AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World’s Most Polluted Capital City  ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಜಧಾನಿ ದೆಹಲಿ, ಟಾಪ್ 5 ಮಾಲಿನ್ಯಯುಕ್ತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ

ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಷ್ಟ್ರಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಅಗ್ರಸ್ಥಾನದಲ್ಲಿದ್ದರೆ, ಚಾಡ್ ಎರಡನೇ ಸ್ಥಾನದಲ್ಲಿದೆ. ವರದಿಗಳ ಪ್ರಕಾರ  ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

World's Most Polluted Capital City  ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಜಧಾನಿ ದೆಹಲಿ, ಟಾಪ್ 5 ಮಾಲಿನ್ಯಯುಕ್ತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ
ದೆಹಲಿ ನಗರದಲ್ಲಿನ ವಾಯುಮಾಲಿನ್ಯ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Mar 22, 2022 | 3:26 PM

Share

ದೆಹಲಿ: ಸತತ ಎರಡನೇ ವರ್ಷ ನವದೆಹಲಿ (New Delhi) ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಜಧಾನಿ ನಗರ ಎಂದು ಸ್ಥಾನ ಪಡೆದಿದೆ. ಢಾಕಾ (ಬಾಂಗ್ಲಾದೇಶ), ಎನ್’ಜಮೆನಾ (ಚಾಡ್), ದುಶಾನ್ಬೆ (ತಜಿಕಿಸ್ತಾನ್) ಮತ್ತು ಮಸ್ಕತ್ (ಓಮನ್) ನಂತರದ ಸ್ಥಾನದಲ್ಲಿದೆ. 2021 ರ ವಿಶ್ವ ವಾಯು ಗುಣಮಟ್ಟ  ವರದಿಯು ಈ ಸಂಗತಿಗಳನ್ನು ಬಹಿರಂಗಪಡಿಸಿದೆ. 6,475 ನಗರಗಳಲ್ಲಿನ ಮಾಲಿನ್ಯದ ದತ್ತಾಂಶದ ಸಮೀಕ್ಷೆ 2021 (World Air Quality Report 2021) ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ವಾಯು ಗುಣಮಟ್ಟದ ಮಾನದಂಡವನ್ನು ಪೂರೈಸಲು ಒಂದೇ ಒಂದು ದೇಶವು ಯಶಸ್ವಿಯಾಗಲಿಲ್ಲ. ಕೊವಿಡ್ ವೇಳೆ ಕುಸಿತ ಕಂಡಿದ್ದ ಹೊಂಜು ಮತ್ತೆ ಮರುಕಳಿಸಿದೆ ಎಂದು ವರದಿ ಹೇಳಿದೆ.  ನ್ಯೂ ಕ್ಯಾಲೆಡೋನಿಯಾದ ಗಡಿಭಾಗಗಳು, ಯುಎಸ್  ವರ್ಜಿನ್ ದ್ವೀಪಗಳು ಮತ್ತು ಪೋರ್ಟೊ ರಿಕೊದ ಪ್ರಾಂತ್ಯಗಳು ಮಾತ್ರ ನವೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ PM2.5 ವಾಯು ಗುಣಮಟ್ಟದ ಮಾರ್ಗಸೂಚಿಗಳನ್ನು ಪೂರೈಸಿವೆ. ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಷ್ಟ್ರಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಅಗ್ರಸ್ಥಾನದಲ್ಲಿದ್ದರೆ, ಚಾಡ್ ಎರಡನೇ ಸ್ಥಾನದಲ್ಲಿದೆ. ವರದಿಗಳ ಪ್ರಕಾರ  ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

ಕಳೆದ ವರ್ಷ ತನ್ನ ಮಾರ್ಗಸೂಚಿಗಳನ್ನು ಬದಲಾಯಿಸಿದ ನಂತರ PM2.5 ಎಂದು ಕರೆಯಲ್ಪಡುವ ಸಣ್ಣ ಮತ್ತು ಅಪಾಯಕಾರಿ ವಾಯುಮೂಲಕ ಉಂಟಾಗುವ ಕಣಗಳ ಸರಾಸರಿ ವಾರ್ಷಿಕ ಲೆಕ್ಕವು ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಿಗಿಂತ ಹೆಚ್ಚಿರಬಾರದು ಎಂದು ವಿಶ್ವ ಆರೋಗ್ಯಸಂಸ್ಥೆ ಶಿಫಾರಸು ಮಾಡುತ್ತದೆ.  ಕಡಿಮೆ ಸಾಂದ್ರತೆಯು ಸಹ ಗಮನಾರ್ಹವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ಹೇಳಿದೆ.  ಆದರೆ ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ವಿಸ್ ಮಾಲಿನ್ಯ ತಂತ್ರಜ್ಞಾನ ಕಂಪನಿಯಾದ IQAir ಸಂಗ್ರಹಿಸಿದ ಮಾಹಿತಿಯ ಪ್ರಕಾರ ಸಮೀಕ್ಷೆ ಮಾಡಿದ ನಗರಗಳಲ್ಲಿ ಕೇವಲ ಶೇ 3.4 ಮಾತ್ರ 2021 ರಲ್ಲಿ ಗುಣಮಟ್ಟವನ್ನು ಪೂರೈಸಿದೆ. 93 ನಗರಗಳು ಶಿಫಾರಸು ಮಾಡಿದ ಮಟ್ಟಕ್ಕಿಂತ 10 ಪಟ್ಟು PM2.5 ಮಟ್ಟವನ್ನು ಕಂಡಿವೆ. “ಕಡಿತದಲ್ಲಿ ದೊಡ್ಡ ದಾಪುಗಾಲುಗಳನ್ನು ಮಾಡುತ್ತಿರುವ ಬಹಳಷ್ಟು ದೇಶಗಳಿವೆ” ಎಂದು IQAir ನ ವಾಯು ಗುಣಮಟ್ಟದ ವಿಜ್ಞಾನ ವ್ಯವಸ್ಥಾಪಕ ಕ್ರಿಸ್ಟಿ ಶ್ರೋಡರ್ ಹೇಳಿರುವುದಾಗಿ ರಾಯಿಟರ್ಸ್ ಉಲ್ಲೇಖಿಸಿದೆ. “ಚೀನಾ ಕೆಲವು ದೊಡ್ಡ ಸಂಖ್ಯೆಗಳೊಂದಿಗೆ ಶುರುವಾಗಿದ್ದರೂ ಅವು ಕಾಲಾನಂತರದಲ್ಲಿ ಕಡಿಮೆಯಾಗುತ್ತಲೇ ಇವೆ. ಆದರೆ ಜಗತ್ತಿನಲ್ಲಿ ಇದು ಗಮನಾರ್ಹವಾಗಿ ಕೆಟ್ಟದಾಗುತ್ತಿರುವ ಸ್ಥಳಗಳೂ ಇವೆ ಎಂದು ಅವರು ಹೇಳಿದ್ದಾರೆ. 2021 ರಲ್ಲಿ ಭಾರತದ ಒಟ್ಟಾರೆ ಮಾಲಿನ್ಯದ ಮಟ್ಟವು ಹದಗೆಟ್ಟಿದೆ ಮತ್ತು ನವದೆಹಲಿ ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಜಧಾನಿಯಾಗಿ ಉಳಿದಿದೆ ಎಂದು ಅಂಕಿಅಂಶಗಳು ತೋರಿಸಿವೆ.

ಬಾಂಗ್ಲಾದೇಶವು ಅತ್ಯಂತ ಕಲುಷಿತ ದೇಶವಾಗಿದ್ದು, ಹಿಂದಿನ ವರ್ಷಕ್ಕಿಂತ ಬದಲಾಗಿಲ್ಲ, ಆದರೆ ಚಾಡ್ ಮೊದಲ ಬಾರಿಗೆ ಎರಡನೇ ಸ್ಥಾನದಲ್ಲಿದೆ. 2014 ರಿಂದ ಮಾಲಿನ್ಯದ ವಿರುದ್ಧ ಸಮರ ಸಾರಿರುವ ಚೀನಾ, 2021 ರಲ್ಲಿ PM2.5 ಶ್ರೇಯಾಂಕದಲ್ಲಿ 22 ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಹಿಂದಿನ ವರ್ಷದ 14 ನೇ ಸ್ಥಾನದಿಂದ ಕೆಳಗಿಳಿದೆ, ಸರಾಸರಿ ಲೆಕ್ಕವು ವರ್ಷದಲ್ಲಿ ಸ್ವಲ್ಪಮಟ್ಟಿಗೆ 32.6 ಮೈಕ್ರೋಗ್ರಾಂಗಳಷ್ಟು ಸುಧಾರಿಸಿದೆ ಎಂದು IQAir ಹೇಳಿದೆ. ಕ್ಸಿನ್‌ಜಿಯಾಂಗ್‌ನ ವಾಯುವ್ಯ ಪ್ರದೇಶದ ಹೋಟಾನ್ ಚೀನಾದ ಅತ್ಯಂತ ಕೆಟ್ಟ-ಕಾರ್ಯನಿರ್ವಹಣೆಯ ನಗರವಾಗಿದೆ. ಸರಾಸರಿ PM2.5 ರೀಡಿಂಗ್‌ಗಳು 100 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ಆಗಿದ್ದು , ಇವು ಹೆಚ್ಚಾಗಿ ಮರಳು ಬಿರುಗಾಳಿಯಿಂದ ಉಂಟಾಗುತ್ತದೆ. ಇದು ಭಾರತದ ಭಿವಾಡಿ ಮತ್ತು ಗಾಜಿಯಾಬಾದ್‌ನಿಂದ ಹಿಂದಿಕ್ಕಲ್ಪಟ್ಟ ನಂತರ ವಿಶ್ವದ ಅತ್ಯಂತ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.

ಇದನ್ನೂ ಓದಿ: LPG Cylinder Price Hike: ಬೆಲೆ ಏರಿಕೆ ಶಾಕ್! ಗೃಹ ಬಳಕೆಯ LPG ಸಿಲಿಂಡರ್ ದರ ಹೆಚ್ಚಳ

Published On - 2:57 pm, Tue, 22 March 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?