AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Queen Elizabeth II Funeral: ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ ಲೈವ್: ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಮಂದಿಯಿಂದ ವೀಕ್ಷಣೆ

ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಖ್ಯಾತಿ ಗಳಿಸಿದ್ದ ರಾಣಿ ಎಲಿಜಬೆತ್ II ವಯೋಸಹಜ ಅನಾರೋಗ್ಯದಿಂದ ಬಳಲಿ ಕೊನೆಯುಸಿರೆಳೆದಿದ್ದರು.

Queen Elizabeth II Funeral: ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ ಲೈವ್: ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಮಂದಿಯಿಂದ ವೀಕ್ಷಣೆ
Queen Elizabeth Funeral
TV9 Web
| Updated By: ನಯನಾ ರಾಜೀವ್|

Updated on: Sep 20, 2022 | 4:23 PM

Share

ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಖ್ಯಾತಿ ಗಳಿಸಿದ್ದ ರಾಣಿ ಎಲಿಜಬೆತ್ II ವಯೋಸಹಜ ಅನಾರೋಗ್ಯದಿಂದ ಬಳಲಿ ಕೊನೆಯುಸಿರೆಳೆದಿದ್ದರು. ಅವರ ಅಂತ್ಯಕ್ರಿಯೆಯ ಪ್ರಸಾರವನ್ನು 4.1 ಬಿಲಿಯನ್ ಮಂದಿ ಅಂದರೆ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ಸೆಪ್ಟೆಂಬರ್ 19ರಂದು ಸೋಮವಾರ ನೆರವೇರಿದೆ. ಅಂತ್ಯಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗಿತ್ತು. ಒಂದು ಅಂದಾಜಿನ ಪ್ರಕಾರ, ಅಂತ್ಯಕ್ರಿಯೆಯನ್ನು ಸುಮಾರು 420 ಕೋಟಿ ಜನರು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಎಂದಿಗೂ ರಾಜಮನೆತನದ ವಿವಾಹಗಳು ಮತ್ತು ಅಂತ್ಯಕ್ರಿಯೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುತ್ತವೆ. ಈ ಹಿಂದೆ 1997ರಲ್ಲಿ ರಾಜಕಉಮಾರಿ ಡಯಾನಾ ಅವರು ಮೃತಪಟ್ಟಿದ್ದರು, ಅಂದು ಅವರ ಅಂತ್ಯಕ್ರಿಯೆಯನ್ನು 2.5 ಬಿಲಿಯನ್ ಮಂದಿ ವೀಕ್ಷಿಸಿದ್ದರು ಎಂದು ಎನ್​ಬಿಸಿ ನ್ಯೂಸ್ ವರದಿ ಮಾಡಿತ್ತು.

ಇದೀಗ ನ್ಯೂಸ್​ವೀಕ್ ಪ್ರಕಾರ ರಾಣಿ ಎಲಿಜಬೆತ್ II ಅಂತ್ಯಕ್ರಿಯೆಯನ್ನು ಬರೋಬ್ಬರಿ 410 ಕೋಟಿ ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಬಿಬಿಸಿ ಪ್ರಕಾರ, 1981 ರಲ್ಲಿ ಪ್ರಿನ್ಸ್ ಚಾರ್ಲ್ಸ್-ಈಗ ಕಿಂಗ್ ಚಾರ್ಲ್ಸ್ III ರೊಂದಿಗಿನ ಡಯಾನಾ ಅವರ ವಿವಾಹ ವಿವಾಹವು 74 ದೇಶಗಳಲ್ಲಿ 750 ಮಿಲಿಯನ್ ಪ್ರೇಕ್ಷಕರನ್ನು ಕಂಡಿತ್ತು.

ಏತನ್ಮಧ್ಯೆ, 2011 ರಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ವಿವಾಹವು ವಿಶ್ವಾದ್ಯಂತ 162 ಮಿಲಿಯನ್ ವೀಕ್ಷಕರನ್ನು ಗಳಿಸಿತು. ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯು WatchTVAbroad.com ನಲ್ಲಿ ನೇರ ಪ್ರಸಾರ ಕಂಡಿತ್ತು.

ರಾಣಿ ಎಲಿಜಬೆತ್ II ಗೆ 96 ವರ್ಷ ವಯಸ್ಸಾಗಿತ್ತು. ಅರಸೊತ್ತಿಗೆಗೆ ವಾರಸುದಾರರಾದ ಪ್ರಿನ್ಸ್ ಚಾರ್ಲ್ಸ್ ಸೇರಿದಂತೆ ನಾಲ್ವರು ಮಕ್ಕಳು ಮತ್ತು ಹಲವು ಮೊಮ್ಮಕ್ಕಳನ್ನು ಅವರು ಅಗಲಿದ್ದರು..

1952ರಲ್ಲಿ ಬ್ರಿಟನ್ ರಾಣಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಅವರು 70 ವರ್ಷಗಳಷ್ಟು ಸುದೀರ್ಘ ಕಾಲ ಸಿಂಹಾಸನ ಅಲಂಕರಿಸಿದ್ದರು. ಬ್ರಿಟನ್ ಅರಸೊತ್ತಿಗೆಯಲ್ಲಿ ಅತೀ ಹೆಚ್ಚು ಕಾಲ ಇದ್ದ ದಾಖಲೆ ಅವರದ್ದು. ವಿಕ್ಟೋರಿಯಾ ರಾಣಿಯ ದಾಖಲೆಯನ್ನೂ ಅವರು ಮುರಿದಿದ್ದರು.

ರಾಣಿ ವಿಕ್ಟೋರಿಯಾ 63 ವರ್ಷಗಳ ಕಾಲ ರಾಣಿಯಾಗಿ ದಾಖಲೆ ಮಾಡಿದ್ದರು. ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಆಳ್ವಿಕೆ ನಡೆಸಿದ ಅರಸರ ಪಟ್ಟಿಯಲ್ಲಿ ಎರಡನೇ ಎಲಿಜಬೆತ್ ಎರಡನೇ ಸ್ಥಾನ ಪಡೆಯುತ್ತಾರೆ. ಬ್ರಿಟನ್ ರಾಣಿಯಾಗಿ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ಲಾಟಿನಂ ಜುಬಿಲಿ ಆಚರಣೆ ಮಾಡಲಾಗಿತ್ತು.

ಇತರೆ ದೇಶಗಳ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು