NSE ವಂಚನೆ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ (Chitra Ramakrishna) ಅವರನ್ನು ಜಾರಿ ನಿರ್ದೇಶನಾಲಯ (ED) ಇಂದು ( ಗುರುವಾರ) ಬಂಧಿಸಿದೆ. ಅವರನ್ನು ಇಂದು ಮುಂಜಾನೆ ವಿಶೇಷ ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಫೆಬ್ರವರಿ 11 ರಂದು ರಾಮಕೃಷ್ಣ ಮತ್ತು ಇತರರ ವಿರುದ್ಧ ಆನಂದ್ ಸುಬ್ರಮಣಿಯನ್ ಅವರನ್ನು ಮುಖ್ಯ ಕಾರ್ಯತಂತ್ರದ ಸಲಹೆಗಾರರನ್ನಾಗಿ ಮತ್ತು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿಗೆ ಸಲಹೆಗಾರರಾಗಿ ಮರು ನೇಮಕ ಮಾಡುವಲ್ಲಿ ಆಡಳಿತದ ಲೋಪದೋಷಗಳನ್ನು ಆರೋಪಿಸಲಾಗಿದೆ.
ಫೆಬ್ರುವರಿ 11ಕ್ಕೆ ಸೆಬಿ ಕಳುಹಿಸಿದ ಆದೇಶದಲ್ಲಿ ಹೀಗೆ ಹೇಳಲಾಗಿದೆ. ಎನ್‌ಎಸ್‌ಇಯಲ್ಲಿ ಸಹ-ಸ್ಥಳ ಸೌಲಭ್ಯಗಳ ಸಮಸ್ಯೆಯ ತನಿಖೆಯ ಸಮಯದಲ್ಲಿ ಸೆಬಿ ಕೆಲವು ಸಾಕ್ಷ್ಯವನ್ನು ಪತ್ತೆ ಹಚ್ಚಿದೆ. ಇದರಿಂದ ತಿಳಿದು ಬಂದಿರುವುದೇನೆಂದರೆ ಚಿತ್ರಾ ರಾಮಕೃಷ್ಣ ಅವರು ಎನ್ಎಸ್ಇ ನಿರ್ದಿಷ್ಟ ಆಂತರಿಕ ಗೌಪ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂಸ್ಥೆಯ ರಚನೆ, ಲಾಭಾಂಶ ಮಾಹಿತಿ, ಆರ್ಥಿಕ ಫಲಿತಾಂಶ,ಮಾನವ ಸಂಪೂನ್ಮೂಲ ನೀತಿ, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು, ಪ್ರತಿಕ್ರಿಯೆಯಿಂದ ಹಿಡಿದು ನಿಯಂತ್ರಣಗಳ ವರೆಗೆ ಎಲ್ಲವನ್ನೂ ಅಪರಿಚಿತ ವ್ಯಕ್ತಿಯೊಂದಿಗೆ ಇಮೇಲ್ ಮೂಲಕ 2014- 2016ರಲ್ಲಿ ಹಂಚಿಕೊಂಡಿದ್ದಾರೆ. ಹಿಮಾಲಯದಲ್ಲಿ ವಾಸಿಸುತ್ತಿರುವ ಯೋಗಿಯೊಬ್ಬರೊಂದಿಗೆ ಇ ಮೇಲ್ ಮೂಲಕ ಎನ್ಎಸ್ಇಯ ಗೌಪ್ಯ ಮಾಹಿತಿ ಹಂಚಿ ಕೊಂಡ ಆರೋಪ ಚಿತ್ರಾ ಮೇಲಿದೆ. ಅಂದ ಹಾಗೆ ಇಲ್ಲಿನ ಯೋಗಿಯೇ ಆನಂದ್ ಸುಬ್ರಮಣಿಯಮ್ ಎಂದು ಶಂಕಿಸಲಾಗಿದೆ. ಫೆಬ್ರುವರಿ 25ಕ್ಕೆ ಸಿಬಿಐ ಸುಬ್ರಣಿಯನ್ ಅವರನ್ನು ಬಂಧಿಸಿತ್ತು. ಸುಬ್ರಮಣಿಯನ್ ಅವರನ್ನು ಫಾರೆನ್ಸಿಕ್ ಆಡಿಟ್ ನಲ್ಲಿ ಯೋಗಿ ಎಂದು ಉಲ್ಲೇಖಿಸಲಾಗಿದೆ ಎಂಬ ಆರೋಪವಿದ್ದರೂ ತಮ್ಮ ಅಂತಿಮ ವರದಿಯಲ್ಲಿ ಸೆಬಿ ಈ ಆರೋಪವನ್ನು ನಿರಾಕರಿಸಿತ್ತು.
Published On - 4:24 pm, Thu, 14 July 22