ಹಿಂದೂಗಳೂ ಮುಸ್ಲಿಮರ ಸೂತ್ರ ಅನುಸರಿಸಿದರೆ ಜನಸಂಖ್ಯೆ ಹೆಚ್ಚುತ್ತದೆ; ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ
40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡಕ್ಕೆ ಮದುವೆಯಾಗುತ್ತಾರೆ. ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಫಸಲು ಸಿಗುತ್ತದೆ ಎಂದು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
ಅಸ್ಸಾಂ: ಹಿಂದೂಗಳು ಕೂಡ ಮುಸ್ಲಿರ ಫಾರ್ಮುಲಾವನ್ನೇ ಅನುಸರಿಸಬೇಕು. ಮುಸ್ಲಿಮರಂತೆ ಹಿಂದೂಗಳೂ ಸಣ್ಣ ವಯಸ್ಸಿನಲ್ಲೇ ಮದುವೆಯಾಗಬೇಕು. ಆಗ ಹಿಂದೂಗಳ ಜನಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಸಲಹೆ ನೀಡಿದ್ದಾರೆ. ಮುಸ್ಲಿಂ ಪುರುಷರು 20ರಿಂದ 22 ವರ್ಷಕ್ಕೆ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು (Muslim Women) 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದರೆ, ಹಿಂದೂಗಳು ಮದುವೆಗೆ ಮೊದಲು ಒಬ್ಬರು, ಎರಡು ಅಥವಾ ಮೂರು ಅಕ್ರಮ ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳಿಗೆ ಜನ್ಮ ನೀಡುವುದಿಲ್ಲ. ಆ ಮಹಿಳೆಯರೊಂದಿಗೆ ಎಂಜಾಯ್ ಮಾಡಿ ಆಮೇಲೆ ಬೇರೆ ಮದುವೆಯಾಗುತ್ತಾರೆ. ಇದರಿಂದ ಅವರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಎನ್ನುವ ಮೂಲಕ ಎಐಯುಡಿಎಫ್ ಮುಖ್ಯಸ್ಥ ವಿವಾದ ಸೃಷ್ಟಿಸಿದ್ದಾರೆ.
ಹಿಂದೂಗಳು “ಮುಸ್ಲಿಂ ಸೂತ್ರ”ವನ್ನು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಬಿಹಾರದ ಜನಸಂಖ್ಯೆ ನಿಯಂತ್ರಣ: ಎರಡು ಮಕ್ಕಳನ್ನು ಹೊಂದಿರುವವರಿಗೆ ಬಹುಮಾನ ನೀಡಿ; ನಿತೀಶ್ ಕುಮಾರ್ಗೆ ಬಿಜೆಪಿ ಸಲಹೆ
ಭಾರತ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹೇಳಿಕೆಗಳ ಬಗ್ಗೆ ಮಾತನಾಡಿದ ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡಕ್ಕೆ ಮದುವೆಯಾಗುತ್ತಾರೆ. ಆದ್ದರಿಂದ, ಅವರು 40ರ ನಂತರ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಗೆ ನಿರೀಕ್ಷಿಸಬಹುದು? ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಫಸಲು ಸಿಗುತ್ತದೆ. ಇದೇ ಕಾರಣದಿಂದ ಹಿಂದೂಗಳಲ್ಲಿ ಮಕ್ಕಳನ್ನು ಹೆರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
#WATCH | Hindus should follow the Muslim formula of getting their girls married at 18-20 years, says AIUDF President & MP, Badruddin Ajmal. pic.twitter.com/QXIMrFu7g8
— ANI (@ANI) December 2, 2022
ಇದನ್ನೂ ಓದಿ: 800 ಕೋಟಿ ದಾಟಿದ ವಿಶ್ವ ಜನಸಂಖ್ಯೆ, ಜಾಗತಿಕ ಜನಸಂಖ್ಯೆಗೆ ಭಾರತದ ಕೊಡುಗೆ 17.7 ಕೋಟಿ
ಹೀಗಾಗಿ, ಹಿಂದೂಗಳು ಕೂಡ ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಗಂಡುಮಕ್ಕಳನ್ನು 20-22ನೇ ವಯಸ್ಸಿನಲ್ಲಿ ಮತ್ತು ಅವರ ಹುಡುಗಿಯರಿಗೆ 18-20 ವರ್ಷ ವಯಸ್ಸಿನಲ್ಲಿ ಮದುವೆ ಮಾಡಬೇಕು. ಆಮೇಲೆ ಅವರಿಗೆ ಎಷ್ಟು ಮಕ್ಕಳು ಹುಟ್ಟುತ್ತವೆ ಎಂದು ನೀವೇ ನೋಡಿ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Sat, 3 December 22