Big News: ಮೊದಲ ಬಾರಿಗೆ ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯನ್ನು ಭೇಟಿಯಾದ ಗೂಗಲ್ ಸಿಇಒ ಸುಂದರ್ ಪಿಚೈ
ಭಾರತೀಯ ರಾಯಭಾರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಸುಂದರ್ ಪಿಚೈ ಅವರು ಭಾರತ ಕೈಗೊಂಡಿರುವ ಹಲವು ಡಿಜಿಟಲೀಕರಣದ ಇನಿಷಿಯೇಟಿವ್ ಬಗ್ಗೆ ಬಹಳ ಶ್ಲಾಘಿಸಿದ್ದಾರೆ.
ವಾಷಿಂಗ್ಟನ್: ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಅವರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ (Washington DC) ಭಾರತದ ರಾಯಭಾರ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು (India’s Ambassador Taranjit Singh Sandhu) ಅವರೊಂದಿಗೆ ದೇಶದಲ್ಲಿ ಟೆಕ್ ಕಂಪನಿಯ ಚಟುವಟಿಕೆಗಳ ವಿವಿಧ ಅಂಶಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಡಿಜಿಟಲೀಕರಣದ ಪ್ರಯತ್ನಗಳ ಕುರಿತು ಚರ್ಚೆ ನಡೆಸಿದ್ದಾರೆ.
ಭಾರತೀಯ ರಾಯಭಾರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಸುಂದರ್ ಪಿಚೈ ಅವರು ಭಾರತ ಕೈಗೊಂಡಿರುವ ಹಲವು ಡಿಜಿಟಲೀಕರಣದ ಇನಿಷಿಯೇಟಿವ್ ಬಗ್ಗೆ ಬಹಳ ಶ್ಲಾಘಿಸಿದ್ದಾರೆ. ಹಾಗೇ, ಗೂಗಲ್ ಭಾರತವನ್ನು ಸಕಾರಾತ್ಮಕ ಚೌಕಟ್ಟಿನಲ್ಲಿ ನೋಡುತ್ತಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರತದೊಂದಿಗೆ ಗೂಗಲ್ನ ಪಾಲುದಾರಿಕೆಯನ್ನು ಮುಂದುವರಿಸುವ ವಿವಿಧ ವಿಧಾನಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯ ಡಿಜಿಟಲೈಸೇಶನ್ ಸೇರಿದಂತೆ ಗೂಗಲ್ ತೊಡಗಿಸಿಕೊಂಡಿರುವ ಹಲವು ವಿಭಾಗಗಳಲ್ಲಿ ಭಾರತದ ಡಿಜಿಟಲೀಕರಣದ ಪ್ರಯತ್ನಗಳನ್ನು ಕೂಡ ಚರ್ಚಿಸಿದ್ದಾರೆ.
ಇದನ್ನೂ ಓದಿ: Googling Tricks: ಗೂಗಲ್ ಬಳಸುವ ಮುನ್ನ ಯಾವ ರೀತಿ ಸರ್ಚ್ ಮಾಡಬೇಕು ಎಂಬುವುದನ್ನು ತಿಳಿಯಿರಿ
ಭಾರತದ ಡಿಜಿಟಲ್ ರೂಪಾಂತರದಲ್ಲಿ ಗೂಗಲ್ ಪ್ರಮುಖ ಪಾಲುದಾರವಾಗಿದೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ಹೇಳಿದ್ದಾರೆ. ಅಲ್ಲದೆ, ಇದು ಸರ್ಕಾರದ ಆದ್ಯತೆಯಾಗಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.
Technology that transforms; ideas that enable!
Delighted to receive CEO @Google and Alphabet Sundar Pichai @sundarpichai at the Embassy today. Exchanged thoughts on expanding ????commercial, knowledge & tech partnership with Google pic.twitter.com/sM4VGpfbZQ
— Taranjit Singh Sandhu (@SandhuTaranjitS) September 16, 2022
ಸುಂದರ್ ಪಿಚೈ ಅವರು ಕಳೆದ ವಾರಾಂತ್ಯದಲ್ಲಿ ವಾಷಿಂಗ್ಟನ್ ಡಿಸಿ ಡೌನ್‌ಟೌನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದ ನಂತರ “ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದರು. ಭಾರತೀಯ ಅಮೆರಿಕನ್ ಟೆಕ್ ಸಿಇಒ ಒಬ್ಬರು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿರುವುದು ಇದೇ ಮೊದಲು.
ಅಂದಹಾಗೆ, ಸುಂದರ್ ಪಿಚೈ ನೇತೃತ್ವದ ಗೂಗಲ್ ಭಾರತದಲ್ಲಿ ಭಾರೀ ಹೂಡಿಕೆ ಮಾಡಿದೆ. ಅಲ್ಲದೆ, ಯುವ ಪೀಳಿಗೆಗೆ ತನ್ನ ತರಬೇತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ಗೂಗಲ್ ಮತ್ತು ಅದರ ಮೂಲ ಕಂಪನಿ ಆಲ್ಫಾಬೆಟ್ ಕಳೆದ ವರ್ಷ ಕೊವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರು ಭಾರತವನ್ನು ಬೆಂಬಲಿಸುವ ದೃಷ್ಟಿಯಿಂದ ಸಾಕಷ್ಟು ಹಣವನ್ನು ಹಾಕಿದ್ದಾರೆ. ಸುಂದರ್ ಪಿಚ್ಚೈ ಈ ನಿಟ್ಟಿನಲ್ಲಿ ಸ್ಥಾಪಿಸಲಾಗಿದ್ದ ಅಮೆರಿಕದ ಸಿಇಓಗಳ ಜಾಗತಿಕ ಕಾರ್ಯಪಡೆಯ ಭಾಗವಾಗಿದ್ದರು.