಯೋಜನೆಯಡಿ (Agniveer Scheme) ಇದೇ ಮೊದಲ ಬಾರಿಗೆ 341 ಮಹಿಳಾ ನಾವಿಕರು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದ್ದಾರೆ. ನೌಕಾಪಡೆಯ ದಿನದ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ಸುಮಾರು 3,000 ಅಗ್ನಿವೀರ್‌ಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಅವರಲ್ಲಿ 341 ಮಹಿಳೆಯರು ಇದ್ದಾರೆ. ಭಾರತೀಯ ನೌಕಾಪಡೆಯಲ್ಲಿ (Indian Navy) ಲಭ್ಯವಿರುವ ಹುದ್ದೆಗಳನ್ನು ಕೋರಿ 10 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿದಾರರ ಪೈಕಿ 82,000 ಮಹಿಳೆಯರಿದ್ದರು ಎಂದು ಅವರು ಹೇಳಿದ್ದಾರೆ.
ಅಗ್ನಿವೀರ್ ಯೋಜನೆಯಡಿ ಮಹಿಳೆಯರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಅರ್ಹತೆ ಪಡೆಯಲು ಪುರುಷರು ಮತ್ತು ಮಹಿಳೆಯರು ಇಬ್ಬರೂ ಒಂದೇ ರೀತಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ನೌಕಾಪಡೆಯ ಮುಖ್ಯಸ್ಥರು ದೃಢಪಡಿಸಿದ್ದಾರೆ.
ಭಾರತೀಯ ನೌಕಾಪಡೆಯು 2047ರ ವೇಳೆಗೆ ‘ಆತ್ಮನಿರ್ಭರ್’ ಆಗಲಿದೆ ಎಂದು ಸರ್ಕಾರಕ್ಕೆ ಭರವಸೆ ನೀಡಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿವಿಧ ಮಿಲಿಟರಿ ಮತ್ತು ಸಂಶೋಧನಾ ಹಡಗುಗಳ ಚಲನವಲನಗಳ ಮೇಲೆ ನೌಕಾಪಡೆಯು ಬಲವಾದ ನಿಗಾ ಇರಿಸುತ್ತದೆ ಎಂದು ಅವರು ಹೇಳಿದ್ದಾರೆ.
We’ve inducted 341 women Agniveers now. It’s the first time women are being inducted into the ranks.We’re not inducting women separately.They’re being inducted in the same manner as their male counterparts. It’s a uniform method of selection.They undergo similar tests: Navy chief pic.twitter.com/cWBawosVsf
— ANI (@ANI) December 3, 2022
ಕಳೆದ ಒಂದು ವರ್ಷದಲ್ಲಿ ಭಾರತೀಯ ನೌಕಾಪಡೆಯು ಅತ್ಯಂತ ಹೆಚ್ಚಿನ ಕಾರ್ಯಾಚರಣೆಯ ವೇಗವನ್ನು ಸಾಧಿಸಿದೆ. ಭಾರತವು ಮುಂದೆ ಸಾಗುತ್ತಿರುವಾಗ ಕಡಲ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅಡ್ಮಿರಲ್ ಕುಮಾರ್ ಹೇಳಿದ್ದಾರೆ.
Published On - 3:33 pm, Sat, 3 December 22