Sundar Pichai: ನಾನು ಎಲ್ಲೇ ಹೋದರೂ ಭಾರತ ನನ್ನೊಡನೆ ಬರುತ್ತದೆ; ಗೂಗಲ್ ಸಿಇಒ ಸುಂದರ್ ಪಿಚೈ
Padma Bhushan Award: ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅಮೆರಿಕಾದಲ್ಲಿ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ವಾಷಿಂಗ್ಟನ್: ಭಾರತವು ನನ್ನ ಜೀವನದ ಭಾಗವಾಗಿದೆ. ನಾನು ಎಲ್ಲಿಗೇ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ ಎಂದು ಗೂಗಲ್ (Google) ಮತ್ತು ಆಲ್ಫಾಬೆಟ್ (Alphabet) ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಸುಂದರ್ ಪಿಚೈ (Sundar Pichai) ಅವರಿಗೆ ಅಮೆರಿಕದ ಭಾರತೀಯ ರಾಯಭಾರಿಯಿಂದ ಭಾರತದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸುಂದರ್ ಪಿಚೈ ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು.
ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅಮೆರಿಕಾದಲ್ಲಿ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಭಾರತೀಯ-ಅಮೆರಿಕನ್ ಪ್ರಜೆಯಾಗಿರುವ ಸುಂದರ್ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ 2022ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ ಈ ವರ್ಷದ ಆರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ.
Delighted to hand over Padma Bhushan to CEO @Google & Alphabet @sundarpichai in San Francisco.
Sundar’s inspirational journey from #Madurai to Mountain View, strengthening ????economic & tech. ties, reaffirms Indian talent’s contribution to global innovation pic.twitter.com/cDRL1aXiW6
— Taranjit Singh Sandhu (@SandhuTaranjitS) December 2, 2022
ಇದನ್ನೂ ಓದಿ: Big News: ಮೊದಲ ಬಾರಿಗೆ ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯನ್ನು ಭೇಟಿಯಾದ ಗೂಗಲ್ ಸಿಇಒ ಸುಂದರ್ ಪಿಚೈ
“ಈ ಪ್ರತಿಷ್ಠಿತ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದ ಈ ರೀತಿಯಾಗಿ ಗೌರವಿಸಲ್ಪಟ್ಟಿರುವುದನ್ನು ನನಗೆ ನಂಬಲು ಆಗುತ್ತಿಲ್ಲ” ಎಂದು 50 ವರ್ಷದ ಸುಂದರ್ ಪಿಚೈ ಪ್ರಶಸ್ತಿಯನ್ನು ಸ್ವೀಕರಿಸುವಾಗ ಹೇಳಿದ್ದಾರೆ.